13/08/2025 11:39 PM

Translate Language

Home » ಲೈವ್ ನ್ಯೂಸ್ » ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಕಾರ್ಯಾದೇಶ ಪ್ರಮಾಣ ಪತ್ರ, ಗುರುತಿನ ಚೀಟಿ ವಿತರಣೆ

ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಕಾರ್ಯಾದೇಶ ಪ್ರಮಾಣ ಪತ್ರ, ಗುರುತಿನ ಚೀಟಿ ವಿತರಣೆ

Facebook
X
WhatsApp
Telegram

ಸ್ವಚ್ಛ, ಸುಂದರ ನಗರವಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ: ಪಾಲಿಕೆ ಆಯುಕ್ತ ಜುಬೀನ್ ಮೊಹಪಾತ್ರ ಸಲಹೆ.


ರಾಯಚೂರು.13.ಆಗಸ್ಟ್.25:- ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ವಿವಿಧ ಘಟಕಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ರಾಯಚೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ ಅವರು ಹೇಳಿದರು.

ಆಗಸ್ಟ್ 13ರ ಬುಧವಾರ ದಂದು ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸ್ವಚ್ಛ ಭಾರತ ಅಭಿಯಾನ 2.0 ಅಡಿ ಐಇಸಿ ಚಟುವಟಿಕೆಗಳ ಕುರಿತು ಸಮುದಾಯ ಸಂಚಾಲಕರ ಹುದ್ದೆಗೆ ಆಯ್ಕೆಯಾದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕಾರ್ಯಾದೇಶ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ನೀಡಿ ಅವರು ಮಾತನಾಡಿದರು.

ಸಹಕಾರ ಸಂಘದ ಸದಸ್ಯರು ಸದಸ್ಯರೊಂದಿಗೆ ಕೆಲಸ ಮಾಡುವುದು ಸಾಮಾನ್ಯ ವಿಚಾರವಲ್ಲ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪಾಲಿಕೆಯ ವಿವಿಧ ತೆರಿಗೆ ಅಚ್ಚುಕಟ್ಟಾಗಿ ವಸೂಲಿ ಮಾಡಬೇಕು. ಒಂದೊoದು ರೂಪಾಯಿಯನ್ನು ಜೋಡಿಸಿ ದೊಡ್ಡ ಕೆಲಸಗಳನ್ನು ಪಾಲಿಕೆಯಿಂದ ಮಾಡಬಹುದಾಗಿದೆ ಎಂದರು.

ಪಾಲಿಕೆಯ ಅಭಿವೃದ್ಧಿ ವಿಷಯದಲ್ಲಿ ಸಹಕಾರ ಸಂಘದ ಸದಸ್ಯರ ಪಾತ್ರ ಮಹತ್ವದ್ದಾಗಿದೆ. ತಾವು ಶಿಕ್ಷಣವಂತರಾಗಿದ್ದು, ಕಂಪ್ಯೂಟರ್ ಜ್ಞಾನ ಪಡೆಯಬೇಕು. ಸರ್ಕಾರಿ ಸಿಬ್ಬಂದಿಯoತೆ ಕೆಲಸ ಕಾರ್ಯಗಳನ್ನು ಮಾಡಬೇಕು. ಸಂಬoಧಿಸಿದ ವಿಭಾಗದ ಮುಖ್ಯಸ್ಥರ ಸಲಹೆಗಳನ್ನು ಪಡೆದು ಸಮಾಜವನ್ನು ಬದಲಾವಣೆ ಮಾಡಲು ಶ್ರಮಿಸಬೇಕೆಂದರು.

ಪಾಲಿಕೆಯ ವಾರ್ಡ್ ಮಟ್ಟದ ವಿವರಗಳು ಮತ್ತು ಮೂಲಸೌಕರ್ಯಗಳ ಸಮೀಕ್ಷೆಯನ್ನು ನಡೆಸುವ ಮೂಲಕ ತಳಮಟ್ಟದ ಸಮೀಕ್ಷೆ ನಡೆಸಬೇಕು. ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಬೇಕು. ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯವನ್ನು ಉತ್ಪಾದಿಸುವಲ್ಲಿ ನಿಯಮಗಳ ಪಾಲನೆ, ಒಣ ಮತ್ತು ಹಸಿ ತ್ಯಾಜ್ಯದ ಸಂಸ್ಕರಣೆ ಮಾಡಬೇಕು. ಬಳಕೆದಾರರ ಶುಲ್ಕ ಸಂಗ್ರಹಣೆಗೆ ನಾಗರಿಕರನ್ನು ಸಂವೇದನಾಶೀಲರನ್ನಾಗಿಸಬೇಕು. ಕಸ ಬಿಸಾಡಲು ಆಸ್ಪದ ನೀಡುವಂತಹ ಸ್ಥಳಗಳಲ್ಲಿ ಅವಕಾಶ ಕೊಡಬಾರದು ಎಂದರು.

ಪಾಲಿಕೆಯ ವ್ಯಾಪ್ತಿಗೆ ಬರುವ ಎಲ್ಲಾ ವಸತಿ ಪ್ರದೇಶಗಳು, ಶಾಲೆಗಳು, ಮುಖ್ಯ ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಉದ್ಯಾನವನಗಳು, ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಛ ಭಾರತ್ ಮಿಷನ್ (ನಗರ) ಮಾರ್ಗಸೂಚಿಗಳ ಪ್ರಕಾರ ಆಯಾ ಸ್ಥಳಕ್ಕೆ ಸಂಬoಧಿಸಿದoತೆ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳಬೇಕು. ಅಲ್ಲದೆ ಸ್ವಚ್ಛ ಸರ್ವೇಕ್ಷಣೆ ಮತ್ತು ಸ್ವಚ್ಛತೆಯನ್ನು ಪ್ರಮಾಣೀಕರಿಸಬೇಕೆಂದರು.

ಸ್ವಚ್ಛ ಸರ್ವೇಕ್ಷಣ್ ಲೀಗ್‌ಗಳಲ್ಲಿ ಭಾಗವಹಿಸುವಂತೆ ಮತ್ತು ಅದರ ಬಗ್ಗೆ ಸಕಾರಾತ್ಮಕ ಹಿಮ್ಮಾಹಿತಿ ಪಡೆಯಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರನ್ನು ಸಂಪರ್ಕಿಸಲು ಸ್ವಸಹಾಯ ಗುಂಪಿನ ಸದಸ್ಯರು ಪಾಲಿಕೆಗೆ ಸಹಾಯ ಮಾಡಬೇಕು. ಸಾರ್ವಜನಿಕರು ಸಾಮಾನ್ಯವಾಗಿ ಕಸ ಬಿಸಾಡುವಂತಹ ಜಾಗಗಳ ಮೇಲೆ ಕಣ್ಣು ಇಡಬೇಕು. ಮತ್ತು ಎರಡನೇ ಹಂತದ ಕಸ ಸಂಗ್ರಹಿಸುವ ವ್ಯವಸ್ಥೆಯ ಬಗ್ಗೆ ಮೇಲ್ವಿಚಾರಣೆಯಲ್ಲಿ ನೆರವಾಗಬೇಕು. ತ್ಯಾಜ್ಯ ಮೂಲದಲ್ಲಿ ಕಸವನ್ನು ಪ್ರತ್ಯೇಕಿಸುವ ಸಲುವಾಗಿ ಮನೆಮನೆಗೂ ತೆರಳಿ ಕಸ ವಿಂಗಡಣೆಯ ಬಗ್ಗೆ ಅರಿವು ಮೂಡಿಸಬೇಕೆಂದು ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸೂಚಿಸಿದರು.

ಈ ವೇಳೆ ಸ್ವ-ಸಹಾಯ ಗುಂಪುಗಳ ಸದಸ್ಯರಿಂದ ಪಾಲಿಕೆಯ ಅಧ್ಯಕ್ಷರಿಗೆ ಹಾಗೂ ಆಯುಕ್ತರಿಗೆ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜೈಪಾಲ್ ರೆಡ್ಡಿ, ಪಾಲಿಕೆಯ ಸಂಘಟನಾ ಅಧಿಕಾರಿ ಕೃಷ್ಣ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD