ನವದೆಹಲಿ:-ಬೀದರ ಸಂಸದರಾದ ಶ್ರೀ ಸಾಗರ ಖಂಡ್ರೆ ಸೇರಿದಂತೆ ಕಾಂಗ್ರೆಸ್ ಸಂಸದರ ನಿಯೋಗವು ಇಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ಕರ್ನಾಟಕದ ರೈತರು ಎದುರಿಸುತ್ತಿರುವ ಗಂಭೀರ ಕೃಷಿ ಸಂಕಷ್ಟಗಳ ಕುರಿತು ಮನವಿ ಸಲ್ಲಿಸಿದರು.
ನಿಯೋಗವು ಮುಖ್ಯವಾಗಿ ತೊಗರಿ (ತೂರ್ ದಾಲ್) ಮಾರುಕಟ್ಟೆ ಬೆಲೆ MSP ಗಿಂತ ಬಹಳ ಕಡಿಮೆಯಾಗಿರುವುದು ಹಾಗೂ PMFBY (ಬೆಳೆ ವಿಮೆ) ಪರಿಹಾರ ಸರಿಯಾಗಿ ಮತ್ತು ಸಮಯಕ್ಕೆ ಸಿಗದಿರುವುದು ಎಂಬ ಎರಡು ಪ್ರಮುಖ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಿತು.
ಈ ವರ್ಷ ಭಾರೀ ಮಳೆಯಿಂದ ಬೀದರ ಕ್ಷೇತ್ರದಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾದರೂ, ವಿಮಾ ಪರಿಹಾರ ಇನ್ನೂ ಸಮರ್ಪಕವಾಗಿ ತಲುಪಿಲ್ಲವೆಂದು ಸಾಗರ ಖಂಡ್ರೆ ಅವರು ಪ್ರಸ್ತಾಪಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾನ್ಯ ಸಚಿವರು, ತೊಗರಿಯನ್ನು MSP ದರದಲ್ಲಿ ಸರ್ಕಾರದ ಮಟ್ಟದಲ್ಲಿ ಖರೀದಿ ಮಾಡುವ ವಿಶ್ವಾಸ ನೀಡಿದರು.
ನಿಯೋಗವು ಜೊತೆಗೆ ಕಬ್ಬಿನ FRP 2019ರಿಂದ ಪರಿಷ್ಕಾರವಾಗದೇ ಇರುವುದರಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಆರ್ಥಿಕ ಒತ್ತಡ, ಹಾಗೂ ಜೋಳದ ಮಾರುಕಟ್ಟೆ ಬೆಲೆಗಳು MSP ಯ ಅರ್ಧ ಮಟ್ಟಕ್ಕೆ ಕುಸಿದಿರುವುದರಿಂದ ರೈತರಿಗೆ ಉಂಟಾಗುತ್ತಿರುವ ನಷ್ಟಗಳನ್ನೂ ಪ್ರಸ್ತಾಪಿಸಿತು.
ಮನವಿಗಳನ್ನು ಆದರದಿಂದ ಆಲಿಸಿದ ಕೇಂದ್ರ ಕೃಷಿ ಸಚಿವರು, ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಸಂಸದರಾದ ಶ್ರೀ ಕುಮಾರ್ ನಾಯ್ಕ್(ರಾಯಚೂರು), ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್(ದಾವಣಗೆರೆ) , ಶ್ರೇಯೇಶ್ ಪಟೇಲ್(ಹಾಸನ್) , ಸುನಿಲ್ ಬೋಸ್ (ಚಾಮರಾಜನಗರ), ಈ ತುಕಾರಾಮ್(ಬಳ್ಳಾರಿ) ಉಪಸ್ಥಿತರಿದ್ದರು.





Any questions related to ಸಂಸದರಾದ ಶ್ರೀ ಸಾಗರ ಖಂಡ್ರೆ ಸೇರಿದಂತೆ ಕಾಂಗ್ರೆಸ್ ಸಂಸದರ ನಿಯೋಗವು ಇಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ?