Home » ಲೈವ್ ನ್ಯೂಸ್ » ಹಡಪದ ಸಮಾಜಕ್ಕೆ ಈ ಬಾರಿ ನಿಗಮಕ್ಕೆ ಮಾತ್ರ ಹಣ ಮೀಸಲಿಡುವಂತೆ ಒತ್ತಾಯ

ಹಡಪದ ಸಮಾಜಕ್ಕೆ ಈ ಬಾರಿ ನಿಗಮಕ್ಕೆ ಮಾತ್ರ ಹಣ ಮೀಸಲಿಡುವಂತೆ ಒತ್ತಾಯ

Facebook
X
WhatsApp
Telegram

2026 ರ ಸಾಲಿನ‌ ರಾಜ್ಯ  ಬಜೆಟ್‌ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ಸಿಗಲಿ ಡಾ. ಎಂ.ಬಿ ಹಡಪದ ಒತ್ತಾಯ,*                                       ‌                                                                                           *ಕಲಬುರಗಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಮಾಚ್೯-6 ರಂದು  ಮಂಡಿಸಲಿರುವ   ಪ್ರಸಕ್ತ ಸಾಲಿನ ಈ  2026 -27 ನೇ ಸಾಲಿನ ರಾಜ್ಯ ಕಾಂಗ್ರೆಸ್ ಸರ್ಕಾರದ   ಬಜೆಟ್ ನಲ್ಲಿ  ಹಡಪದ ಅಪ್ಪಣ್ಣ ಸಮಾಜಕ್ಕೆ ನ್ಯಾಯ ಸಿಗಲಿ. ? ಈಗಾಗಲೇ ನಿಗಮ ಮಂಡಳಿ ಪೂರ್ಣ  ಪ್ರಮಾಣದಲ್ಲಿ ಜಾರಿಗೆ ಬಂದಿದ್ದು.ಈ ನಿಗಮಕ್ಕೆ ೧೦೦ಕೋಟಿ ರೂ‌.ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ. ಈ ನಿಗಮದಿಂದ ಸಮಾಜದ ಜನತೆಗೆ ಆಸರೆಯಾಗಲಿ.? ನಿಗಮ ಮುಖಾಂತರ ಹಡಪದ ಅಪ್ಪಣ್ಣ ಕ್ಷೌರಿಕರಿಗೆ ಲೋನ್ (ಸಾಲ) ಸಿಗಲಿ. ಎಂಬುದು ಈ ಸಮಾಜದ ಆಸೆ.,    ರಾಜ್ಯದ 
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗು ಡಿಸಿಎಂ. ಡಿ.ಕೆ ಶಿವಕುಮಾರ್ ಸಾಹೇಬ್ರು ಮತ್ತು ಅನೇಕ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು. ಶಾಸಕರು. ವಿಧಾನ ಪರಿಷತ್ ಸದಸ್ಯರು. ಈ ಹಡಪದ ಅಪ್ಪಣ್ಣ ಸಮಾಜದ  ಬಹು ದಿನಗಳ ಬೇಡಿಕೆಯನ್ನು ಇಡೇರಿಸಿ. ಮತ್ತು ಈ ಕಾಯಕ ಸಮಾಜವನ್ನು   ಕಡೆಗಣಿಸದ್ದೀರಿ.?  ಈ ಸಮಾಜಕ್ಕೆ ನ್ಯಾಯ ಸಿಗಲೇಬೇಕು…? ಹಾಗೇಯೇ  ಬಸವಕಲ್ಯಾಣದಲ್ಲಿ  ಇರುವ  ಬಸವಣ್ಣನವರ ಗವಿ(ಅರಿವಿನ) ಮನೆಯ ಪಕ್ಕದಲ್ಲಿ   ಹಡಪದ ಅಪ್ಪಣ್ಣ ನವರ ಗವಿ( ಅರಿವಿನ ಮನೆಯನ್ನು)  ಬಿಕೆಡಿಬಿ ಪ್ರಾಧಿಕಾರಕ್ಕೆ  ಸೇರಿಸಿ ಅಭಿವೃದ್ಧಿ ಪಡಿಸಬೇಕು.

ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ  ಗ್ರಾಮದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ‌ಹಾಗೂ ದೇಗಿನಾಳ  ಗ್ರಾಮದಲ್ಲಿ ಇರುವ  ಹಡಪದ ಲಿಂಗಮ್ಮನವರ ಜನ್ಮಸ್ಥಳ ವನ್ನು ಬಸವನ ಬಾಗೇವಾಡಿ  ಪ್ರಾಧಿಕಾರಕ್ಕೆ   ಸೇರಿಸಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಲಾಗುವುದು‌. 


ಕಲಬುರಗಿ ಜಿಲ್ಲೆಯ  ವಿಶ್ವ  ವಿದ್ಯಾಲಯದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠದ  ಪ್ರತ್ಯೇಕ ಕಟ್ಟಡದ ಅಭಿವೃದ್ಧಿ ಗೇ 10. ಕೋಟಿ ರೂಪಾಯಿಗಳು ನೀಡಬೇಕು.  ಮತ್ತು  ಈ  ಹಡಪದ ಅಪ್ಪಣ್ಣ ಸಮಾಜಕ್ಕೆ ಪರ್ಯಾಯ ಪದವಾದ ನಾಯಿಂದ ಉಪ ಜಾತಿಯನ್ನು  ಮುಂದುವರೆಸಿಕೊಂಡು ಹೋಗುವ ಕೆಲಸ ಆಗಬೇಕು.

ಈ ನಾಯಿಂದ ಉಪ ಜಾತಿಯಲ್ಲಿ ಬರುವ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ  ರಾಜ್ಯಾದ್ಯಂತ  ಅನೇಕ ಗ್ರಾಮೀಣ ಭಾಗದಲ್ಲಿ ಇರುವ  ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ   ”  ಕ್ಷೌರ ಕುಟೀರ ಗಳು’  ನೀಡುವಂತೆ, ಮತ್ತು  ಸಮಾಜದ ಜನತೆಯು ಯಾವುದೇ ಗ್ರಾಹಕರು ಬರಲಿ ಅವರಿಗೆ ಯಾವುದೇ ರೋಗ ರುಜಿಣಗಳು ರೋಗದ ಲಕ್ಷಣಗಳು ಇದ್ದರೊ ಸಹ ಅವರಿಗೆ ಕ್ಷೌರ ಸೇವೆ ಸಲ್ಲಿಸುತ್ತಾರೆ .ಈ  ಕ್ಷೌರಿಕ ಕುಟುಂಬಕ್ಕೆ ಈ  ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ   ಆರೋಗ್ಯ  ಹಿತದೃಷ್ಟಿಯಿಂದ  ಆರೋಗ್ಯ ವಿಮೆ .ಮತ್ತು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯಲು ಆರೋಗ್ಯ ಇಲಾಖೆಯ ಅಡಿಯಲ್ಲಿ  ಸ್ಮಾರ್ಟ್ ಕಾರ್ಡ್  ನೀಡುವಂತೆ ಮನವಿ‌.  ಮತ್ತು  ಈ ಹಡಪದ ಅಪ್ಪಣ್ಣ  (ಕ್ಷೌರಿಕ) ಸಮಾಜಕ್ಕೆ  ಅನ್ಯಾಯ ವಾಗದಿರಲಿ.? 

  ಇನ್ನು ಈ ಹಡಪದ   ಸಮುದಾಯದ   ಬೇಡಿಕೆಯನ್ನು ಪರಿಗಣಿಸಿ ಇದೇ ಚಳಿಗಾಲದ ಅಧಿವೇಶನದಲ್ಲಿ ಸಹ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ತಾಲೂಕಿನ ಶಾಸಕರಾದ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ನವರು ಸಹ ಸದನದಲ್ಲಿ ಈ ಸಣ್ಣ ಸಣ್ಣ  ಸಮುದಾಯದ ಪರವಾಗಿ ವಿಧಾನ ಸಭೆಯ ಕಲಾಪದಲ್ಲಿ ಗಟ್ಟಿ ಧ್ವನಿಯಾಗಿ  ಈ ಸಮಾಜಕ್ಕೆ ಮತ್ತು ಈ ಹಡಪದ ಅಪ್ಪಣ್ಣ ನಿಗಮಕ್ಕೆ ಹಣ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರುವ ಮೂಲಕ  ಚರ್ಚೆ ಮಾಡಿದರು. ಮತ್ತು ಇನ್ನೂ   ಅನೇಕ ಶಾಸಕರು ಈ ಸಮಾಜದ ಪರವಾಗಿ ಧ್ವನಿ ಯಾಗದೆ ಅನ್ಯಾಯ ವಾಗಿದೆ.?   ಬರಿ  ನಿಮಗೆ ಸಮಾಜದ  ಮತಗಳು  ಚುನಾವಣೆಯಲ್ಲಿ ಪಡೆದು .ಈಗ ಈ ಸಮಾಜಕ್ಕೆ ಮೀಸಲಾತಿ ನೀಡಿದೆ ಇದ್ದರೆ ಹೇಗೆ.? ಈ ಸಮಾಜವನ್ನು  ಪರಿಗಣಿಸಿ.ಈ ಹಿಂದುಳಿದ ಸಮಾಜವನ್ನು ಎಸ್ಸಿ ಗೇ ಅಥವಾ ಎಸ್ಟಿಗೆ ಸೇರಿಸುವ ಕೆಲಸ ರಾಜ್ಯ ಸರ್ಕಾರ ಮಾಡಲಿ.?

ಈ  ಸಣ್ಣ ಸಣ್ಣ  ಸಮುದಾಯವು  ಅಭಿವೃದ್ದಿಯಗೆ ನ್ಯಾಯ ಸಿಗಲಿ. ತಾವು ಇದೇ ಮಾರ್ಚ-೬ ರಂದು ಮಂಡನೆ ಮಾಡಲಿರುವ ರಾಜ್ಯ ಬಜೆಟ್ ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ,  ಅನ್ಯಾಯ ಆಗದಿರಲಿ‌.? 
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನತೆಯ ಹರಿಕಾರ ಎಂಬುದು ಎಲ್ಲರ ಮಟ್ಟಿಗೆ ಹುಸಿಯಾಗಬಾರದು ಎಂದು  ರಾಜ್ಯ ಸರ್ಕಾರಕ್ಕೆ   ಕಲಬುರ್ಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಸಂಘಟನಾ ಕಾರ್ಯದರ್ಶಿಗಳು- ಡಾ.ಮಲ್ಲಿಕಾರ್ಜುನ ಬಿ‌ ಹಡಪದ ಸುಗೂರ ಎನ್ ಒತ್ತಾಯಿಸಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology