19/04/2025 8:31 PM

Translate Language

Home » ಲೈವ್ ನ್ಯೂಸ್ » ಸಂವಿಧಾನ ಬದಲಿಸಿ ಮನುಸ್ಮೃತಿ ಮರು ಪರಿಚಯಿಸುವ ಷಡ್ಯಂತ್ರ: ಪ್ರಕಾಶ್ ಅಂಬೇಡ್ಕರ್‌

ಸಂವಿಧಾನ ಬದಲಿಸಿ ಮನುಸ್ಮೃತಿ ಮರು ಪರಿಚಯಿಸುವ ಷಡ್ಯಂತ್ರ: ಪ್ರಕಾಶ್ ಅಂಬೇಡ್ಕರ್‌

Facebook
X
WhatsApp
Telegram

ಮುಬೈ: 28.ಜನವರಿ.25:- ಇವತು ಸಂಪೂರ್ಣ್ ಭಾರತಾದ್ಯಂತ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ್ ಪ್ರತಿಮೆಗೆ ಅವಮಾನಿಸಿದ್ದಾರೆ ಆದೆ ರೀತೀ ಪಂಜಾಬ್‌ನ ಅಮೃತಸರದಲ್ಲಿ ಗಣರಾಜ್ಯೋತ್ಸವ ದಿನ ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿರುವ ವಂಚಿತ್ ಬಹುಜನ ಅಘಾಡಿ ಪಕ್ಷದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್, ‘ಸಂವಿಧಾನ ಬದಲಿಸಿ ಮನುಸ್ಮೃತಿ ಮರು ಪರಿಚಯಿಸಲು ರಾಷ್ಟ್ರದಾದ್ಯಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ರಾಷ್ಟ್ರಾದ್ಯಂತ ಸಂವಿಧಾನ ಮತ್ತು ಅಂಬೇಡ್ಕರ್‌ ಪ್ರತಿಮೆ ಧ್ವಂಸ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಮನುವಾದಿಗಳು’ಸಂವಿಧಾನ ಬದಲಿಸಿ ಮನುಸ್ಮೃತಿ ಪರಿಚಯಿಸಲು ಷಡ್ಯಂತ್ರ ನಡೆಯುತ್ತಿದೆ. ಸಂವಿಧಾನ ಮತ್ತು ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸ ಮಾಡುತ್ತಿರುವುದು ಇದಕ್ಕೆ ನಿದರ್ಶನವಾಗಿದೆ’ ಎಂದು ಹೇಳಿದ್ದಾರೆ.

‘ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡುವುದು ಕ್ರಿಮಿನಲ್ ಕೃತ್ಯಕ್ಕಿಂತ ದೊಡ್ಡದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಸುಧಾರಣೆ, ರಾಜಕೀಯ ತತ್ವಶಾಸ್ತ್ರ ಮತ್ತು ಶ್ರೀಮಂತ ಪರಂಪರೆಯನ್ನು ತಿರಸ್ಕರಿಸುವವರಿಂದ ಇಂತಹ ಕೆಲಸಗಳು ನಡೆಯುತ್ತಿವೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಇಂತಹ ಘಟನೆಗಳು ಆಘಾತ ಉಂಟು ಮಾಡುತ್ತಿವೆ. ಆದರೆ ಇದಕ್ಕಿಂತಲೂ ಆಘಾತವಾಗುತ್ತಿರುವುದು ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂವಿಧಾನವನ್ನು ಭಾರತವು ಅಂಗೀಕರಿಸಿದ ದಿನವಾದ, ವಸಾಹತುಶಾಹಿ ಮತ್ತು ಮನುಸ್ಮೃತಿ ಆಡಳಿತದಿಂದ ಮುಕ್ತಗೊಂಡ ದಿನವಾದ ಗಣರಾಜ್ಯೋತ್ಸವದ ದಿನವೇ ಅಂಬೇಡ್ಕರ್ ಪ್ರತಿಮೆಗೆ ಹಾನಿಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಎಪಿ ನೇತೃತ್ವದ ಪಂಜಾಬ್ ಸರ್ಕಾರವು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೊಳ್ಳುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಸಮಸ್ಯೆ ದೈನಂದಿನ ಹೆಚ್ಚು ಆಗ್ತದೆ ಈಗ ದಲಿತರು ಮಹಿಳೆಯರು ಯುವಕರು ತಮ್ಮ ಜೀವನದ ಅತ್ಯಂತ ದೊಡ್ಡ ಸ್ವಾತಂತ್ರ ಸಂಪೂರ್ಣವಾಗಿ ನೆಸ್ಟ್ ಆಗ್ತಿದೆ ಇವತ್ತು ಒಂದು ಆಗೋದು ಬಹಳ ಮುಖೆ ಇಲ್ಲಾ ಅಂದ್ರೆ ಗಂಭೀರ ಪರಿಸ್ಥಿತಿ ನಿರ್ಮಾಣ ಆಗ್ತಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!