05/08/2025 3:16 AM

Translate Language

Home » ಲೈವ್ ನ್ಯೂಸ್ » ವೈದ್ಯಕೀಯ ಆಕಾಂಕ್ಷಿಗಳೇ ಹತಾಶೆಗೊಳ್ಳಬೇಡಿ ವಿಸ್ಡಮ್ ನಿಮ್ಮ ಕನಸನ್ನು ನನಸಾಗಿಸುತ್ತದೆ

ವೈದ್ಯಕೀಯ ಆಕಾಂಕ್ಷಿಗಳೇ ಹತಾಶೆಗೊಳ್ಳಬೇಡಿ ವಿಸ್ಡಮ್ ನಿಮ್ಮ ಕನಸನ್ನು ನನಸಾಗಿಸುತ್ತದೆ

Facebook
X
WhatsApp
Telegram

ಬೀದರ.13.ಜುಲೈ.25:- ವೈದ್ಯಕೀಯ ಆಕಾಂಕ್ಷಿಗಳೇ ಹತಾಶೆಗೊಳ್ಳಬೇಡಿ ವಿಸ್ಡಮ್ ನಿಮ್ಮ ಕನಸನ್ನು ನನಸಾಗಿಸುತ್ತದೆ
ವಿಸ್ಡಮ್ ಕಾಲೇಜು ಮತ್ತು ನೀಟ್ ಅಕಾಡಮಿ ಬೀದರನಲ್ಲಿ ೨೦೨೬ರ ನೀಟ್ ರಿಪೀಟರ್ ಬ್ಯಾಚನ್ನು ಅದ್ಧೂರಿಯಾಗಿ ಉದ್ಘಾಟಿಸಿದರು
ಪತ್ರಿಕಾ ಪ್ರಕಟನೆಗಾಗಿ ಬೀದರ ಜುಲೈ ೯: ವಿಸ್ಡಮ್ ಕಾಲೇಜು ಮತು ನೀಟ್ ಅಕಾಡೆಮಿ, ಬೀದರನ ಸಿ.ಇ.ಒ ಪ್ರೊಫೆಸರ್ ಶ್ರೀ ಮದಾರ ಅವರ ಪ್ರಕಾರ ೨೦೨೬ರ ನೀಟ್ ರಿಪೀಟರ್ ಬ್ಯಾಚನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು.

ಐ.ಎಂ.ಎ ಮಾಜಿ ಅಧ್ಯಕ್ಷ ಮತ್ತು ಎಂ.ಆರ್.ಎಫ್.ನ ಹಾಲಿ ಅಧ್ಯಕ್ಷ ಡಾ. ಮಕ್ಸೂದ ಚಂದಾ ಅವರು ಈ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಉದ್ಘಾಟಿಸಿದರು. ಈ ಉದ್ಘಾಟನಾ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿದ್ದ ಶ್ರೀ ರಾಜೇಂದ್ರ ಮಣಗೆರೆ ಅರುಣೋದಯ ಪ್ರೌಢಶಾಲೆ ಮತ್ತು ಖಾಸಗಿ ಶಾಲೆಗಳ ಸಂಘ, ಬೀದರನ ಜಿಲ್ಲಾ ಅಧ್ಯಕ್ಷ. ಶ್ರೀ ಮುಹಮ್ಮದ ಗೌಸ ಸಿ.ಎಮ್.ಸಿ ಬೀದರನ ಅಧ್ಯಕ್ಷರು ಮತ್ತು ಡಾ. ರಫೀಕ್ ಅಹ್ಮದ ಭಾಗವಹಿಸಿದ್ದರು.


ವಿಸ್ಡಮ್ ಕಳೆದ ಎರಡು ದಶಕಗಳಿಂದ ಯಶಸ್ಸಿನ ಗುರಿಯತ್ತ ಸಾಗುತ್ತಿದೆ. ವಿಸ್ಡಮ್ ಆಡಳಿತ ಮಂಡಳಿ ಬೀದರ್‌ಗೆ ಮಾತ್ರವಲ್ಲದೆ ದೇಶಕ್ಕೂ ಒಂದು ಉಡುಗೊರೆಯಾಗಿದೆ ಎಂದು ಶ್ರೀ ರಾಜೇಂದ್ರ ಮಣಗೆರೆ ಹೇಳಿದರು. ಇವರು ವಿದ್ಯಾರ್ಥಿಗಳಿಗೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ ಎಂದರು.
ಡಾ. ರಫೀಕ ಅಹ್ಮದ್ (ಪಿ.ಎಚ್.ಡಿ) ವಿದ್ಯಾರ್ಥಿಗಳಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಉದಾಹರಣೆಯನ್ನು ನೀಡಿದರು ಮತ್ತು ಅವರು ಮೊದಲ ಬಾರಿಗೆ ಕ್ಷಿಪಣ ಯನ್ನು ತಯಾರಿಸಿದಾಗ ಅವರು ಯಶಸ್ಸನ್ನು ಪಡೆಯಲಿಲ್ಲ, ಅವರು ಆತ್ಮವಿಶ್ವಾಸವನ್ನು  ಕಳೆದುಕೊಳ್ಳಲಿಲ್ಲ. ಅವರು ಎರಡನೇ ಬಾರಿಗೆ ಪ್ರಯತ್ನ ಮಾಡಿ ಯಶಸ್ವಿಯಾದರು ಎಂದು ಹೇಳಿದರು. ಇದು ಅವರನ್ನು ಕ್ಷಪಣ  ಮನುಷ್ಯನನ್ನಾಗಿ ಮಾಡಿತು. ಅದೇ ರೀತಿ ವೈದ್ಯಕೀಯ ಅಕಾಂಕ್ಷಿಗಳಿಗೆ ನಾನು ಹೇಳುವುದೆನೆಂದರೆ ಅವರು ನಿರಾಶೆಗೊಳ್ಳಬಾರದು ಅವರು ಮತ್ತೋಮ್ಮೆ ವಿಸ್ಡಮನಲ್ಲಿ ನೀಟ್ ರಿಪೀಟ ಮಾಡಿ ಖಂಡಿತವಾಗಿಯೂ ಯಶಸ್ಸು ಅವರ ಪಾದಗಳಿಗೆ ಮುತ್ತಿಡುತ್ತದೆ ಎಂದು ನುಡಿದರು. 


ಈ ಸಂದರ್ಭದಲ್ಲಿ ನೀಟ್‌ನಲ್ಲಿ ೫೪೫ ಅಂಕಗಳನ್ನು ಗಳಿಸಿದ ಮತ್ತು ರಾಜ್ಯ ವೈದ್ಯಕೀಯ ಶ್ರೇಣ  ೭೮೬ ಹೊಂದಿರುವ ಮುಹಮ್ಮದ ಇಸ್ಮಾಯಿಲ್ ತಂದೆ ಮುಹಮ್ಮದ ಅಖೀಲ್ ಬಗ್ದಲ್, ಇವರು ವಿಸ್ಡಮ್ ನೀಟ್ ತರಬೇತಿಗಾಗಿ ಸಂಘಟಿತ ಯೋಜನೆ, ಸಾಪ್ತಾಹಿಕ ಪರೀಕ್ಷೆಗಳು, ನುರಿತ ತಜ್ಞ ಮತ್ತು ಅನುಭವಿ ನೀಟ್ ಉಪನ್ಯಾಸಕರ ತಂಡವನ್ನು ವಿಸ್ಡಮ್ ಸಂಸ್ಥೆ ಹೊಂದಿದೆ ಎಂದು ಹೇಳಿದರು. ಅಧ್ಯಕ್ಷ ಮುಹಮ್ಮದ ಆಸಿಫುದ್ದೀನ್ ಮತು ಎಲ್ಲಾ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.


ಹುಮಾ ನಶ್ರಾ ತಂದೆ ಮಿರ್ಜಾ ಇಶ್ರತ್ ಉಲ್ಲಾ ಬೇಗ, ಮುನಝ್ಹಾ ಶಾಹ್ಜರೀನ ತಂದೆ ಚಾಂದ ಶರೀಫ್ ಅವರು ವೈದ್ಯರಾಗುವುದು ನಮ್ಮ ಕನಸು ಅದಕ್ಕಾಗಿ ನಾವು ವಿಸ್ಡಮ್‌ನ ನೀಟ್ ರಿಪೀಟರ್ ಬ್ಯಾಚ್‌ನಲ್ಲಿ  ಪ್ರವೇಶ ಪಡೆದಿದ್ದೇವೆ ಮತ್ತು ಮುಂದಿನ ವರ್ಷ ನಮಗೆ ಉಚಿತ ಸರ್ಕಾರಿ ವೈದ್ಯಕೀಯ ಸೀಟು ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.


ಅದೇ ರೀತಿ ಪ್ರಿಯಂಕಾ ತಂದೆ ಅಶೋಕ, ಮುಹಮ್ಮದ ನೋಮಾನ ಹುಸೇನ್ ತಂದೆ ಮುಹಮ್ಮದ ಮಾಜೀದ ಹುಸೇನ, ಮುಹಮ್ಮದ ತಲ್ಹಾ ಹುಸೇನ ತಂದೆ ತಜಮ್ಮುಲ ಹುಸೇನ್, ಸಾಯಿ ಹರ್ಶಿಕ ತಂದೆ ಶ್ರೀಧರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಿಂದ ಪ್ರೇರಿತರಾಗಿ ಸ್ಥಳದಲ್ಲೆ ವಿಸ್ಡಮ್  ೨೦೨೬ರ ನೀಟ್ ರಿಪೀಟರ್ ಬ್ಯಾಚಗೆ ಪ್ರವೇಶ ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಶ್ರೀ ಮುಹಮ್ಮದ ಆಸಿಫುದ್ದೀನ್ ಅಧ್ಯಕ್ಷರು ವಿಶೇಷ ಅತಿಥಿಗಳು ಮತ್ತು ನೀಟ್‌ನಲ್ಲಿ ವಿಶಿಷ್ಟ ಯಶಸ್ಸನ್ನು ಸಾಧಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತು ಎಲ್ಲಾ ಅತಿಥಿಗಳು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪೋಷಕರನ್ನು ಸ್ವಾಗತಿಸಿದರು.
ಈ ವರ್ಷ ವಿಸ್ಡಮ್ ೨೦೨೬ರ ನೀಟ್ ರಿಪೀಟರ ಬ್ಯಾಚ್‌ಗಾಗಿ ೨೦೦ ವಿದ್ಯಾರ್ಥಿಗಳಿಗೆ (೧೦೦ ಹುಡುಗಿಯರು ಮತ್ತು ೧೦೦ ಹುಡುಗರು) ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿವೇತನವನ್ನು ನೀಡಲಿದೆ ಎಂದು ಅವರು ಹೇಳಿದರು. ಹೆಚ್ಚಿನ ವಿವರಗಳಿಗಾಗಿ, ವಿಸ್ಡಮ್‌ನ ವೆಬ್‌ಸೈಟ್ ತಿತಿತಿ.ತಿisಜomiಟಿsಣiಣuಣioಟಿ.ಛಿom ನಲ್ಲಿ ಅಥವಾ ಕಿಖ ಕೋಡ್ ಸ್ಕಾö್ಯನ್ ಮಾಡುವ ಮೂಲಕ ವಿವರಗಳನ್ನು ಪಡೆದುಕೊಳ್ಳಬಹುದು.

ಈ ಉದ್ಘಾಟನಾ ಸಮಾರಂಭoದಲ್ಲಿ ಮುಹಮ್ಮದ ಸಲಾವುದ್ದೀನ್ ಫರ್ಹಾನ್ ಕಾರ್ಯದರ್ಶಿ ಅವರು ವಿಸ್ಡಮನಲ್ಲಿ ನಾವು ಮೊಬೈಲ್ ಮುಕ್ತವಾದ ಉತ್ತಮ ಆರೋಗ್ಯಕರ ಶೈಕ್ಷಣ ಕ ವಾತಾವರಣವನ್ನು ಸೃಷ್ಟಿಸಿದ್ದೇವೆ ಎಂದು ಹೇಳಿದರು. ಅವರು ಅಂತಿಮವಾಗಿ ಎಲ್ಲಾ ಅತಿಥಿಗಳು, ವಿದ್ಯಾರ್ಥಿಗಳು, ವಿದ್ಯಾರ್ಥಗಳ ಪೋಷಕರು ಮತ್ತು ಎಲ್ಲಾ ಸಿಬ್ಬಂಧಿ ವರ್ಗದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD