Home » ಲೈವ್ ನ್ಯೂಸ್ » ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರ ಪಿಎಚ್‌ಡಿಗಳೂ ನಕಲಿ.

ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರ ಪಿಎಚ್‌ಡಿಗಳೂ ನಕಲಿ.

Facebook
X
WhatsApp
Telegram

ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರೊಫೆಸರ್ ಅವರ ಶೈಕ್ಷಣಿಕ ದಾಖಲೆಗಳು ಫೇಕ್ ಇವೆ ಎಂದು ಶಂಕೆ ಹುಟ್ಟುಬರುತಿದೆ.

ಕಾಲೇಜು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ಅಧ್ಯಾಪಕರು ಸಲ್ಲಿಸಿರುವ ಪಿಎಚ್‌ಡಿ ಪ್ರಮಾಣಪತ್ರಗಳು ನಕಲಿಯಾಗಿವೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲ ಅಧ್ಯಾಪಕರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 2008-09ರಲ್ಲಿ ನೇಮಕಾತಿ ನಡೆದಾಗ ಎಂ.ಫಿಎಲ್‌ ಅರ್ಹತೆ ಇರುವವರಿಗೂ ಅವಕಾಶ ನೀಡಲಾಗಿತ್ತು. ಹಲವು ಅಭ್ಯರ್ಥಿಗಳು ರಾತ್ರೋರಾತ್ರಿ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ನಕಲಿ ಪ್ರಮಾಣಪತ್ರಗಳನ್ನು ತಂದು ನೇಮಕವಾಗಿದ್ದರು. ಅಂತಹ ಅಭ್ಯರ್ಥಿಗಳ ವಿರುದ್ಧ ಇಂದಿಗೂ ಕ್ರಮ ಕೈಗೊಂಡಿಲ್ಲ. ವಿಶ್ವವಿದ್ಯಾಲಯ ಅನುದಾನ ಆಯೋಗವು ಪಿಎಚ್‌ಡಿ ಪಡೆದವರಿಗೆ ಮೂರು ವೇತನ ಬಡ್ತಿ ನೀಡಬೇಕು.

ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ನೀಡುವಾಗ ಕಡ್ಡಾಯವಾಗಿ ಪಿಎಚ್‌ಡಿ ಪರಿಗಣಿಸಬೇಕು ಎಂದು ನಿಯಮ ರೂಪಿಸಿದ ನಂತರ ನಕಲಿ ಪಿಎಚ್‌ಡಿ ಹಾವಳಿ ಮಿತಿಮೀರಿದೆ. ಬಹಳಷ್ಟು ಅಧ್ಯಾಪಕರು ಹೊರ ರಾಜ್ಯಗಳಿಂದ ಪಡೆದ ನಕಲಿ ‍ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಮೇಘಾಲಯದ ಸಿಎಂಜೆ ವಿಶ್ವವಿದ್ಯಾಲಯ ನೀಡಿದ ಪಿಎಚ್‌ಡಿಗಳು ನಕಲಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕರ್ನಾಟಕದಲ್ಲಿ ತನ್ನ ಯಾವ ದೂರಶಿಕ್ಷಣ ಕೇಂದ್ರವೂ ಇಲ್ಲ ಎಂದು ಬಿಹಾರದ ಮಗಧ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದೆ.

ಈ ಎರಡೂ ವಿಶ್ವವಿದ್ಯಾಲಯಗಳ ಪಿಎಚ್‌ಡಿ ಪ್ರಮಾಣಪತ್ರವನ್ನು ಸಲ್ಲಿಸಿದ 300ಕ್ಕೂ ಹೆಚ್ಚು ಅಧ್ಯಾಪಕರು ಇದ್ದಾರೆ. ಅವರ ವಿರುದ್ಧ ಇದುವರೆಗೂ ಕ್ರಮ ಆಗಿಲ್ಲ. ನಕಲಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸದೆ ಶೇ 10ರಷ್ಟು ಅಧ್ಯಾಪಕರಿಗೆ ಪದೋನ್ನತಿ ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಮಾಡಲಾಗಿದೆ. ಲೋಕಾಯುಕ್ತದಲ್ಲಿ ದೂರು ದಾಖಲಾದ ಇಬ್ಬರ ವಿರುದ್ಧ ಅಷ್ಟೇ ಕಾಲೇಜು ಶಿಕ್ಷಣ ಇಲಾಖೆ ಕ್ರಮಕೈಗೊಂಡಿದೆ ಎಂದು ದೂರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology