Home » ಲೈವ್ ನ್ಯೂಸ್ » ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಪ್ರಕಾರ ಸಂಬಳ- ಎಷ್ಟು ಹೈಕ್ ಆಗಬಹುದು?

ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಪ್ರಕಾರ ಸಂಬಳ- ಎಷ್ಟು ಹೈಕ್ ಆಗಬಹುದು?

Facebook
X
WhatsApp
Telegram

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಪಾಲಿಗೆ 2026 ಸ್ಪೆಷಲ್ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣ 7ನೇ ವೇತನ ಆಯೋಗ ಈ ಡಿಸೆಂಬರ್ ಅಂತ್ಯಕ್ಕೆ ಕೊನೆಯಾಗಲಿದ್ದು, ಹೊಸ ವರ್ಷದಿಂದ 8ನೇ ವೇತನ ಆಯೋಗ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಪಾಲಿಗೆ 2026 ಸ್ಪೆಷಲ್ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣ 7ನೇ ವೇತನ ಆಯೋಗ ಈ ಡಿಸೆಂಬರ್ ಅಂತ್ಯಕ್ಕೆ ಕೊನೆಯಾಗಲಿದ್ದು, ಹೊಸ ವರ್ಷದಿಂದ 8ನೇ ವೇತನ ಆಯೋಗ ಜಾರಿಗೆ ಬರಲಿದೆ. ಹಾಗಾಗಿ 8ನೇ ವೇತನ ಆಯೋಗದ ಹಣ ಜನವರಿ 2026ರ ಸಂಬಳದಿಂದಲೇ ಸಿಗುತ್ತಾ ಅನ್ನೋ ಪ್ರಶ್ನೆ ಕಾಡುತ್ತಲೇ ಇದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ 8ನೇ ವೇತನ ಆಯೋಗ ಜಾರಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ 8ನೇ ವೇತನ ಆಯೋಗದ ಷರತ್ತುಗಳಿಗೆ ಅನುಮೋದನೆ ಸಿಕ್ಕಿದ್ದು, ಅಂತಿಮ ವರದಿ ಸಿದ್ಧತೆಗೆ ತಯಾರಿ ನಡೆಯುತ್ತಿದೆ. ಕೇಂದ್ರ ಸರ್ಕಾರ  ವೇತನ ರಚನೆ, ಭತ್ಯೆಗಳು ಮತ್ತು ಪಿಂಚಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಆಯೋಗಕ್ಕೆ 18 ತಿಂಗಳುಗಳ ಸಮಯ ನೀಡಿದ್ದು, ಫೈನಲ್ ರಿಪೋರ್ಟ್ಗೆ ಇನ್ನೂ ಟೈಮ್ ಬೇಕಿದೆ ಎಂದು ವರದಿಯಾಗಿದೆ.

ಸಂಬಳ ಎಷ್ಟು ಹೈಕ್ ಆಗಬಹುದು..?
ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಎಷ್ಟು ಏರಿಕೆ ಆಗಬಹುದು ಅನ್ನೋ ಚರ್ಚೆ ಕೂಡ ಜೋರಾಗಿದೆ. ಹಿಂದಿನ ದಾಖಲೆಗಳ ಮೇಲೆ ಸಂಬಳ ಏರಿಕೆ ಅಂದಾಜು ಮಾಡಲಾಗ್ತಿದೆ. 6ನೇ ವೇತನ ಆಯೋಗ ಜಾರಿಗೆ ಬಂದಾಗ ಶೇ. 40ರಷ್ಟು ವೇತನ ಹೆಚ್ಚಳ ಆಗಿತ್ತು. 7ನೇ ವೇತನ ಆಯೋಗದಲ್ಲಿ ಶೇ. 25ರಷ್ಟು ವೇತನ ಹೆಚ್ಚಳ ಆಗಿತ್ತು. 8ನೇ ವೇತನ ಜಾರಿಗೆ ಬಂದಲ್ಲಿ ಶೇ. 35ರಷ್ಟು ಸಂಬಳ ಹೆಚ್ಚಾಗೋ ನಿರೀಕ್ಷೆ ಇದೆ.


ಸದ್ಯ ಕೇಂದ್ರ ಸರ್ಕಾರಿ ಉದ್ಯೋಗಿ ಕನಿಷ್ಠ ಮೂಲ ವೇತನ 18 ಸಾವಿರ ರೂಪಾಯಿ ಇದೆ. 8ನೇ ವೇತನ ಆಯೋಜ ಜಾರಿಗೆ ಬಂದಲ್ಲಿ ಫಿಟ್ಮೆಂಟ್ ಅಂಶ ಶ್ರೇಣಿ ಆಧಾರದ ಮೇಲೆ ಹೊಸ ಕನಿಷ್ಠ ಮೂಲ ವೇತನ 41 ಸಾವಿರ ಆಗಲಿದೆ. ಇನ್ನೂ ಹೊಸ ಆಯೋಗ ಪರಿಷ್ಕೃತ ವೇತನ ಜನವರಿ 2026ರಲ್ಲಿ ನೀಡೋದಿಲ್ಲ, ಬದಲಿಗೆ ಆ ತಿಂಗಳಿನಿಂದ ಜಾರಿಗೆ ತರಲಾಗುತ್ತದೆ. ಅನುಮೋದನೆ ನಂತರ ಬಾಕಿ ಮೊತ್ತ ಪಾವತಿ ಮಾಡಲಾಗುತ್ತದೆ ಎನ್ನಲಾಗಿದೆ.

ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು, 2026ರ ಆರಂಭದಿಂದಲೇ 8ನೇ ವೇತನ ಆಯೋಗ ಜಾರಿಯಾಗಲಿದೆ. ಇದರ ಪ್ರಕಾರ ವೇತನ ಎಷ್ಟಾಗಲಿದೆ? 8ನೇ ವೇತನ ಆಯೋಗದ ಮಹತ್ವದ ಅಪ್‌ಡೇಟ್ ಇಲ್ಲಿದೆ.

ನ್ಯಾಯಮೂರ್ತಿ ರಂಜನ್ ದೇಸಾಯಿ ನೇತೃತ್ವದ ಹೊಸ ವೇತನ ಆಯೋಗ ಸಮಿತಿ ಈಗಾಗಲೇ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಸೇರಿದಂತೆ ಒಟ್ಟು ವೇತನದ ಪರಿಶೀಲನೆ ಆರಂಭಿಸಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆಯಂತೆ 8ನೇ ವೇತನ ಆಯೋಗದ ಕೆಲಸ ಆರಂಭಗೊಂಡಿದೆ. ಹೊಸ ವರ್ಷ ಅಂದರೆ ಇನ್ನೆರಡು ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ 8ನೇ ವೇತನ ಆಯೋಗದ ಪ್ರಕಾರದಂತೆ ಇರಲಿದೆ. ಇದರ ಜಾರಿ ಕೆಲ ತಿಂಗಳು ಹಿಡಿದರೂ 8ನೇ ವೇತನ ಆಯೋಗದ ಸ್ಯಾಲರಿ 2026ರ ಜನವರಿಯಿಂದ ಆರಂಭಗೊಳ್ಳಲಿದೆ.

ವೇತನ ಆಯೋಗ ಸಮಿತಿಗೆ ಗಡುವು
ಹೊಸ ವೇತನ ಆಯೋಗ ಸಮಿತಿ 18 ತಿಂಗಳಲ್ಲಿ ನೌಕರರ ವೇತನ, ಭತ್ಯೆ, ಇತರ ಖರ್ಚು ವೆಚ್ಚಗಳ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲಿದೆ. ವೇತನ ಆಯೋಗ ಶಿಫಾರಸ್ಸಿನಂತೆ ವೇತನ ಹೆಚ್ಚಾಗಲಿದೆ. ಸದ್ಯ ತುಟ್ಟಿ ಭತ್ಯೆ(ಡಿಎ) ಬೇಸಿಕ್ ಸ್ಯಾಲರಿಯ ಶೇಕಡಾ 58ರಷ್ಟಿದೆ. ಇದು ಹೆಚ್ಚಳವಾಗಲಿದೆ. 18 ತಿಂಗಳು ಗಡುವು ನೀಡಿರುವ ಕಾರಣ ಈ ವರದಿ ಕೇಂದ್ರ ಸರ್ಕಾರದ ಕೈಸೇರಲು ಸರಿಸುಮಾರು 2026ರ ವರ್ಷ ಹಿಡಿಯಲಿದೆ. ಇನ್ನು ಜಾರಿಗೆ ಬರುವಾಗ ಮತ್ತಷ್ಟು ವಿಳಂಬವಾಗಲಿದೆ. ಆದರೆ ಜಾರಿಯಾಗುವಾಗ 2026ರ ಜನವರಿಗೆ ಅನ್ವಯಾಗುವಂತೆ ವೇತನ ಜಾರಿಯಾಗಲಿದೆ. ಹೀಗಾಗಿ 2026ರಿಂದ ಜಾರಿಯಾಗುವವರೆಗೆ ಬಾಕಿ ಉಳಿದಿರುವ ಮೊತ್ತ ನೌಕರರ ಕೈಸೇರಲಿದೆ.

ಮೂಲ ವೇತನದಲ್ಲಿ ಭಾರಿ ಏರಿಕೆ
ಹೊಸ ವೇತನ ಆಯೋಗದ ಮುಂದೆ ಹಲವು ಸವಾಲುಗಳಿವೆ. ಈ ಪೈಕ ಮೂಲ ವೇತನ ಹೆಚ್ಚಳ ಪ್ರಮುಖವಾದದ್ದು. ಸದ್ಯ ಇರುವ ಫಿಟ್‌ಮೆಂಶ್ ಅಂಶವನ್ನು 1.58 ರಿಂದ 1.78ಕ್ಕೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಹೀಗಾದಲ್ಲಿ ಮೂಲ ವೇತನ 18 ಸಾವಿರ ರೂಪಾಯಿ ಆಗಿದ್ದರೆ, 8ನೇ ವೇತನ ಆಯೋಗ ಜಾರಿ ಬಳಿಕ ಸರಿಸುಮಾರು 51 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ.

ಕೋಟಿಗೂ ಹೆಚ್ಚು ಮಂದಿಗೆ ನೆರವು
8ನೇ ವೇತನ ಆಯೋಗದಿಂದ 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು, 65ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಹೆಚ್ಚಾಗುತ್ತಿರುವ ಬೆಲೆ ಏರಿಕೆ, ಅಗತ್ಯವಸ್ತುಗಳು, ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ವೇತನವೂ ಹೆಚ್ಚಳವಾಗಲಿದೆ.

ಕೇಂದ್ರ ಸಂಪುಟದ ಅನುಮೋದನೆ
ಈ ವರ್ಷದ ಆರಂಭದಲ್ಲೇ ಅಂದರೆ 2025ರ ಜನವರಿ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟ ಮಹತ್ವದ ಸಭೆ ಸೇರಿ 8ನೇ ವೇತನ ಆಯೋಗದ ಜಾರಿ ಕುರಿತು ಚರ್ಚೆ ನಡೆಸಿತ್ತು. ಮಹತ್ವದ ಚರ್ಚೆ ಬಳಿಕ 8ನೇ ವೇತನ ಆಯೋಗ ಜಾರಿಗೆ ಸಂಪುಟ ಗ್ರೀನ್ ಸಿಗ್ನಲ್ ನೀಡಿತ್ತು. ಇದೇ ವೇಳೆ 8ನೇ ವೇತನ ಆಯೋಗಕ್ಕೆ ನ್ಯಾಮೂರ್ತಿ ರಂಜನ್ ದೇಸಾಯಿ ನೇತೃತ್ವದ ಸಮಿತಿ ರಚಿಸಿತ್ತು.

ಕೇಂದ್ರ ಸಂಪುಟದ ಅನುಮೋದನೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology