ಕೊಪ್ಪಳ.05.ಸೆಪ್ಟೆಂಬರ್.25:- ಮಾಡುತ್ತಾ, ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ಇಲ್ಲಿಂದಲೂ ಸೆ. 24 ರಂದು ನಡೆಯುವ ರೆಡ್ಡಿಜನ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
1925 ರಲ್ಲಿ ಸ್ಥಾಪನೆಯಾಗಿ, ಲಕ್ಷ ಲಕ್ಷ ಜನರ ಬಾಳಲ್ಲಿ ಬೆಳಕಾಗಿರುವ ಕರ್ನಾಟಕ ರೆಡ್ಡಿಜನ ಸಂಘಕ್ಕೆ ಈಗ ಶತಮಾನದ ಸಂಭ್ರಮ, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆ. 24 ರಂದು ರೆಡ್ಡಿಜನ ಸಂಘ ಶತಮಾನೋತ್ಸವ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸು ಮೂಲಕ ಯಶಸ್ವಿ ಮಾಡೋಣ ಎಂದು ಹರಿಹರ ಎರೆಹೊಸಳ್ಳಿ ರೆಡ್ಡಿ ಗುರುಪೀಠದ ಶ್ರೀ ವೇಮಾನಂದ ಸ್ವಾಮೀಜಿಗಳು ಕರೆ ನೀಡಿದ್ದಾರೆ.
ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇಹೇರಮಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ಸಂಜೆ ರೆಡ್ಡಿಜನ ಸಂಘದ ಶತಮಾನೋತ್ಸವ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಕರ್ನಾಟಕ ರೆಡ್ಡಿ ಜನಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣರಡ್ಡಿ, ನಿರ್ದೇಶಕರಾದ ಬಾಬುರೆಡ್ಡಿ,ರಾಜಾರೆಡ್ಡಿ, ಎಂ.ಸಿ. ಪ್ರಭಾಕರೆಡ್ಡಿ, ಎಂ. ಕೃಷ್ಣಾರಡ್ಡಿ, ರಡ್ಡಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಆರ್. ಪಿ. ರಡ್ಡಿ, ಆನಂದರಡ್ಡಿ, ಪ್ರಭು ಹೆಬ್ಬಾಳ, ವೆಂಕನಗೌಡ, ಮನೋಹರಗೌಡ, ಎಸ್. ಬಿ. ನಾಗರಳ್ಳಿ, ನವೋದಯ ವಿರುಪಾಕ್ಷಪ್ಪ, ದೇವಪ್ಪ ಅರಿಕೇರಿ, ಹನುಮರಡ್ಡಿ ಹಂಗನಕಟ್ಟಿ, ವೆಂಕಾರಡ್ಡಿ ವಕೀಲರು ಮೊದಲಾದವರು ಇದ್ದರು.
4ಕೆಪಿಎಲ್28 ಕೊಪ್ಪಳ ನಗರದ ಶ್ರೀ ಶಿವಶರಣೇಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರೆಡ್ಡಿಜನ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಸಾನಿಧ್ಯವನ್ನು ಶ್ರೀ ವೇಮಾನಂದ ಸ್ವಾಮೀಜಿಗಳು ವಹಿಸಿದ್ದರು.






Any questions related to ಸೆ. 24 ರಂದು ನಡೆಯುವ ರೆಡ್ಡಿಜನ ಸಂಘದ ಶತಮಾನೋತ್ಸವ ಕಾರ್ಯಕ್ರಮ?