Home » ಲೈವ್ ನ್ಯೂಸ್ » ಪುರಸಭೆ: ಡೇನಲ್ಮ್ ಯೋಜನೆಯಡಿ ಅರ್ಜಿ ಆಹ್ವಾನ

ಪುರಸಭೆ: ಡೇನಲ್ಮ್ ಯೋಜನೆಯಡಿ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ.25.ಜನವರಿ.26:- ಕೇಂದ್ರ ಸರ್ಕಾರ ಪುರಷ್ಕøತ “ಅಮೃತ ಮಿತ್ರ 2.0” ಯೋಜನೆಯಡಿ ಪುರಸಭೆ ಹುಮನಾಬಾದ ಡೇ-ನಲ್ಮ್ ವಿಭಾಗದಡಿಯಲ್ಲಿ ತಾಂತ್ರಿಕೇತರ (ನಾನ್-ಟೆಕ್ನಿಕಲ್) ಚಟುವಟಿಕೆಗಳ ನಿರ್ವಹಣೆಗಾಗಿ ಡೇ-ನಲ್ಮ್ ಯೋಜನೆಯಡಿ ರಚಿಸಲ್ಪಟ್ಟ ಮಹಿಳಾ ಸ್ವ-ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹುಮನಾಬಾದ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮೃತ ಮಿತ್ರ 2.0 ಯೋಜನೆಯು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದು ಇವುಗಳ ಮುಖ್ಯ ಉದ್ದೇಶ ನೀರಿನ ಗುಣಮಟ್ಟ ಪರೀಕ್ಷಿಸುವುದು, ಉದ್ಯಾನವನಗಳ ನಿರ್ವಹಣೆ ಹಾಗೂ ನಗರದ ಸೌಂದರ್ಯವನ್ನು ವೃದ್ಧಪಡಿಸುವುದಾಗಿದೆ.

ಆಸಕ್ತಿ ಹೊಂದಿದ ಸ್ವ ಸಹಾಯ ಸಂಘವು ದಿನಾಂಕ: 31-01-2026 ರೊಳಗಾಗಿ ಸಂಘದ ನಿಗದಿತ ದಾಖಲೆಗಳೊಂದಿಗೆ ಮುಖ್ಯಾಧಿಕಾರಿ ಪುರಸಭೆ ಹುಮನಾಬಾದ ಅವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹುಮನಾಬಾದ ಪುರಸಭೆಯ ಡೇ-ನಲ್ಮ್ ವಿಭಾಗದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology