Home » ಲೈವ್ ನ್ಯೂಸ್ » ಶಿಕ್ಷಕರ ಹುದ್ದೆಗಳು ಭರ್ತಿ’ಗೆ ಹೊಸ ನಿಯಮ, ಸಿಇಟಿ, ಟಿಇಟಿ ಸೇರಿ 90 ಅಂಕ, ಪದವಿ, ಬಿ.ಇಡಿಯಿಂದ 10 ಅಂಕ ನಿಗದಿ.

ಶಿಕ್ಷಕರ ಹುದ್ದೆಗಳು ಭರ್ತಿ’ಗೆ ಹೊಸ ನಿಯಮ, ಸಿಇಟಿ, ಟಿಇಟಿ ಸೇರಿ 90 ಅಂಕ, ಪದವಿ, ಬಿ.ಇಡಿಯಿಂದ 10 ಅಂಕ ನಿಗದಿ.

Facebook
X
WhatsApp
Telegram



ಬೆಂಗಳೂರು.15.ಫೆಬ್ರವರಿ.26: ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳಿಗೆ ಸರ್ಕಾರವು ತಿದ್ದುಪಡಿ ತಂದು ಕರಡು ರಾಜ್ಯಪತ್ರ ಪ್ರಕಟಿಸಿದ್ದು, ಪದವಿ ಮತ್ತು ಬಿ.ಇಡಿ ಕೋರ್ಸ್‌ಗಳನ್ನು ನೆಪಮಾತ್ರಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆದ್ಯತೆ ನೀಡಲಾಗಿದೆ.

ಕೋಚಿಂಗ್ ಕೇಂದ್ರಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ದೇಶದ ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ವಾಗಿ ಪರಿಷ್ಕರಿಸುವ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ನೇಮಿಸಿದ ಉನ್ನತ ಶಿಕ್ಷಣ ಸಮಿತಿ ಶಿಫಾರಸು ಮಾಡಿದೆ. ಆದರೆ, ರಾಜ್ಯದಲ್ಲಿ ಅದಕ್ಕೆ ತದ್ವಿರುದ್ಧವಾಗಿ ಸಿಇಟಿ, ಟಿಇಟಿಗೆ ಆದ್ಯತೆ ನೀಡುವ ಮೂಲಕ ಕೋಚಿಂಗ್ ಮೇಲಿನ ಅವಲಂಬನೆ ಪ್ರಮಾಣ (ವೇಯೇಜ್) ಅಂಕಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. 100ರಲ್ಲಿ 90 ಅಂಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆದ್ಯತೆ ನೀಡಿದೆ. ಇದರಿಂದ ಪದವಿ ಮತ್ತು ಬಿ.ಇಡಿ ಕೋರ್ಸ್‌ಗಳು ನೆಪಮಾತ್ರಕ್ಕೆ ಎನ್ನುವಂತಾಗಿದೆ. 6ರಿಂದ 8ನೇ ತರಗತಿಗೆ ಬೋಧಿಸಲು ಪದವೀಧರ ಶಿಕ್ಷಕರ ನೇಮಕಾತಿಗೆ ನಡೆಸುವ ಸಿಇಟಿಗೆ 70 ಅಂಕ. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) 20 ಅಂಕ, ಪದವಿಗೆ 8 ಮತ್ತು ಬಿ.ಇಡಿಗೆ ಕೇವಲ 2 ಅಂಕಗಳನ್ನು ನಿಗದಿ ಮಾಡಿದೆ. ಹೆಚ್ಚಾಗುವಂತೆ ಮಾಡಿದೆ. ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಒಟ್ಟು ನೂರು ಅಂಕಗಳಿಗೆ ಪರಿಗಣಿಸಿ ನೇಮಕ ಮಾಡಲಾಗುತ್ತದೆ. ಸಿಇಟಿ, ಟಿಇಟಿ, ಪದವಿ ಮತ್ತು ಬಿ.ಇಡಿ ಕೋರ್ಸ್‌ಗಳ ಪರಿಗಣಿಸುವ

ನಿಯಮಗಳಲ್ಲಿ ವ್ಯತ್ಯಾಸವೇನು?: 1ರಿಂದ 5ನೇ

ತರಗತಿ ಶಿಕ್ಷಕರ ನೇಮಕಾತಿಗೆ ಸಿಇಟಿಯಲ್ಲಿ ಪ್ರಸ್ತುತ 35 ಇರುವ ಅಂಕಗಳನ್ನು 70ಕ್ಕೆ, ಟಿಇಟಿ 15ರಿಂದ 20ಕ್ಕೆ ಹೆಚ್ಚಳ ಮಾಡಿದ್ದು, ಡಿಇಡಿಯಲ್ಲಿ 25ರಿಂದ 8 ಹಾಗೂ ಪಿಯುಸಿಯಲ್ಲಿ 25ರಿಂದ 2ಕ್ಕೆ ಇಳಿಕೆ ಮಾಡಿದೆ. 6ರಿಂದ 8ನೇ ತರಗತಿಯಲ್ಲಿ ಸಿಇಟಿಯಲ್ಲಿ 35 ಇರುವ ಅಂಕಗಳನ್ನು 70ಕ್ಕೆ, ಟಿಇಟಿ 15ರಿಂದ 20ಕ್ಕೆ ಹೆಚ್ಚಳ ಮಾಡಿದ್ದು, ಬಿಇಡಿಯಲ್ಲಿ 25ರಿಂದ 2 ಹಾಗೂ ಪದವಿಯಲ್ಲಿ 25ರಿಂದ 8ಕ್ಕೆ ಇಳಿಕೆ ಮಾಡಿದೆ

25

8

ಆಕ್ಷೇಪಣೆಗೆ ಅವಕಾಶ

ನೇಮಕಾತಿ ಪರೀಕ್ಷೆಯ ನಿಯಮಗಳನ್ನು ತಿದ್ದುಪಡಿ ಕರಡು ರಾಜ್ಯಪತ್ರಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಿದೆ. ಆಸಕ್ತರು ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹು ಮಹಡಿ ಕಟ್ಟಡ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು-560 001 ಇಲ್ಲಿಗೆ ಕಳುಹಿಸಬಹುದು.

ಬಡ್ತಿ ನಿಯಮಗಳಿಗೆ ತಿದ್ದುಪಡಿ

70

15

20

ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಮತ್ತು ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಶಿಕ್ಷಕರಾಗಿ ಬಡ್ತಿ ನೀಡುವ ನಿಯಮಗಳ ಸಿ ಆ್ಯಂಡ್ ಆರ್ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು, ಕರಡು ರಾಜ್ಯಪತ್ರ ಪ್ರಕಟಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‌ಟಿ) ಹಾಗೂ ಪದವೀಧರ ಶಾಲಾ ಶಿಕ್ಷಕರು (ಜಿಪಿಟಿ) ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಅರ್ಹರಿದ್ದು, ಕನಿಷ್ಠ 12 ವರ್ಷ ಸೇವೆ ಸಲ್ಲಿಸಿರುವವರು ಅರ್ಹರಾಗಿರುತ್ತಾರೆ. ಪಿಎಸ್‌ಟಿ ಹಾಗೂ ಜಿಪಿಟಿ ಶಿಕ್ಷಕರು ಕ್ರಮವಾಗಿ 2:1ರ ಅನುಪಾತದಲ್ಲಿ ಬಡ್ತಿಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ. ಈ ಮೊದಲು 1ರಿಂದ 7ನೇ ತರಗತಿವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸಿದ್ದರಿಂದ ಅನುಪಾತ ಇರಲಿಲ್ಲ. ಪದವೀಧರ ಶಿಕ್ಷಕರ ವಿಭಾಗ ಮಾಡಿದ ನಂತರ ಈಗ ಅನುಪಾತ ನೀಡಲಾಗುತ್ತಿದೆ. ಬಡ್ತಿ ಪಡೆಯಲು ಕನಿಷ್ಠ 5 ವರ್ಷವಿದ್ದ ಸೇವಾ ಅವಧಿಯನ್ನು 12 ವರ್ಷಕ್ಕೆ ಹೆಚ್ಚಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನ ಅವಕಾಶ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ (ಆಡಳಿತ) ಮಲ್ಲಿಕಾರ್ಜುನ ರಾಮಚಂದ್ರಪ್ಪ ಅಧಿಸೂಚನೆ ಪ್ರಕಟಿಸಿದ್ದಾರೆ.

ಪರ-ವಿರೋಧ ಪಕ್ಷೆಗಳಿಗೆ ಆದ್ಯತೆ ನೀಡಿರುವುದು ಸರಿಯಾಗಿದೆ. ಪದವಿಯಲ್ಲಿ ಸೆಮಿಸ್ಟರ್ ಅಭಿಪ್ರಾಯ

ಬದಲಾವಣೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ಪರ್ಧಾತ್ಮಕ ಹಾಗೂ ಆಂತರಿಕ ಅಂಕಗಳನ್ನು ಪರಿಗಣಿಸಿದ ನಂತರ ಪದವಿ ಫಲಿತಾಂಶದಲ್ಲಿ ಸುಧಾರಣೆ ಮಾಡಲಾಗಿದೆ. ಅಲ್ಲದೆ, ಕರೊನಾ ಸಮಯದಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಇದರಿಂದ ಕರೋನಾ ಮೊದಲು ಪದವಿ ಪಡೆದಿರುವವರಿಗೆ ಅನ್ಯಾಯವಾಗಲಿದೆ ಎಂದು ಕೆಲ ಆಕಾಂಕ್ಷಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿಕ್ಷಕರಾಗುವವರಿಗೆ ಶಿಸ್ತು, ಸಂಯಮ, ಬೋಧನಾ ವಿಧಾನವನ್ನು ಒಳಗೊಂಡ ಬಿ.ಇಡಿ ಕೋರ್ಸ್ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದಕ್ಕೂ ಹೆಚ್ಚಿನ ಪ್ರಾಶಸ್ತ್ರ ನೀಡಬೇಕು ಎಂಬುದು ಕೆಲವರ ವಾದವಾಗಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology