ರಾಯಚೂರು.07.ಆಗಸ್ಟ್.25: ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಶಿಶು ಪಾಲನಾ ಕೇಂದ್ರ ಪ್ರಾರಂಭಿಸಲಾಗಿದ್ದು, ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿಶು ಪಾಲನಾ ಕೇಂದ್ರದಲ್ಲಿ ಶಿಕ್ಷಕಿ (ಕಾರ್ಯಕರ್ತೆ) 01 ಹುದ್ದೆಗೆ ಪದವಿ ವಿದ್ಯಾರ್ಹತೆ ಪಡೆದಿರಬೇಕು. ಶಾಲಾ ಪೂರ್ವ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು. ಮಾಸಿಕ 10 ಸಾವಿರ ರೂ.ಗಳನ್ನು ಗೌರವಧನ ನೀಡಲಾಗುವುದು.
ಸಹಾಯಕಿ 02 ಹುದ್ದೆಗೆ ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಪಡೆದಿರಬೇಕು. ಶಿಶು ಪಾಲನಾ ಕೇಂದ್ರದ ಹತ್ತಿರ ವಾಸವಿರಬೇಕು.
ಮಾಸಿಕ 6 ಸಾವಿರ ರೂ.ಗಳನ್ನು ಗೌರವಧನ ನೀಡಲಾಗುವುದು.
ವಿಶೇಷ ಸೂಚನೆಗಳು: ಹುದ್ದೆಗಳು ಶಿಶು ಪಾಲನಾ ಕೇಂದ್ರ ಯೋಜನೆಯು ಜಾರಿಯಲ್ಲಿರುವವರೆಗೆ ಮಾತ್ರ ಇರುತ್ತವೆ.
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಿಧ್ಯಾರ್ಹತೆ ಪಡೆದಿರಬೇಕು. ಕಂಪ್ಯೂಟರ್ ಜ್ಞಾನದ ಬಗ್ಗೆ ಖಾತ್ರಿ ಪಡಿಸಿಕೊಂಡು ಕೌಶಲ್ಯ ಪರೀಕ್ಷೆ ನಡೆಸಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. (ಶಿಕ್ಷಕಿ ಅಥವಾ ಕಾರ್ಯಕರ್ತೆ ಹುದೆಗೆ ಮಾತ್ರ ಅನ್ವಯ). ಅಭ್ಯರ್ಥಿಗಳ ಆಯ್ಕೆಯು ತಾತ್ಕಾಲಿಕವಾಗಿರುತ್ತದೆ. ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ತಾತ್ಕಾಲಿಕ ಹುದ್ದೆಗಳಾಗಿರುವುದರಿಂದ ಯಾವುದೇ ಮೀಸಲಾತಿಗಳು ಅನ್ವಯಿಸುವುದಿಲ್ಲ. ಈ ಮೇಲಿನ ಹುದ್ದೆಗಳ ಕರ್ತವ್ಯವು ಕ್ಷೇತ್ರಮಟ್ಟದಲ್ಲಿ ನಿರ್ವಹಿಸಬೇಕಾಗಿರುತ್ತದೆ. ಈ ಹುದ್ದೆಗಳಿಗೆ ರಾಯಚೂರು ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದ ಪಕ್ಷದಲ್ಲಿ ಯೋಜನೆಯ ಅನುಷ್ಠಾನದ ಹಿತದೃಷ್ಠಿಯಿಂದ ಆಯ್ಕೆ ಸಮಿತಿಯ ತೀರ್ಮಾನದಂತೆ ಹಾಗೂ ನಿಗಧಿಪಡಿಸಿದ ಮಾನದಂಡದoತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಗಳು ನಕಲಿ ಅಥವಾ ಖೊಟ್ಟಿ ಎಂದು ಸಾಬಿತಾದಲ್ಲಿ ಆಯ್ಕೆಯನ್ನು ಕೈಬಿಟ್ಟು ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ದಾಖಲೆಗಳು: ನಿಗಧಿತ ನಮೂನೆಯಲ್ಲಿ ಅರ್ಜಿ. ಹುದ್ದೆಗೆ ನಿಗಧಿಪಡಿಸಿದ ವಿಧ್ಯಾರ್ಹತೆಯ ದಾಖಲಾತಿಗಳು. ಅನುಭವ ಪ್ರಮಾಣ ಪತ್ರಗಳು. ಕಂಪ್ಯೂಟರ್ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣ ಪತ್ರ (ಶಿಕ್ಷಕಿ/ ಕಾರ್ಯಕರ್ತೆ ಹುದ್ದೆಗೆ ಮಾತ್ರ ಅನ್ವಯ).
ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರದೊಂದಿಗೆ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 14ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಕಚೇರಿ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅವಧಿ ಮುಗಿದ ನಂತರ ಬಂದ ಯಾವುದೇ ಅರ್ಜಿಗಳು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸ್ತಿçÃಶಕ್ತಿ ಒಕ್ಕೂಟ, ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಐ.ಡಿ.ಎಸ್.ಎಂ.ಟಿ ಲೇ ಔಟ್ ಮಂತ್ರಾಲಯ ರೋಡ್, ರಾಯಚೂರು-584101, ಮೊಬೈಲ್ ಸಂಖ್ಯೆ: 9620566307ಗೆ ಸಂಪರ್ಕಿಸುವAತೆ ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.