05/08/2025 6:52 AM

Translate Language

Home » ಲೈವ್ ನ್ಯೂಸ್ » ಶೀಘ್ರ 20 ಸಾವಿರ ಶಿಕ್ಷಕರ ನೇಮಕ ಮಾಡಲಾಗುವಾದು ಸಚಿವ ಮಧು ಬಂಗಾರಪ್ಪ

ಶೀಘ್ರ 20 ಸಾವಿರ ಶಿಕ್ಷಕರ ನೇಮಕ ಮಾಡಲಾಗುವಾದು ಸಚಿವ ಮಧು ಬಂಗಾರಪ್ಪ

Facebook
X
WhatsApp
Telegram

ಬೆಳಗಾವಿ.09.ಜುಲೈ .25:- ರಾಜ್ಯದಲ್ಲಿ ನಡೆತಿರುವ’ಒಳಮೀಸಲಾತಿ ಸಮೀಕ್ಷೆ ವರದಿ ಬಂದ ತಕ್ಷಣ ಶಾಲೆಗಳಿಗೆ ಮತ್ತು ಅನುದಾನಿತ ಶಾಲೆಗಳಿಗೆ, ಕಾಲೇಜುಗಳಿಗೆ ಒಟ್ಟು 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ನೂತನ ಕೊಠಡಿಗಳ ಉದ್ಘಾಟನೆ ಮತ್ತು 2025-26ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ಮೇಲೆ ವಿಶ್ವಾಸ ಇಟ್ಟು ಸಿಎಂ, ಡಿಸಿಎಂ ಅವರು ನನಗೆ ಮಹತ್ವದ ಇಲಾಖೆ ಕೊಟ್ಟಿದ್ದಾರೆ. ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳಿಗೆ, ದೇವಸ್ಥಾನಗಳ ಅಭಿವೃದ್ಧಿಗೆ ನಾನು ದೇಣಿಗೆ, ಅನುದಾನ ಕೊಡುವುದು ಕಡಿಮೆ. ಶಿಕ್ಷಣಕ್ಕೆ ಶಾಲಾ-ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುದಾನ ಕೊಡುತ್ತೇನೆ. 46 ಸಾವಿರ ಶಾಲೆಗಳ ಪೈಕಿ, 57 ಲಕ್ಷ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಡಲಾಗುತ್ತಿದೆ. ಮಕ್ಕಳಲ್ಲಿ ಪೌಷ್ಠಿಕತೆ ಮುಖ್ಯ, ಆರೋಗ್ಯ ಚನ್ನಾಗಿದ್ದರೆ ವಿದ್ಯೆ ತಲೆಗೆ ಹತ್ತುತ್ತದೆ’ ಎಂದರು.

‘ನೀಟ್, ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ವಿದ್ಯಾರ್ಥಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 25 ಸಾವಿರ ಮಕ್ಕಳಿಗೆ ಉಚಿತ ಕೋಚಿಂಗ್ ನೀಡುತ್ತಿದೆ. ಇದು ದೇಶದಲ್ಲಿಯೇ ಇತಿಹಾಸವಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕ್ರಮ ಕೈಕೊಳ್ಳಲಾಗುವದು. ಮಕ್ಕಳ ಕಲಿಕೆಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಬಡ ಮಕ್ಕಳ ಏಳ್ಗೆಗೆ ರಾಜ್ಯ ಸರಕಾರ ಹಗಲಿರುಳು ಶ್ರಮಪಡುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಬೈಲಹೊಂಗಲ ಸರಕಾರಿ ಪದವಿ ಪೂರ್ವ ಕಾಲೇಜು ಮಾದರಿಯಾಗಿದೆ. ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿರುವ ಶಾಸಕ ಮಹಾಂತೇಶ ಕೌಜಲಗಿ ಅವರ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.

ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿ ಮಾತನಾಡಿ, ‘ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೈಲಹೊಂಗಲ ಭಾಗಕ್ಕೆ ಬಂದಿದ್ದು ಖುಷಿ ತಂದಿದೆ’ ಎಂದರು.

ಡಿಡಿಪಿಐ ಲೀಲಾವತಿ ಹಿರೇಮಠ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ ಹನುಮಂತ ಶಿರಹಟ್ಟಿ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಧಾರವಾಡ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ, ತಾ.ಪಂ.ಇಒ ಸಂಜೀವ ಜುನ್ನೂರ, ಬಿಇಒ ಎ.ಎನ್.ಪ್ಯಾಟಿ, ಉದ್ಯಮಿ ರಾಜಶೇಖರ ಮೆಟಗುಡ್ಡ, ಪ್ರಾಚಾರ್ಯ ಎನ್.ಎಂ.ಕುದರಿಮೋತಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ ವಾಲಿ, ಸದಸ್ಯರಾದ ಈರಣ್ಣಾ ಬೆಟಗೇರಿ, ವೀರಣ್ಣಾ ಜವಳಿ, ಗಿರೀಶ ಗಡತರನವರ, ಆರ್.ಕೆ.ಪಾಟೀಲ, ಜಯಶ್ರೀ ಜೊಂಜಾಳೆ, ಪ್ರಕಾಶ ಬಡ್ಲಿ, ಶ್ರೀಶೈಲ ಮೊರಬದ, ಚಂದ್ರಶೇಖರ ಹೊಸೂರ, ಮಲ್ಲೇಶ ಹೊಸಮನಿ, ಅಂಬಿಕಾ ಕೋಟಬಾಗಿ ಇದ್ದರು. ಉಪನ್ಯಾಸಕ ಬಿ.ಎಂ.ಕೊಳವಿ ಪ್ರಾಸ್ತಾವಿಸಿದರು. ಸಬೀಯಾ ಯಕ್ಕುಂಡಿ ಸ್ವಾಗತಿಸಿದರು. ಪ್ರೀಯಾ ಹಿರೇಮಠ ಹಾಗೂ ಕಾವೇರಿ ಭಜಂತ್ರಿ ನಿರೂಪಿಸಿದರು. ಇದೇ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಂಜುನಾಥ ಹತ್ತಿ ಸ್ವತಃ, ಶಿಕ್ಷಣ ಸಚಿವರ ಭಾವಚಿತ್ರವನ್ನು ಕೈಬರಹದಲ್ಲಿ ಮೂಡಿಸಿದ ಭಾವಚಿತ್ರವನ್ನು ನೀಡಿ, ಎಲ್ಲರ ಗಮನ ಸೆಳೆದನು.

ಸಚಿವರು ಬೈಲಹೊಂಗಲ ಗುರು ಭವನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು, ನಯಾನಗರ, ವಕ್ಕುಂದ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಬೈಲಹೊಂಗಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕೊಠಡಿಗಳ ಉದ್ಘಾಟನೆ ಹಾಗೂ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ, ಸಾಧಕ ವಿದ್ಯಾರ್ಥಿಗಳನ್ನು ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD