04/08/2025 1:37 PM

Translate Language

Home » ಲೈವ್ ನ್ಯೂಸ್ » ಸಿಎಂ ಮಾಧ್ಯಮ ಸಂಜೀವಿನಿ ಯೋಜನೆ ಷರತ್ತು ಸಡಿಲಿಕೆಗೆ ‘ಕೆ.ಪಿ ಪ್ರಭಾಕರ್’ಗೆ ಕೆಯುಡಬ್ಲೂಜೆ ಮನವಿ

ಸಿಎಂ ಮಾಧ್ಯಮ ಸಂಜೀವಿನಿ ಯೋಜನೆ ಷರತ್ತು ಸಡಿಲಿಕೆಗೆ ‘ಕೆ.ಪಿ ಪ್ರಭಾಕರ್’ಗೆ ಕೆಯುಡಬ್ಲೂಜೆ ಮನವಿ

Facebook
X
WhatsApp
Telegram

ಬೆಂಗಳೂರು.17.ಜುಲೈ.25:-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಲ್ಲಿ ಮನವಿ ಮಾಡಿದೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯಲ್ಲಿನ ಕಠಿಣ ಷರತ್ತಗಳನ್ನು ಸಡಿಲಿಸಿ, ಸರಳೀಕರಣ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ವಿಧಾನಸೌಧದಲ್ಲಿ ಭೇಟಿ ಮಾಡಿದ ನಿಯೋಗ, ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯನ್ನು ಸೀಮಿತ ಮಾಡಿರುವುದರಿಂದ ಹೆಚ್ಚು ಪತ್ರಕರ್ತರು ಯೋಜನೆಯಿಂದ ವಂಚಿತರಾಗುತ್ತಾರೆ ಎನ್ನುವ ವಿಷಯವನ್ನು ಅವರ ಗಮನಕ್ಕೆ ತಂದಿತು.

ವಾರ್ತಾ ಇಲಾಖೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಮತ್ತು ಸುದ್ದಿಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೂ ಯೋಜನೆಯನ್ನು ವಿಸ್ತಾರ ಮಾಡಬೇಕು ಎನ್ನುವ ಕೆಯುಡಬ್ಲೂೃಜೆ ಮನವಿಗೆ ಕೆ.ವಿ.ಪ್ರಭಾಕರ್ ಅವರು ಸಕಾರತ್ಮಕವಾಗಿ ಸ್ಪಂದಿಸಿದ್ದು, ಪರಿಶೀಲಿಸುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿಯೇ ಜಾರಿಗೆ ನೀಡಿರುವುದು ಸ್ವಾಗತಾರ್ಹವಾಗಿದ್ದು, ಅದಕ್ಕಾಗಿ ಪ್ರಭಾಕರ್ ಅವರಿಗೆ ನಿಯೋಗ ಅಭಿನಂದನೆಗಳನ್ನು ಸಲ್ಲಿಸಿತು.

ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಹಕ್ಕೊತ್ತಾಯಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದು ಅಷ್ಟೇ ಅಲ್ಲ, ಬಜೆಟ್‌ನಲ್ಲಿಯೂ ಪ್ರಕಟಿಸಿ ನುಡಿದಂತೆ ನಡೆದಿದ್ದರು. ಈ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಪಾತ್ರವೂ ಪ್ರಾಮುಖ್ಯವಾಗಿತ್ತು ಎನ್ನುವುದನ್ನು ಕೆಯುಡಬ್ಲ್ಯೂಜೆ ಮನವಿಯಲ್ಲಿ ಸ್ಮರಿಸಿದೆ.

ನಿಯೋಗದಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿ.ಮುಮ್ತಾಜ್ ಅಲೀಂ ಜೊತೆಗಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!