Home » ಲೈವ್ ನ್ಯೂಸ್ » ಹಡಪದ ಅಭಿವೃದ್ಧಿ ನಿಗಮಕ್ಕೆ ಬಜೆಟ್ ನಲ್ಲಿ ಹಣ ನೀಡದೆ ಅನ್ಯಾಯ ಮಾಡಿದ ರಾಜ್ಯ ಸರ್ಕಾರ

ಹಡಪದ ಅಭಿವೃದ್ಧಿ ನಿಗಮಕ್ಕೆ  ಬಜೆಟ್ ನಲ್ಲಿ ಹಣ ನೀಡದೆ ಅನ್ಯಾಯ ಮಾಡಿದ ರಾಜ್ಯ ಸರ್ಕಾರ

Facebook
X
WhatsApp
Telegram

ಚಿತ್ತಾಪುರ.06.ಮಾರ್ಚ್.26: 2026 ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ- ಡಾ.ಎಂ.ಬಿ ಹಡಪದ ಸುಗೂರ ಎನ್ ಆಕ್ರೋಶ*.ಕಲಬುರಗಿ*:-  ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ 2026-27  ರ ಸಾಲಿನ ಈ ವರ್ಷದ  ಬಜೆಟ್ ನಲ್ಲಿ  ಹಡಪದ ಅಪ್ಪಣ್ಣ ಸಮಾಜದ ಜನತೆಗೆ ನಮ್ಮ ಸಮುದಾಯ ಮಟ್ಟಿಗೆ ನಿರಾಶಾಧಾಯಕವಾಗಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಡಾ ಮಲ್ಲಿಕಾರ್ಜುನ ಬಿ‌ ಹಡಪದ ಸುಗೂರ ಎನ್ ಅವರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು  12 ನೇ ಶತಮಾನದ ಸಾಂಸ್ಕೃತಿಕ ನಾಯಕ( ವಿಶ್ವಗುರು)  ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾದ ಶರಣ   ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ.? ಮಾಡಿದ್ದು ಸರಿಯೇ.?   ಎಂಬ ಪ್ರಶ್ನೆ ಜನತೆಗೆ ಕಾಡುತ್ತಿದೆ.  ಈ 2026 ರ ರಾಜ್ಯ ಬಜೆಟ್ ನಲ್ಲಿ ನಮ್ಮ ಸಮುದಾಯ ಇಟ್ಟುಕೊಂಡ ನಿರೀಕ್ಷೆ ಹುಸಿಯಾಗಿದೆ. ಎಂದರು.         ‌                                                                                                         ‌ ಹಡಪದ ಅಪ್ಪಣ್ಣ ಸಮಾಜದ  ಪ್ರತ್ಯೇಕ   ಅಭಿವೃದ್ದಿ ನಿಗಮ ಮಂಡಳಿ ಈಗಾಗಲೇ  ಪೂರ್ಣಪ್ರಮಾಣದಲ್ಲಿ ಜಾರಿಗೆ ತಂದರು  ಈ ನಿಗಮಕ್ಕೆ  ನಯಾ ಪೈಸೆ  ಹಣ ನೀಡದೆ  ಕಡೆಗಣಿಸಿದ್ದಾರೆ. ಮತ್ತು ಕಲಬುರಗಿ ಜಿಲ್ಲೆಯ ವಿಶ್ವ ವಿದ್ಯಾಲಯದಲ್ಲಿ ಇರುವ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠದ ಪ್ರತ್ಯೇಕ ಕಟ್ಟಡಕ್ಕೆ  ನಯಾ ಪೈಸೆ  ಹಣ ನೀಡದೆ ಅನ್ಯಾಯ, ಇದಕ್ಕೂ ಅನುದಾನ ಕೊಟ್ಟಿಲ್ಲ.ಹೆಸರಿಗೆ ಮಾತ್ರ ವಿವಿ ಹಡಪದ ಅಪ್ಪಣ್ಣ ಪೀಠದ ಸ್ಥಾನಮಾನ ಕೊಡಲಾಗಿದೆ. ಪೂರಕ ಅಗತ್ಯತೆಗಳೇ ಒದಗಿಸಿಲ್ಲ, ಇನ್ನು ಈ ಬೀದರ್  ಜಿಲ್ಲೆಯ  ಬಸವಕಲ್ಯಾಣ ತಾಲೂಕಿನಲ್ಲಿ  ಇರುವ ಬಸವಣ್ಣನವರ ಅರಿವಿನ ಮನೆಯ (ಗವಿ) ಪಕ್ಕದಲ್ಲಿ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ ಇದೆ ಈ ಗವಿಯನ್ನು ಸಹ ಅಭಿವೃದ್ಧಿ ಪಡಿಸಲು ಬಿ.ಕೆ.ಡಿ‌ ಬಿ ಗೇ ಸೇರ್ಪಡೆ ಮಾಡಿ ಎಂದು ಮನವಿ ಪತ್ರ ಸಲ್ಲಿಸಿದ್ದರು.ಈ ಸಮಾಜದ  ಅಭಿವೃದ್ಧಿಯ  ನಿರ್ಮಾಣವೂ ಕಡೆಗಣಿಸಲಾಗಿದೆ.
ಮತ್ತು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಬರುವ  ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಮಸಬಿನಾಳ ಗ್ರಾಮ.ಹಾಗೂ ಹಡಪದ ಲಿಂಗಮ್ಮ ನವರ ದೇಗಿನಾಳ ಗ್ರಾಮ ವನ್ನು ಅಭಿವೃದ್ಧಿ ಪಡಿಸಲು  ಬಸವನ ಬಾಗೇವಾಡಿ  ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿಲು ನಿರಾಕರಣೆ  ಯಾಗಿದೆ.  ? ಹಾಗೆ  ಹಡಪದ ಅಪ್ಪಣ್ಣ ಸಮಾಜವನ್ನು ಎಸ್ಸಿ ಗೇ ಅಥವಾ ಎಸ್ಟಿಗೇ ಸೇರ್ಪಡೆ ಮಾಡಲು ಸಹ ಹಿಂದೇಟು ಹಾಕಿದೆ ಕಾಂಗ್ರೆಸ್ ಸರ್ಕಾರ.? ಈ ಹಡಪದ ಅಪ್ಪಣ್ಣ (ಕ್ಷೌರಿಕ )  ಸಮಾಜದ ಕಾಯಕ ಬಂಧುಗಳಿಗೆ ಜಾತಿ ನಿಂದನೆ ಮಾಡುವ ವ್ಯಕ್ತಿಗಳಿಗೆ ಕಾನೂನು ಪ್ರಕಾರ “ಅಟ್ರಾಸಿಟಿ ‘ಕಾನೂನು ಜಾರಿಗೆ ತರಲು ಸಹ ಹಿಂದೇಟು ಹಾಕಿದ್ದು ಸರಿಯೇ.?  ಈ ಹಡಪದ ಅಪ್ಪಣ್ಣ  ಸಮಾಜದ  ಅಭಿವೃದ್ಧಿ ನಿಗಮಕ್ಕೆ ಹಣ ನೀಡಿದೆ ಇರುವುದು ನೋವಿನ ಸಂಗತಿಯಾಗಿದೆ. ಈ ಸಮಾಜದ
ಸುಧಾರಣೆಗೂ ಹಣ ಒದಗಿಸಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ   ಒಟ್ಟಿನಲ್ಲಿ ನಮ್ಮ  ಹಡಪದ ಅಪ್ಪಣ್ಣ  ಸಮಾಜಕ್ಕೆ ಅನ್ಯಾಯ
ಮಾಡಲಾಗಿದೆ ಎಂದು ದೂರಿದ್ದಾರೆ.  ಕೇಳಿದ್ದೂ, ನಿರ್ಲಕ್ಷಿಸಿ. ರಾಜ್ಯಾದ್ಯಂತ ಇರುವ ಸಮಸ್ತ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜಕ್ಕೆ ಅನ್ಯಾಯದ ಮೇಲೆ ಅನ್ಯಾಯ ವಾಗಿದೆ.?  ಮತ್ತು ಈ ಸಮಾಜದ ಬಹು ದಿನಗಳ ಹೋರಾಟದ ಫಲಕ್ಕೊ ಮತ್ತು ಈ ಸಮಾಜದ  ಅಭಿವೃದ್ದಿಗೆ  ಅನ್ಯಾಯ ಮುಂದುವರೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನತೆಯ ಹರಿಕಾರ ಎಂಬುದು  ಈಗ ನಮ್ಮ ಸಮಾಜದ  ಮಟ್ಟಿಗೆ ಹುಸಿಯಾಗಿದೆ ಎಂದು ಟೀಕಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology