11/08/2025 9:37 AM

Translate Language

Home » ಲೈವ್ ನ್ಯೂಸ್ » ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ : ಡಾ.ಎಂ.ಸಿ.ಸುಧಾಕರ್ ಕಿಡಿ

ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ : ಡಾ.ಎಂ.ಸಿ.ಸುಧಾಕರ್ ಕಿಡಿ

Facebook
X
WhatsApp
Telegram

ಸ್ಟೀಸ್ ಗೋಪಾಲಗೌಡರು ಈ ತಲೆಮಾರಿನವರಲ್ಲ. ಹಿಂದಿನ ತಲೆ ಮಾರಿನವರು. ಅವರು ಹಿರಿಯರಿದ್ದಾರೆ.ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಿದ್ದಾರೆ.ಬಹಳ ಗೌರದಿಂದಲೇ ಹೇಳುತ್ತಿದ್ದೇನೆ.ರಾಜಕಾರಣ ಮಾಡುವಂತಿದ್ದರೆ ನೇರವಾಗಿ ಬಂದು ಮಾಡಿ. ಹಿಂದಿನಿಂದ ಮುಗ್ದರನ್ನು ಪ್ರಚೋಧನೆ ಮಾಡಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಕಿಡಿಕಾರಿದರು.

ತಾಲೂಕಿನ ನಂದಿಗಿರಿಧಾಮದ ತಪ್ಪಲಿನಲ್ಲಿರುವ ದಿವ್ಯಶ್ರೀ ವಿಸ್ಪರ್ ಆಫ್ ವಿಂಡ್ಸ್ ರೆಸಾರ್ಟ್ ಆವರಣದಲ್ಲಿ ಭಾನುವಾರ ಯುವಶಕ್ತಿ ಮತ್ತು ಕ್ರೀಡಾ ಇಲಾಖೆ , ಕರ್ನಾಟಕ ರಾಜ್ಯ ಪ್ರವಾಸೋ ದ್ಯಮ ಅಭಿವೃದ್ಧಿ ನಿಗಮ , ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆದ ದಿವ್ಯಶ್ರೀ ನಂದಿ ಹಿಲ್ಸ್ ಆವರಣದಲ್ಲಿ ನಡೆದ ವೇದಿಕೆ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚಿಂತಾಮಣಿಯಲ್ಲಿ ಶನಿವಾರ ಜಸ್ಟೀಸ್ ಗೋಪಾಲಗೌಡರು ಜೆ.ಕೆ.ಕೃಷ್ಣಾರೆಡ್ಡಿ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಮಾತನಾಡಿರುವ ಟೀಕೆಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು.

ಚಿಂತಾಮಣಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನಾವಳಿಗೆ ಗೋಪಾಲಗೌಡರು ಪ್ರಚೋದನೆ ಕೊಡುವ ಕೆಲಸ ಮಾಡುತ್ತಿದ್ದಾರೆ.ಉನ್ನತ ಶಿಕ್ಷಣ ಇಲಾಖೆಯಲ್ಲಿ ನಾನೆಷ್ಟು ಉದ್ಯೋಗ ಕೊಡಿಸಿದ್ದೇನೆ ಎಂಬ ಬಗ್ಗೆ ಮಾತನಾಡಿದ್ದಾರೆ. ನನ್ನ ಇಲಾಖೆಯಲ್ಲಿ ನಾನು ಏನು ಮಾಡುತ್ತಿದ್ದೇನೆ. ಉದ್ಯೋಗ ಲಭ್ಯತೆಗೆ ಮಕ್ಕಳಿಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಇವರಿಗೆ ನಾನು ಉತ್ತರ ಕೊಡುವ ಅವಶ್ಯಕತೆಯಿಲ್ಲ ಎಂದು ವ್ಯಂಗ್ಯವಾಡಿದರು.

ನನ್ನ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕೈಗಾರಿಕೆಗಳನ್ನು ತರಬೇಕು ಎಂದು ೧೦ ವರ್ಷದ ಹಿಂದೆಯೇ ಪ್ರಯತ್ನಿಸಿದವನು ನಾನು.ಈ ಸಂಬAಧ ಅಧಿಸೂಚನೆ ತಂದೆ.ಆದರೆ ೧೦ ವರ್ಷಕಾಲ ಅದನ್ನು ಹಾಳು ಮಾಡಿದರು.ಕನಿಷ್ಟ ವಿದ್ಯುತ್ ಒದಗಿಸುವ ಕೆಲಸ ಮಾಡಲಿಲ್ಲ.

ಅದರ ಬಗ್ಗೆ ನಾನು ಹೇಳಿದ್ದೇನೆ.ಕೈಗಾರಿಕೆಗಳು ಇಲ್ಲಿ ಬರಲು ನೀವು ಸಹಕಾರ ನೀಡಲಿಲ್ಲ, ರೈತರಿಗೆ ನೀಡಬೇಕಾದ ಪರಿಹಾರದ ಸಮಸ್ಯೆ ನೀವಾರಣೆ ಮಾಡಲಿಲ್ಲ.ಯಾವುದೂ ಮಾಡದೆ, ಮಕ್ಕಳು ಮನೆ ಸಮೀಪ ದಲ್ಲಿಯೇ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ತಪ್ಪಿಸಿ ದೂರದಲ್ಲಿ ಉದ್ಯೋಗ ದೊರೆಯುವಂತೆ ಮಾಡಲು ಮೇಳ ಮಾಡಿದರೆ ಹೇಗೆ? ಹಿಂದಿನಿಂದ ಮುಗ್ದರನ್ನು ಅಮಾಯಕರನ್ನು ಪ್ರಚೋಧನೆ ಮಾಡಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಬೇಡಿ.

ಜಿಲ್ಲೆಯೂ ಸೇರಿದಂತೆ ಕ್ಷೇತ್ರದಲ್ಲಿ ಈ ಎರಡು ವರ್ಷದಲ್ಲಿ ಆಗಿರುವ ಅಭಿವೃದ್ಧಿ, ಶೈಕ್ಷಣಿಕವಾಗಿ ಆಗುತ್ತಿರುವ ಅಭಿವೃದ್ಧಿ ಸೇರಿ ಬೇರೆ ಬೇರೆ ಮೂಲಭೂತ ಸೌಕರ್ಯಗಳಿಗೆ ಏನು ಮಾಡಿದ್ದೇನೆ ಇವೆಲ್ಲವನ್ನೂ ಕಣ್ಣಾರೆ ನೋಡಿ ಆಮೇಲೆ ತಾವು ತಮ್ಮ ಅಭಿಪ್ರಾಯ ಹೇಳಿದರೆ ಬಹುಶಃ ನಿಮ್ಮ ಘನತೆ ಗೌರವಕ್ಕೆ ಶೋಭೆ ತರಲಿದೆ ಎಂದರು.

ನಮ್ಮ ತಾಲೂಕಿನ ಪ್ರತಿಭೆಯಾದ ನೀವು ಬಹುಶಃ ಆ ಮಟ್ಟಕ್ಕೆ ಬೆಲೆದಿದ್ದೀರಿ.ನೀವೇ ಓದಿರುವ ಡಿಗ್ರಿ ಕಾಲೇಜನ್ನು ದಯವಿಟ್ಟು ಈವತ್ತೇ ಹೋಗಿ ಒಮ್ಮೆ ನೋಡಿ. ಯಾವರೀತಿ ಅದು ಬದಲಾಗುತ್ತಿದೆ, ಯಾವಸ್ವರೂಪ ಪಡೆಯುತ್ತಿದೆ ಎಂಬುದು ತಿಳಿಯಲಿದೆ ಎಂದು ವಿನಂತಿಸಿದರು.

ಉದ್ಯೋಗ ಮೇಳದ ಫಲಿತಾಂಶ ನನಗೆ ಗೊತ್ತಿದೆ.ಈವತ್ತು ಉದ್ಯೋಗ ಬೇಕಾದರೆ ಕೌಶಲ್ಯ ಬೇಕಾ ಗುತ್ತದೆ. ನಿರುದ್ಯೋಗ ಯುವಕರಲ್ಲಿ ಈಕೊರತೆ ಎದ್ದು ಕಾಣುತ್ತಿದ್ದು ಇದ್ದನ್ನು ತುಂಬಲು ನಾವು ಶ್ರಮಿಸುತ್ತಿದ್ದೇವೆ.ಕಾಟಾಚಾರಕ್ಕೆ ಉದ್ಯೋಗ ಮಾಡಿದರೆ ಸಾಲದು. ಆಯ್ತು, ನಿನ್ನೆಯ ಉದ್ಯೋಗ ಮೇಳದಲ್ಲಿ ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ, ಯಾವ ತರದ ಉದ್ಯೋಗ ನೀಡಿದ್ದಾರೆ ಹೇಳಿ ನೋಡೋಣ ಎಂದು ಪ್ರಶ್ನಿಸಿದ ಅವರು, ಎರಡುವರೆ ವರ್ಷದಲ್ಲಿ ನಾನು ನನ್ನ ಕೈಲಾದ ಮಟ್ಟಿಗೆ ಫಾಕ್ಸ್ಕಾನ್, ವಿಸ್ಟಾçನ್ ಕಂಪನಿ ಸೇರಿ ಬೇರೆ ಬೇರೆ ಕಂಪನಿಗಳಲ್ಲಿ ನೇರವಾಗಿ ಉದ್ಯೋಗ ಕೊಡಿಸಿ ದ್ದೇನೆ ಎನ್ನುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.

ನನಗೆ ಗೊತ್ತಿದ್ದಂತೆ ಮಾಜಿ ಸಂಸದ ವೀರಪ್ಪಮೊಯಿಲಿ ಉದ್ಯೋಗ ಮೇಳ ಮಾಡಿದ್ದರು.ನಮ್ಮ ಸರಕಾರ ಬೆಂಗಳೂರಿನಲ್ಲಿ ದೊಡ್ಡ ಉದ್ಯೋಗ ಮೇಳ ಮಾಡಿದ್ದೇವೆ.ಯಾವ ಉದ್ಯೋಗ ಮೇಳದ ಫಲಿತಾಂಶ ಏನು ಎಂಬುದು ನಮಗೆ ಗೊತ್ತಿದೆ. ಇತ್ತೀಚೆಗೆ ಗುಲ್ಬರ್ಗದಲ್ಲಿ ದೊಡ್ಡ ಮಟ್ಟದ ಉದ್ಯೋಗ ಮೇಳ ಆಯಿತು.ಅದರಿಂದ ಹೊರಬರುವ ಫಲಿತಾಂಶ ಏನು ಎಂಬುದು ಮನದಟ್ಟಾ ಗಿದೆ. ನಾನು ವಾಸ್ತವ ಮಾತನಾಡುತ್ತಿದ್ದೇನೆ.

ಚಿಂತಾಮಣಿಯಲ್ಲಿ ಶನಿವಾರ ಆಗಿದ್ದು ಬೂಟಾಟಿಕೆಯ ಉದ್ಯೋಗ ಮೇಳವಾಗಿದೆ. ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವು ಅವಕಾಶ ಗಳಿಲ್ಲ. ನಾವು ಇವತ್ತು ಪಠ್ಯಗಳಲ್ಲಿ ಬದಲಾವಣೆ ತರುತ್ತಿದ್ದೇವೆ.ಕೈಗಾರಿಕೆ ಮತ್ತು ಶಿಕ್ಷಣ ಒಟ್ಟಿಗೆ ಸೇರಿ ಮಕ್ಕಳಿಗೆ ಉದ್ಯೋಗ ಲಭಿಸು ವಂತಹ ರೀತಿಯಲ್ಲಿ ಶಿಕ್ಷಣ ಕೊಡುತ್ತಿದ್ದೇವೆ.

ಉದ್ಯೋಗ ದಾತರು ಕೇಳುವ ಪ್ರಶ್ನೆಗೆ ತೃಪ್ತಿಯಾಗು ವಂತೆ ಉತ್ತರ ನೀಡುವ ಆತ್ಮಸ್ಥೆöÊರ್ಯ ಬೆಳೆಸುವಂತೆ ವಿದ್ಯಾರ್ಥಿ ಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಸ್ಕಿಲ್ಲಿಂಗ್, ಅಪ್‌ಸ್ಕಿಲ್ಲಿಂಗ್, ರೀಸ್ಕಿಲ್ಲಿಂಗ್ ಬೆಳೆಸಲು ಉನ್ನತ ಶಿಕ್ಷಣ ಇಲಾಖೆ ಚಿಂತಿಸುತ್ತಿದೆ.ಇದನ್ನು ಮನಗಾಣದೆ ಟೀಕೆ ಮಾಡುವುದು ಸರಿಯಿಲ್ಲ ಎಂದು ಹೇಳಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD