05/04/2025 7:04 AM

Translate Language

Home » ಲೈವ್ ನ್ಯೂಸ್ » ಸಾರಿಗೆ ಸಂಸ್ಥೆಯಲ್ಲಿ ಕಚೇರಿ ಸಹಾಯಕ ಹುದ್ದೆಗೆ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಸಾರಿಗೆ ಸಂಸ್ಥೆಯಲ್ಲಿ ಕಚೇರಿ ಸಹಾಯಕ ಹುದ್ದೆಗೆ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

Facebook
X
WhatsApp
Telegram

ಬೆಂಗಳೂರು.04.ಏಪ್ರಿಲ್.25:-ಸಾರಿಗೆ ಸಂಸ್ಥೆ ಕಚೇರಿಯೆಲ್ಲಿ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರಿಗೆ ಮಾಹಿತಿ, ಸಂಭವನೀಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ಸಾರಿಗೆ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನಿಗಮದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಬಾಕಿ ಇದ್ದ ಕಛೇರಿ ಸಹಾಯಕ (ತೋಟಗಾರಿಕೆ- IV) ಪರಿಶಿಷ್ಟ ಜಾತಿ ಹಿಂಬಾಕಿ ಹುದ್ದೆಯ ಸಂಭವನೀಯ ಆಯ್ಕೆಪಟ್ಟಿ -2 ನ್ನು ದಿನಾಂಕ 02-04-2025 ರಂದು ನಿಗಮದ ಕೇಂದ್ರ ಕಛೇರಿಯ ಸೂಚನಾ ಫಲಕ ಮತ್ತು ಅಧಿಕೃತ ವೆಬ್-ಸೈಟ್ ksrtcjobs.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಂಭವನೀಯ ಆಯ್ಕೆಪಟ್ಟಿ ಪ್ರಕಟಿಸಿದ 15 ದಿನಗಳ ಒಳಗಾಗಿ ಪೂರಕ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ಅಧ್ಯಕ್ಷರು, ಆಯ್ಕೆ ಸಮಿತಿ, ಕರಾರಸಾ ನಿಗಮ, ಕೇಂದ್ರ ಕಛೇರಿ, ಕೆ.ಹೆಚ್. ರೋಡ್, ಶಾಂತಿನಗರ, ಬೆಂಗಳೂರು-27 ಇವರಿಗೆ ಸಲ್ಲಿಸುವುದು ಅಂತ ಹೇಳಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!