10/08/2025 6:48 PM

Translate Language

Home » ಲೈವ್ ನ್ಯೂಸ್ » ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಪ್ರಾರಂಭ.

ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಪ್ರಾರಂಭ.

Facebook
X
WhatsApp
Telegram

ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ  ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ನೂತನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.

ಸದ್ಯಕ್ಕೆ ಕೇವಲ ಮೂರು ಮೆಟ್ರೋ ರೈಲುಗಳ ಮೂಲಕವೇ ಬಿಎಂಆರ್ಸಿಎಲ್ ಸೇವೆ ಆರಂಭಿಸಲು ನಿರ್ಧರಿಸಿದೆ. ಚಾಲಕರಿಲ್ಲದ (ಡ್ರೈವರ್‌ಲೆಸ್) ರೈಲುಗಳು ಇನ್ನೂ ಲಭ್ಯವಾಗದ ಕಾರಣ, ಹಳದಿ ಮಾರ್ಗದ ಸಂಪೂರ್ಣ ಸಾಮರ್ಥ್ಯದಲ್ಲಿ ಸಂಚಾರ ಪ್ರಾರಂಭಿಸಲು ಸಮಯ ಹಿಡಿಯಲಿದೆ.

ಬುಧವಾರದಿಂದ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಪ್ರಾರಂಭವಾಗಲಿದ್ದು, ಪ್ರಾರಂಭದಲ್ಲಿ 25 ನಿಮಿಷಕ್ಕೊಮ್ಮೆ ರೈಲು ಸಂಚಾರ ನಡೆಯಲಿದೆ.

ಆರ್‌.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದ ಒಟ್ಟು ಉದ್ದ 19.15 ಕಿಲೋಮೀಟರ್‌ ಆಗಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗಕ್ಕೆ ಅಗತ್ಯವಿರುವ 15 ರೈಲುಗಳ ಪೈಕಿ ಪ್ರಸ್ತುತ ಮೂರು ರೈಲುಗಳು ಮಾತ್ರ ಲಭ್ಯ. ಪ್ರಾರಂಭದಲ್ಲಿ ದಿನಕ್ಕೆ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹಳದಿ ಮೆಟ್ರೋ ದರ ಸ್ಟೇಜ್

ಪ್ರತೀ ನಿಲ್ದಾಣದ ಟಿಕೆಟ್‌ ದರ ಪಟ್ಟಿ



ಆರ್ ವಿ ರಸ್ತೆಯಿಂದ ರಾಗಿಗುಡ್ಡದ ವರೆಗೆ 10 ರೂಪಾಯಿ.


ಆರ್ ವಿ ರಸ್ತೆ-ಜಯದೇವ 10 ರೂಪಾಯಿ.
ಆರ್ ವಿ ರಸ್ತೆ- BTM ಲೇಔಟ್ 20 ರೂ.
ಆರ್ ವಿ ರಸ್ತೆ -ಬೊಮ್ಮನಹಳ್ಳಿ 30 ರೂ.
ಆರ್ ವಿ ರಸ್ತೆ -ಕೂಡ್ಲೂಗೇಟ್ 40 ರೂ.
ಆರ್ ವಿ ರಸ್ತೆ -ಸಿಂಗಸಂದ್ರ 50 ರೂ.
ಆರ್ ವಿ ರಸ್ತೆ -ಎಲೆಕ್ಟ್ರಾನಿಕ್ ಸಿಟಿ 60 ರೂ.
ಆರ್ ವಿ ರಸ್ತೆ -ಬೊಮ್ಮಸಂದ್ರ 60 ರೂ.
ಸಿಲ್ಕ್ ಬೋರ್ಡ್- ಬೊಮ್ಮಸಂದ್ರ 60 ರೂ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD