14/08/2025 6:36 AM

Translate Language

Home » ಲೈವ್ ನ್ಯೂಸ್ » ಸರ್ಕಾರ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದ ಕ್ಯಾನ್ಸರ್
ಚಿಕಿತ್ಸಾ ಕೇಂದ್ರ ಆರಂಭಿಸಲಿ-ಡಾ. ಡಿ.ಪಿ.ರಮೇಶ

ಸರ್ಕಾರ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದ ಕ್ಯಾನ್ಸರ್
ಚಿಕಿತ್ಸಾ ಕೇಂದ್ರ ಆರಂಭಿಸಲಿ-ಡಾ. ಡಿ.ಪಿ.ರಮೇಶ

Facebook
X
WhatsApp
Telegram

ಬೀದರ.03.ಮಾರ್ಚ.25:- ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿ ಪಾರಂಪರಿಕ ವೈದ್ಯರಿಗೆ ತರಬೇತಿ ನೀಡಬೇಕೆಂದು ಬೆಂಗಳೂರಿನ ಖ್ಯಾತ ಪಂಚಗವ್ಯ ತಜ್ಞರಾದ ಡಾ. ಡಿ.ಪಿ.ರಮೇಶ ತಿಳಿಸಿದರು.


ಅವರು ಇಂದು ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರು, ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಲಿಂಗಸುಗೂರು ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ 15ನೇ ಪಾರಂಪರಿಕ ವೈದ್ಯ ಸಮ್ಮೇಳನದ ನಾಲ್ಕನೇ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕ್ಯಾನ್ಸರ್ ಚಿಕಿತ್ಸೆ ಎಂದರೆ ಕೇವಲ ಕಿಮೋತೆರಪಿ, ರೆಡಿಯೋತೆರಪಿ ಅಲ್ಲ. ಅವುಗಳಿಗೂ ಮೀರಿದ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ಭಾರತೀಯ ಆಯುರ್ವೇದದಲ್ಲಿದೆ. ಪಂಚಗವ್ಯ ಚಿಕಿತ್ಸೆ ಅತ್ಯಂತ ಕಡಿಮೆ ಹಣದಲ್ಲಿ ಪಡೆಯಬಹುದು. ಇದಕ್ಕೆ ಸರ್ಕಾರ ಅವಕಾಶ ನೀಡಬೇಕಾಗಿದೆ. ಕ್ಯಾನ್ಸರ್ ಬರದಂತೆ ತಡೆಯಬೇಕಾದರೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಪ್ಲಾಸ್ಟಿಕ್ ಬಾಟಲಿಗಳ ನೀರು, ಸಿಂಟ್ಯಾಕ್ಸ್ ಒಳಗಿಂದ ಬರುವ ನೀರು, ಮಿನರಲ್ ವಾಟರ್, ಚಹಾ ಕಪ್ ಇವು ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣವಾಗಿವೆ. ಚಿಕ್ಕ ಮಕ್ಕಳು ಕುರಕುರೆ ತಿನ್ನುವುದರಿಂದ ಮಕ್ಕಳ ದೇಹದ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಆಯುರ್ವೇದ ಸೂಕ್ತ ಚಿಕಿತ್ಸೆಯಾಗಿದೆ ಎಂದರು.


ಗದಗ ಜಿಲ್ಲೆಯ ವೈದ್ಯ ಹನುಮಂತ ಮಳಲಿ ಮಾತನಾಡಿ, ಭಾರತೀಯ ಆಯುರ್ವೇದದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಪ್ರಾಕೃತಿಕ ವೈದ್ಯ ಪದ್ಧತಿಯನ್ನು ಸಾಂಸ್ಕೃತಿಕ ಪದ್ಧತಿಯೆಡೆಗೆ ಕೊಂಡೊಯ್ಯುವುದೇ ಭಾರತದ ಆಯುರ್ವೇದ ವೈದ್ಯ ಪದ್ಧತಿ. ಭಾರತದಲ್ಲಿ ಒಟ್ಟು 6 ಲಕ್ಷ ಪಾರಂಪರಿಕ ವೈದ್ಯರಿದ್ದಾರೆ. ಕರ್ನಾಟಕದಲ್ಲಿ 31 ಸಾವಿರ ವೈದ್ಯರಿದ್ದಾರೆ.

ಇವರಿಗೆಲ್ಲಾ ಸರ್ಕಾರ ಮಾನ್ಯತೆ ನೀಡಿದರೆ ಜನರ ರೋಗ ವಾಸಿಯಾಗಿ ಆರೋಗ್ಯಯುತ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಆಯುರ್ವೇದ ಮೇಲೆ ದಾಳಿ ಇಡೀ ಭಾರತದ ಮೇಲಿನ ದಾಳಿಯಾಗಿದೆ. ಅದು ತಡೆಗಟ್ಟಲು ಸರ್ಕಾರ ಕ್ರಮ ವಹಿಸಬೇಕು. ಹಿರಿಯ ವೈದ್ಯರು ತಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಯಾವುದೇ ಕಾರಣಕ್ಕೂ ಮುಚ್ಚಿಡಬಾರದು ಎಂದರು.


ಪ್ರಾಸ್ತಾವಿಕವಾಗಿ ಗೋಸೇವಕರಾದ ಚನ್ನಬಸವಂತರೆಡ್ಡಿ ಮಾತನಾಡಿದರು. ಇದೇ ವೇಳೆ ಪಾರಂಪರಿಕ ವೈದ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳ ನಡುವೆ ಕ್ಯಾನ್ಸರ್ ರೋಗ ಗುಣಮುಖ ಕುರಿತು ಸಂವಾದ ಜರುಗಿತು. ರಂಗಮAದಿರ ಆವರಣದಲ್ಲಿ ಬೆಂಗಳೂರಿನ ಪಂಚಗವ್ಯ ವೈದ್ಯರು ಉಚಿತ ಆರೋಗ್ಯ ತಪಾಸಣೆ ನಡೆಸಿದರು.


ಈ ಸಂದರ್ಭದಲ್ಲಿ ವೈದ್ಯ ಹಾದಿಮನಿ ದಾವಣಗೇರೆ, ಹರೀಶ್ ಸಾಮುಗ ಉಡುಪಿ, ಗೋಪಾಲಕೃಷ್ಣ ಬೆಂಗಳೂರು ಗ್ರಾಮಾಂತರ, ವಿಶ್ವನಾಥ ಕಾಂಬಳೆ ಬೆಳಗಾವಿ, ಮಲ್ಲಿಕಾರ್ಜುನಯ್ಯ ಕೋಲಾರ, ವೈದ್ಯೆ ಸವಿತಾ ಧಾರವಾಡ, ಬಸವರಾಜ ಗೋರನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೈದ್ಯ ಲಿಂಗಪ್ಪ ಮಡಿವಾಳ ನಿರೂಪಿಸಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರು. ಶಿವಶರಣಪ್ಪ ಗಣೇಶಪುರ ವಂದಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD