ಬೆಳಗಾವಿ.17.ಏಪ್ರಿಲ್.25:- ಕಳೆದ 14.ಜನವರಿ.2025 ರಂದು ಕಿತ್ತೂರು ಬಳಿ ಅಂಬಡಗಟ್ಟಿ ಕ್ರಾಸ್‌ನಲ್ಲಿ ಸಂಭವಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ಕಾರಣನಾಗಿದ್ದ ಟ್ರಕ್ ಚಾಲಕನನ್ನು ಪೊಲೀಸರು 3 ತಿಂಗಳು ಬಳಿಕ ಅರೆಸ್ಟ್ ಮಾಡಿದ್ದಾರೆ.
ಲಾರಿ ಚಾಲಕನನ್ನು ಮಧುಕರ ಕೊಂಡಿರಾಮ ಸೋಮವಂಶಿ ಎಂದು ತಿಳಿದುಬಂದಿದೆ ಕಳೆದ ಕೆಲದಿನಗಳ ಹಿಂದೆ ಬೆಳಗಾವಿಯ ಕಿತ್ತೂರಿನ ಸಮೀಪ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಕಾರು ಅಪಘಾತಕ್ಕೀಡಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಲಾರಿ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಲಾರಿ ಚಾಲಕನನ್ನು ಮಧುಕರ ಕೊಂಡಿರಾಮ ಸೋಮವಂಶ(65) ಎಂದು ಗುರುತಿಸಲಾಗಿದ್ದು ಈತ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತಕ್ರಾರವಾಡಿ ಗ್ರಾಮದ ಮೂಲದವನು ಎನ್ನಲಾಗಿದೆ.
ಈ ಕೇಸ್ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಚಿವರ ಕಾರಿಗೆ ತಾಗಿದ್ದ ಲಾರಿಯ ಬಣ್ಣ ಸೇರಿದಂತೆ ಅಪಘಾತದ ಸ್ಥಳದಲ್ಲಿ ಸಿಕ್ಕ ಎಲ್ಲಾ ಸಾಕ್ಷಿಗಳನ್ನು ಎಫ್‌ಎಸ್‌ಎಲ್ ಗೆ ರವಾನೆ ಮಾಡಿದ್ದರು.ಅಂತಿಮವಾಗಿ ಸಿಸಿಟಿವಿ ದೃಶ್ಯ ಆಧರಿಸಿ ಈಗ ಲಾರಿ ಪತ್ತೆ ಹಚ್ಚಿ ಚಾಲಕನನ್ನು ಬಂಧಿಸಲಾಗಿದೆ.