02/08/2025 2:25 AM

Translate Language

Home » ಲೈವ್ ನ್ಯೂಸ್ » ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Facebook
X
WhatsApp
Telegram

ಕೊಪ್ಪಳ.31.ಜುಲೈ.25: ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ವೀರಭದ್ರಪ್ಪ ಲಾಳಿ ಎಂಬ 36 ವರ್ಷದ ವ್ಯಕ್ತಿಯು 2023ರ ಸೆಪ್ಟೆಂಬರ್ 17ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ತಾವರಗೇರಾ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವೀರಭದ್ರಪ್ಪ ಲಾಳಿ ಇತನು 2023ರ ಸೆಪ್ಟೆಂಬರ್ 17ರಂದು ಮಧ್ಯಾಹ್ನ ಸುಮಾರು 1.30 ಗಂಟೆಗೆ ತವರಗೆರಾ ಪಟ್ಟಣದ ತಮ್ಮ ಮನೆಯಿಂದ ಗಣೇಶ ಹಬ್ಬದ ನಿಮಿತ್ಯ ಸಾರ್ವಜನಿಕ ಸ್ಥಳದಲ್ಲಿನ ಗಣೇಶನನ್ನು ನೋಡಿ ಬರುವುದಾಗಿ ಹೇಳಿ ಹೋಗಿ, ವಾಪಸ್ಸ ಮನೆಗೆ ಬಾರದಿದ್ದಾಗ ಕುಷ್ಟಗಿ, ಇಲಕಲ್ಲ, ಕೊಪ್ಪಳ, ಮಸ್ಕಿ, ಹುನಗುಂದ ಮತ್ತು ಬೆಂಗಳೂರು ಸೇರಿದಂತೆ ಮುಂತಾದ ಕಡೆಗಳಲ್ಲಿ ಹುಡುಕಾಡಿದಾಗಲೂ ಸಹ ಸಿಕ್ಕಿರುವುದಿಲ್ಲ ಎಂದು ಪಿರ್ಯಾದಿದಾರರಾದ ವ್ಯಕ್ತಿಯ ಹೆಂಡತಿಯು ದೂರು ನೀಡಿದ್ದು, ತಾವರಗೇರಾ ಪೊಲೀಸ್ ಠಾಣಾ ಗುನ್ನೆ ನಂ: 57/2024 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ: ಕಾಣೆಯಾದ ವ್ಯಕ್ತಿಯು ಸದೃಢ ಮೈಕಟ್ಟು, ಸಾದಕಪ್ಪು ಮೈಬಣ್ಣ ಹಾಗೂ ಕೋಲು ಮುಖ ಹೋಂದಿದ್ದು 5.2 ಫಿಟ್ ಎತ್ತರ ಇದ್ದು, ಕನ್ನಡ ಮಾತನಾಡುತ್ತಾನೆ.

ಈ ವ್ಯಕ್ತಿಯು ಕಾಣೆಯಾದದಾಗ ನೀಲಿ ಬಣ್ಣವುಳ್ಳ ಹೂವಿನ ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು.

ಈ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ತಾವರಗೇರಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 9480803758, 08536-275322 ಮತ್ತು ಕೊಪ್ಪಳ ಎಸ್.ಪಿ ಮೊ.ಸಂ: 9480803701, 08539-230111, ಗಂಗಾವತಿ ಡಿ.ಎಸ್.ಪಿ ದೂರವಾಣಿ ಸಂಖ್ಯೆ: 9480803721 ಮತ್ತು 08536-230853 ಅಥವಾ ಕುಷ್ಟಗಿ ಸಿ.ಪಿ.ಐ ಮೊ.ಸಂಖ್ಯೆ: 9480803732 ಮತ್ತು 08536-267033 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ತಾವರಗೇರಾ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!