19/04/2025 5:39 PM

Translate Language

Home » ಲೈವ್ ನ್ಯೂಸ್ » ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವತಿಯಿಂದ ಕಾರ್ಯಾಗಾರ.!

ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವತಿಯಿಂದ  ಕಾರ್ಯಾಗಾರ.!

Facebook
X
WhatsApp
Telegram

ಮುಳಬಾಗಿಲು.10.ಫೆ.25:- ಮುಳಬಾಗಿಲು ತಾಲ್ಲೂಕಿನ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವತಿಯಿಂದ ಸೋಮವಾರ ಪರೀಕ್ಷಾ ಕಾರ್ಯಾಗಾರ ಹಾಗೂ ಪ್ರವೇಶಾತಿ ಅಭಿಯಾನ ನಡೆಯಿತು.

ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಶೈಕ್ಷಣಿಕವಾಗಿ ಓದುವ ಹಾಗೂ ತಯಾರಾಗುವ ವಿಧಾನಗಳ ಕುರಿತು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಪ್ರೊಜೆಕ್ಟರ್ ಮೂಲಕ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

ನಂತರ ಪ್ರಾಂಶುಪಾಲ ಜಿ.ಮುನಿವೆಂಕಟಪ್ಪ ಮಾತನಾಡಿ, ದ್ವಿತೀಯ ಪಿಯು ಎನ್ನುವುದು ವಿದ್ಯಾರ್ಥಿಗಳ ಜಿವನದ ಮಹತ್ವದ ಘಟ್ಟವಾಗಿದ್ದು ಸತತ ಓದು, ಓದಿದ್ದನ್ನು ಬರೆಯುವ ಹಾಗೂ ಮನನ ಮಾಡಿಕೊಳ್ಳುವ ಮೂಲಕ ಪರೀಕ್ಷೆಗಳಿಗೆ ಈಗಿನಿಂದಲೇ ಸಜ್ಜಾಗಬೇಕು.

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಮುಂದಿನ ಸ್ಪರ್ಧಾತ್ಮಕ ಶೈಕ್ಷಣಿಕ ಪ್ರಪಂಚಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.

ಸಂಚಾಲಕ ಟಿ.ಎಸ್.ಶ್ರೀನಿವಾಸ್ ಮಾತನಾಡಿ, ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು ಹಲವು ರ್‍ಯಾಂಕ್‌ ಗಳಿಸುತ್ತಿದ್ದಾರೆ.

ದ್ವಿತೀಯ ಪಿಯು ಪಾಸಾದ ನಂತರ ಖಾಸಗಿ ಕಾಲೇಜುಗಳ ವ್ಯಾಮೋಹಕ್ಕೆ ಸಿಲುಕದೆ ಹಾಗೂ ದೂರದ ಕಾಲೇಜುಗಳಿಗೆ ಹೋಗಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿಕೊಳ್ಳದೆ ಮುಳಬಾಗಿಲು ಕಾಲೇಜಿನಲ್ಲಿ ದಾಖಲಾತಿ ಪಡೆಯಬೇಕು ಎಂದು ತಿಳಿಸಿದರು.

ತಾಲ್ಲೂಕಿನ ನಂಗಲಿ, ಮಲ್ಲನಾಯಕನಹಳ್ಳಿ, ಮುಳಬಾಗಿಲು ನಗರದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜು, ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತಿತರ ಕಾಲೇಜುಗಳ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮತ್ತು ಓದುವ ವಿಧಾನ ಹಾಗೂ ಪದವಿ ಮಾಡಿದರೆ ಮುಂದೆ ಸಿಗಬಹುದಾದ ಅವಕಾಶ ಹಾಗೂ ಹುದ್ಧೆಗಳ ಕುರಿತು ಅಧ್ಯಾಪಕರಿಂದ ಪ್ರಶ್ನೋತ್ತರ ನಡೆಯಿತು.

ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ, ಸಂಚಾಲಕ ಡಾ.ಟಿ.ಎಸ್.ಶ್ರೀನಿವಾಸ್, ಡಾ.ಎಂ.ಕೃಷ್ಣಪ್ಪ, ಡಾ. ಎಂ.ಎನ್.ಮೂರ್ತಿ, ಡಾ.ಶಿವರಾಮೇ ಗೌಡ, ಆದಿನಾರಾಯಣ, ಸುಮ, ಉಮೇಶ್, ಲಾರೆನ್ಸ್ ಪ್ರಸನ್ನ, ಭಾಗ್ಯಲಕ್ಷ್ಮಿ, ಶಶಿಕಲಾ, ವಸುಂಧರ, ಶ್ರೀಧರ್ ಇದ್ದರು.ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!