ಬೆಂಗಳೂರು.05.ಮಾರ್ಚ್.25:- ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಬಯಲು ಶೌಚಮುಕ್ತ ರಾಜ್ಯವಾಗಿ ಗಮನಸೆಳೆದಿರುವ ಕರ್ನಾಟಕ, ಈ ನಿಟ್ಟಿನಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.
ಯೋಜನೆ ಅಡಿ 1.75 ಲಕ್ಷ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೆ, 89 ಸಾರ್ವಜನಿಕ ಶೌಚಾಲಯಗಳು ಮತ್ತು 17 ಮಲ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗಿದೆ. 5,946 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ ಮಾದರಿ ಗ್ರಾಮಗಳಾಗಿ ಮನ್ನಣೆ ಪಡೆದಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸ್ವಚ್ಛ ಮತ್ತು ನಿರ್ಮಲ ರಾಜ್ಯ ನಿರ್ಮಾಣದತ್ತ ಯಶಸ್ವಿಯಾಗಿ ಸಾಗಿದ್ದು, ಈ ಸಂಖ್ಯೆಗಳು ಅದರ ಬದ್ಧತೆಗೆ ಪುರಾವೆಯಾಗಿವೆ.
