|

ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಮೀಕ್ಷೆಯ ಎರಡನೇ ಹಂತದ ತರಬೇತಿ:

ಸರಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ಶಾಲಾ ವಿಭಾಗ ಬಸವಕಲ್ಯಾಣದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಮೀಕ್ಷೆಯ ಎರಡನೇ ಹಂತದ ತರಬೇತಿಯನ್ನು ಮಾನ್ಯ ತಹಶೀಲ್ದಾರರಾದ ಡಾ.ದತ್ತಾತ್ರೆ ಗಾದಾ ಅವರು  ಮಾತನಾಡುತ್ತಾ ” ಸರಕಾರದ ನಿರ್ದೇಶನದಂತೆ ನಾವೇಲ್ಲರು ಸಮೀಕ್ಷೆ ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ.ಈಗಾಗಲೇ ಆಶಾ ಕಾರ್ಯಕರ್ತೆಯರನ್ನು ಮನೆ ಮನೆಗೆ ಭೇಟಿನೀಡಿ ಏನು ಪ್ರಶ್ನೆಗಳಿವೆ ಎಂಬುದನ್ನು ಮುಂಚಿತವಾಗಿ ತಿಳಿಸಲಾಗಿದೆ.ಸಮೀಕ್ಷೆದಾರರಿಗೆ ಬೇಗ ಕಾರ್ಯನಿರ್ವಹಿಸಲು ಅನುಕೂಲ ಆಗುತ್ತದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಗಣತಿಯ ಮೊತ್ತ ಬಂದಿರುತ್ತದೆ ಕೆಲವೆ ದಿನಗಳಲ್ಲಿ ಹಣ ತಮ್ಮ ಖಾತೆಗೆ ಜಮಾ ಆಗುತ್ತದೆ. ಗಣತಿ ಸಮೀಕ್ಷೆಯಲ್ಲಿ ಆಗುವ ಸಮಸ್ಯೆಗಳಿಗೆ ಮಾಸ್ಟರ್ ಟ್ರೈನರ್ ಗಳನ್ನು ಸಂಪರ್ಕಿಸಿ ಎಂದರು.

ಈ ತರಬೇತಿಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಗಿರಿಧರ ಧಾನೂರೆ ಗಣತಿ ಸಮೀಕ್ಷೆಯು ಹಬ್ಬ ದಿನಗಳಲ್ಲಿ ಮಾಡಲು ಸೂಚಿಸಿರುತ್ತಾರೆ. ಸರಕಾರಿ ನೌಕರರಾದ ನಾವು 24*7 ಕೆಲಸ ಮಾಡಲು ಸಿದ್ದರಾಗರಿಬೇಕಾಗಿದೆ ಎಂದು  ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ತರಬೇತಿಯಲ್ಲಿ ಶಿವಕುಮಾರ ಜಡಗೆ, ಸಂಜೀವಕುಮಾರ ನಡುಕರ, ಪ್ರವೀಣ ಸೂರ್ಯವಂಶಿ,ರಮೇಶ ಭಾತಂಭ್ರೆ, ವೀರಭದ್ರಪ್ಪ  ಹಾಗೂ ಬಸವಕಲ್ಯಾಣ ಪೂರ್ವ ಮತ್ತು ಪಶ್ಚಿಮ ಸಮೂಹ ಸಂಪನ್ಮೂಲ ಕೇಂದ್ರದ ವಿವಿಧ ಶಾಲೆಗಳ ಗಣತಿ ಸಮೀಕ್ಷೆದಾರರು ಉಪಸ್ಥಿತರಿದ್ದರು.

Similar Posts

Leave a Reply

Your email address will not be published. Required fields are marked *