ಬೀದರ.25.ಜುಲೈ.25:- ಬೀದರ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯತ್‍ದಲ್ಲಿ ಬರುವ ಸೋಲಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಅಧ್ಯಕ್ಷರಾಗಿ ನರಸಗೊಂಡ ಮೇತ್ರೆ ಹಾಗೂ ಉಪಾಧ್ಯಕ್ಷರಾಗಿ ರವಿ ಮಲ್ಕನೋರ ಹಾಗೂ ಸದಸ್ಯರಾಗಿ ನರಸಪ್ಪಾ, ಬಸಂತಪೂರ, ನಾಗಪ್ಪಾ, ಚಂದ್ರಶೇಖರ, ರವೀಂದ್ರ, ಗಣಪತಿ, ಧನಗೊಂಡ, ರಾಜು ಮಡಿವಾಳ, ಕುಬೇರಗೊಂಡ, ದೇವಿಂದ್ರ, ಸಂಗೀತಾ, ಅಂಬಿಕಾ, ಪ್ರೀಯಾಂಕಾ, ಶ್ರೀದೇವಿ ಭರತ, ಶ್ರೀದೇವಿ ರಮೇಶ, ಗುರಮ್ಮಾ, ವಿಜಯಲಕ್ಷ್ಮೀ, ರಾಧಿಕಾ, ಜ್ಯೋತಿ ಅವರುಗಳು ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರದಂದು ಸೋಲಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗಾದಗಿ ಗ್ರಾಮ ಪಂಚಾಯತ ಕಾರ್ಯದರ್ಶಿ ನಶಿರೋದ್ದಿನ್, ಸದಸ್ಯರಾದ ವೀರಶೆಟ್ಟಿ ಪಾಟೀಲ್, ಸೋಲಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಬೀನಾ ಕಾವಳೆ, ಶಿಕ್ಷಕ ಜ್ಞಾನೇಶ್ವರ ಪವಾರ ಆಯ್ಕೆ ಪ್ರಕ್ರಿಯೇ ನಡೆಸಿಕೊಟ್ಟರು.