ಬೀದರ.07.ಆಗಸ್ಟ್.25:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ಜಿಲ್ಲಾ ವಕೀಲರ ಸಂಘ ಮತ್ತು ಬೀದರ ತಾಲೂಕ ಪಂಚಾಯತ, ಚಿಲರ್ಗಿ ಗ್ರಾಮ ಪಂಚಾಯತ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಚಿಲರ್ಗಿ ಗ್ರಾಮ ಪಂಚಾಯತದಲ್ಲಿ ಹಮ್ಮಿಕೊಂಡಿದ್ದ ಶಾಶ್ವತ ಲೋಕ ಅದಾಲತನ ಮಹತ್ವ ಮತ್ತು ಅದರ ಕಾರ್ಯವೈಖರಿ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ ಅವರು ದೀಪ ಬೇಳಗುವುದರ ಮೂಲಕ ಉದ್ಛಾಟಿಸಿದರು.
ನಂತರ ಮಾತನಾಡಿ ಶಾಶ್ವತ ಲೋಕ ಅದಾಲತ್ನ ಮಹತ್ವ ಮತ್ತು ಅದರ ಕಾರ್ಯವೈಖರಿ ಬಗ್ಗೆ ಮಾತನಾಡಿದರು. ನಂತರ ಸರ್ಕಾರಿ ಹಿರಿಯ ಪ್ರಾಧಮಿಕ ಶಾಲೆಯನ್ನು ಭೇಟಿ ನೀಡಿ ಶಾಲೆಯನ್ನು ವೀಕ್ಷಣೆ ಮಾಡಿದರು ಮತ್ತು ಅಲ್ಲಿನ ಜನರು ತಿಳಿಸಿರುವಂತೆ ಅಲ್ಲಿನ ಬಡಾವಣೆಗಳಿಗೆ ಭೇಟಿನೀಡಿ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದರು
ಬೀದರ ತಾಲ್ಲೂಕ ಪಂಚಾಯತ ಸಹಾಯಕ ನಿರ್ದೇಶಕ (ಗ್ರಾ.ಉ.) ಸುಧೀಶಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು.
ಉಪನ್ಯಾಸಕರಾಗಿ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕುರಿತು ವಕೀಲರಾದ ಬಿ. ಕೃಷ್ಣಪ್ಪಾ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಚಿಲರ್ಗಿ ಗ್ರಾಮ ಪಂಚಾಯತ ಪಿಡಿಓ ಪೂಜಾಶ್ರೀ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು, ಗ್ರಾಮ ಪಂಚಾಯತ ಸಿಬ್ಬಂಧಿ ವರ್ಗದವರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.