Home » ಲೈವ್ ನ್ಯೂಸ್ » ಸಂತ ಶಿರೋಮಣಿ ಗೊರಬಾ ಕಾಕಾ ರವರ ಪುಣ್ಯಸ್ಮರಣೆಯ.

ಸಂತ ಶಿರೋಮಣಿ ಗೊರಬಾ ಕಾಕಾ ರವರ ಪುಣ್ಯಸ್ಮರಣೆಯ.

ಔರಾದ್.28.ಏಪ್ರಿಲ್.25:- ಸಂತ ಶಿರೋಮಣಿ ಗೊರಬಾ ಕಾಕಾ ರವರ ಪುಣ್ಯಸ್ಮರಣೆಯ ನಿಮಿತ್ತ ಇಂದು ಔರಾದ ಪಟ್ಟಣದ ಕುಂಬಾರ ಸಮಾಜದಿಂದ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದರ್ಶನ ಪಡೆಯಲಾಯಿತು.

ಕಾರ್ಯಕ್ರಮದಲ್ಲಿ ಎನ್ ಎಸ್ ವಾಯ್ ಎಫ್ ರಾಜ್ಯ ಸಂಚಾಲಕರಾದ ಶ್ರೀ ಶಿವಕುಮಾರ ಕಾಂಬಳೆ, ಔರಾದದ ಯುವ ಮುಖಂಡ ಶ್ರೀ ದಯಾನಂದ ಘುಳೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕಾ ಅಧ್ಯಕ್ಷರಾದ ಶ್ರೀ ಪ್ರಕಾಶ ಭಂಗಾರೆ, ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾ ಅಧ್ಯಕ್ಷರಾದ ಶ್ರೀ ಆನಂದ ಕಾಂಬಳೆ, ಯುವ ಮುಖಂಡರಾದ ಶ್ರೀ ಸುಂದರ ಮೇತ್ರೆ ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇಳೆ ಕೀರ್ತನೆಯ ಮೂಲಕ ಸಂತ ಗೊರಬಾ ಕಾಕಾ ರವರ ಜೀವನದ ಮಹತ್ವದ ಘಟನಗಳನ್ನು ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

Author

ಪ್ರಮುಖ ಸುದ್ದಿ

Stock market

Astrology