ಬೆಂಗಳೂರು.13.ಡಿಸೆಂಬರ್.25: ರಾಜ್ಯ ಸರ್ಕಾರ ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳು ಸ್ಮರಣಿಕೆ ಮತ್ತು ಟ್ರೋಫಿಗಳ ಖರೀದಿಗೆ ಅಧಿಕ ಹಣವನ್ನು ಖರ್ಚು ಮಾಡುತ್ತಿವೆ. ಹೀಗಾಗಿ ಹಣಕಾಸು ನಿರ್ವಹಣೆ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. (Government) ಮಹತ್ವದ ನಿರ್ಧಾರ ಕೈಗೊಂಡಿದೆ. ಸರಕಾರಿ ಪ್ರಾಯೋಜಿತ ಅಥವಾ ಅನುದಾನಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ (Trophy ) ಮತ್ತು ಅಂತಹ ವಸ್ತು ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ಪರಿಸರ ಕಾಳಜಿ, ಸಂಪನ್ಮೂಲ ಸಂರಕ್ಷಣೆಯೇ ಮೊದಲ ಆದ್ಯತೆ ಯಾಗಿದೆ. ಇದೇ ಉದ್ದೇಶಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಈಗಾಗಲೇ ಖರೀದಿಸಿರುವ ಸ್ಮರಣಿಕೆಗಳನ್ನು ಇಲಾಖಾ ಮುಖ್ಯಸ್ಥರ ಅನುಮತಿ ಪಡೆದು ವಿಲೇವಾರಿ ಅಥವಾ ದಾನ ಮಾಡಬಹುದು. ಭವಿಷ್ಯದಲ್ಲಿ ಇಂತಹ ಸಾಮಗ್ರಿಗಳನ್ನು ಖರೀದಿಸಲು ಬಜೆಟ್ನಲ್ಲಿಯೂ ಹಣ ಮೀಸಲಿಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇನ್ನೂ, ಸ್ಮರಣಿಕೆ ಹಾಗೂಟ್ರೊಫಿ ಬದಲಾಗಿ ಸಸಿಗಳು, ಪುಸ್ತಕಗಳು, ಕೈ ಮಗ್ಗ ಉತ್ಪನ್ನಗಳು ಅಥವಾ ಸ್ಥಳೀಯವಾಗಿ ರಚಿಸಲಾದ ಪರಿಸರ ಸ್ನೇಹಿ ಸ್ಮರಣಿಕೆಗಳಂತಹ ಸಾಂಕೇತಿಕ ವಸ್ತುಗಳನ್ನು ಊಪಯೋಗಿಸಲು ಸೂಚಿಸಲಾಗಿದೆ.
ಗಣ್ಯರ ಭೇಟಿ, ಸನ್ಮಾನ ಸೇರಿದಂತೆ ಸರ್ಕಾರದ ಎಲ್ಲ ಅಧಿಕೃತ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯ ಆಗಲಿದೆ. ಕ್ರೀಡಾಪಟುಗಳಿಗೆ ನೀಡುವ ಟ್ರೋಫಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಆದರೆ, ಅಂತಹ ಟ್ರೋಫಿಗಳು ಪ್ಲಾಸ್ಟಿಕ್ ಮುಕ್ತ ಆಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.






Any questions related to ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ- ಟ್ರೋಫಿ ವಿತರಣೆ ಬ್ಯಾನ್?