04/08/2025 7:54 PM

Translate Language

Home » ಲೈವ್ ನ್ಯೂಸ್ » ಸಾರಿಗೆ ನೌಕರರ ರಜೆ ರದ್ದು : ಸಾರಿಗೆ ಇಲಾಖೆ ಆದೇಶ

ಸಾರಿಗೆ ನೌಕರರ ರಜೆ ರದ್ದು : ಸಾರಿಗೆ ಇಲಾಖೆ ಆದೇಶ

Facebook
X
WhatsApp
Telegram

ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿರುವ ಬೆನ್ನಲ್ಲೇ ಸಾರಿಗೆ ಇಲಾಖೆ ನೌಕರರಿಗೆ ಸರ್ಕಾರ ಶಾಖ್ ಕೊಟ್ಟಿದೆ.ಆ.4ರಿಂದಲೇ ಅನ್ವಯವಾಗುವಂತೆ ಅನಿರ್ದಿಷ್ಟಾವಧಿವರೆಗೆ ಸಾರಿಗೆ ನೌಕರರ ರಜೆಯನ್ನ ರದ್ದುಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

KSRTC ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ರವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ.05.08.2025 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡುವುದಾಗಿ ಮುಷ್ಕರದ ನೋಟಿಸ್ ಅನ್ನು ಆಡಳಿತ ವರ್ಗಕ್ಕೆ ನೀಡಿರುತ್ತಾರೆ.

ಈ ಸಂಬಂಧ ಈ ಕೆಳಕಂಡ ಅಂಶಗಳನ್ನು ನಿಗಮದ ನೌಕರರ ಗಮನಕ್ಕೆ ತರಲಾಗಿದೆ.

1. ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಾಜ್ಯದ ಜನಸಾಮಾನ್ಯರಿಗೆ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಅದಕ್ಕನುಗುಣವಾಗಿ ಘನ ಕರ್ನಾಟಕ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಕರ್ನಾಟಕ ಅಗತ್ಯ -2013 (Karnataka Act No-25/2015) ໖໖ ಅಧಿಸೂಚನೆಯನ್ನು ಹೊರಡಿಸಿದ್ದು, ಅದರನ್ವಯ ರಸ್ತೆ ಸಾರಿಗೆ ನಿಗಮಗಳ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ ಮತ್ತು ಇತರೆ ಯಾವುದೇ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳು ನಿಗಮದ ನೌಕರರು ಮುಷ್ಕರ ಹೂಡುವಂತೆ ಪ್ರಚೋದಿಸುವಂತಿಲ್ಲ ಹಾಗೂ ಬೆಂಬಲವನ್ನು ಸಹ ವ್ಯಕ್ತಪಡಿಸುವಂತಿಲ್ಲ.

2. ಅಲ್ಲದೇ, ಘನ ಕರ್ನಾಟಕ ಸರ್ಕಾರವು ಎಲ್ಲಾ ನಾಲ್ಕೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂಬುದಾಗಿ ಸಹ ಘೋಷಿಸಿರುತ್ತದೆ.

3. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಆಡಳಿತ ವರ್ಗಕ್ಕೆ ನೀಡಿರುವ ಮುಷ್ಕರದ ನೋಟಿಸ್ ಸಂಬಂಧಪಟ್ಟ ವಿವಾದವು ಸದ್ಯ ರಾಜ್ಯದ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿದ್ದು, ಕೈಗಾರಿಕಾ ವಿವಾದಗಳ ಕಾಯಿದೆ-1947 ಮತ್ತು ನಿಯಮಗಳನ್ವಯ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD