ಬೆಂಗಳೂರು.09.ಜುಲೈ.25:- ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಶಾಲೆಗೆ ಚಕ್ಕರ್ ಹಾಕೋದಕ್ಕೆ ಬ್ರೇಕ್ ಬೀಳಲಿದೆ ಇನ್ಮುಂದೇ ಶಿಕ್ಷಕರಿಗೆ ಮುಖ ಚಹರೆ ಹಾಜರಾತಿ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ. ಅಲ್ಲದೇ ಪಾಠ ಮಾಡದೇ ಕಳ್ಳಾಟ ಮಾಡೋದಕ್ಕೆ ಬ್ರೇಕ್ ಹಾಕಲಾಗುತ್ತಿದೆ.
ರಾಜ್ಯದಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿಯ ಆನ್‌ಲೈನ್ ಹಾಜರಾತಿಗೆ ಚಾಲನೆ ನೀಡಲಾಗಿದೆ. ಇನ್ನು ಮುಂದೆ ಖೊಟ್ಟಿ ಹಾಜರಾತಿಗೆ ತಡೆ ಬೀಳಲಿದೆ. ಶಾಲೆ ತಲುಪಿದ ಬಳಿಕ ಶಿಕ್ಷಕರು ಆನ್‌ಲೈನ್ ಹಾಜರಾತಿ ಹಾಕಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಗೆ ಬರುತ್ತಾರೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೆರವಾಗಲಿದೆ. ಶೀಘ್ರವೇ ರಾಜ್ಯದಲ್ಲಿನ 57 ಲಕ್ಷ ವಿದ್ಯಾರ್ಥಿಗಳ ಮುಖ ಚಹರೆ ಆಧರಿಸಿ ಆನ್‌ಲೈನ್ ಹಾಜರಾತಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯದಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿಯ ಆನ್‌ಲೈನ್ ಹಾಜರಾತಿಗೆ ಚಾಲನೆ ನೀಡಲಾಗಿದೆ.
ಇನ್ನು ಮುಂದೆ ಖೊಟ್ಟಿ ಹಾಜರಾತಿಗೆ ತಡೆ ಬೀಳಲಿದೆ. ಶಾಲೆ ತಲುಪಿದ ಬಳಿಕ ಶಿಕ್ಷಕರು ಆನ್‌ಲೈನ್ ಹಾಜರಾತಿ ಹಾಕಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಗೆ ಬರುತ್ತಾರೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೆರವಾಗಲಿದೆ. ಶೀಘ್ರವೇ ರಾಜ್ಯದಲ್ಲಿನ 57 ಲಕ್ಷ ವಿದ್ಯಾರ್ಥಿಗಳ ಮುಖ ಚಹರೆ ಆಧರಿಸಿ ಆನ್‌ಲೈನ್ ಹಾಜರಾತಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.