|

ಶತಾಯುಷಿ ಪೂಜ್ಯ ಶ್ರೀ ಡಾ. ಭೀಮಣ್ಣ ಖಂಡ್ರೆ ಅವರಿಗೆ ಕೇರಳದ ಪ್ರತಿಷ್ಠಿತ ಬಸವರತ್ನ ಪುರಸ್ಕಾರ

ಭಾಲ್ಕಿ.26.ಏಪ್ರಿಲ್.25:- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ – ಕೇರಳ ರಾಜ್ಯ ಘಟಕ ನೀಡುವ ಅತ್ಯುನ್ನತ ಗೌರವ “ಬಸವರತ್ನ ಪುರಸ್ಕಾರ”ಕ್ಕೆ ಹಿರಿಯ ಸಮಾಜ ಸೇವಕ, ಮಾಜಿ ಸಾರಿಗೆ ಸಚಿವರು ಹಾಗೂ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಮೇ 4ರಂದು ತಿರುವನಂತಪುರಂ ಜಿಲ್ಲೆಯ ವಟ್ಟಾಪ್ಪುರದ ವೀರಶೈವ ಭವನದಲ್ಲಿ ನಡೆಯುವ ಬಸವ ಜಯಂತಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಭೀಮಣ್ಣ ಖಂಡ್ರೆ ಅವರ ಪರವಾಗಿ ಅವರ ಸುಪುತ್ರರಾದ,  ಕರ್ನಾಟಕ ಸರಕಾರದ ಅರಣ್ಯ ಮತ್ತು ಪರಿಸರ ಸಚಿವರಾದ ಸನ್ಮಾನ್ಯ ಶ್ರೀ: ಈಶ್ವರ ಬಿ.ಖಂಡ್ರೆ ರವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಘಟಕದ ಅಧ್ಯಕ್ಷ ಭೀನು ಕೆ. ಶಂಕರ್ ತಿಳಿಸಿದ್ದಾರೆ.

ಡಾ. ಭೀಮಣ್ಣ ಖಂಡ್ರೆ ಅವರು ನಿಷ್ಠಾವಂತ ಸಮಾಜ ಸೇವಕ ಹಾಗೂ ಬಸವ ತತ್ವದ ಅನುಯಾಯಿಯಾಗಿ ಮಹಾಸಭಾದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ ಮಹಾನ ಮೇರು ನಾಯಕ.

Similar Posts

Leave a Reply

Your email address will not be published. Required fields are marked *