Home » ಲೈವ್ ನ್ಯೂಸ್ » ವಿಶ್ವವಿದ್ಯಾಲಯೇಲ್ಲಿ ಪಿಎಚ್‌.ಡಿ ಪ್ರವೇಶಕ್ಕೆ ಪರಿಷ್ಕೃತ ನಿಯಮ.

ವಿಶ್ವವಿದ್ಯಾಲಯೇಲ್ಲಿ ಪಿಎಚ್‌.ಡಿ ಪ್ರವೇಶಕ್ಕೆ ಪರಿಷ್ಕೃತ ನಿಯಮ.

Facebook
X
WhatsApp
Telegram

ಬೆಂಗಳೂರು.31.ಆಗಸ್ಟ್.25:- ಬೆಂಗಳೂರು ವಿಶ್ವವಿದ್ಯಾಲಯದಲ್ಲಿ  ಪಿಎಚ್.ಡಿಗೆ ಹೊಸ ನಿಯಮಗಳು ಚಾಲನೆಯಲ್ಲಿ ತರಲಾಗಿದೆ.
ಪಿಎಚ್.ಡಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನದಲ್ಲಿ ಶೇ 30ರಷ್ಟು ಅಂಕಗಳು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯೇಲ್ಲಿ ಪಿಎಚ್‌.ಡಿ ಪ್ರವೇಶಕ್ಕೆ ಪರಿಷ್ಕೃತ ನಿಯಮಗಳನ್ನು ವಿಶ್ವವಿದ್ಯಾಲಯ ಪ್ರಕಟಿಸಿದೆ. ಸ್ನಾತಕೋತ್ತರ ಪದವಿ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಡೆದಿರುವ ಶೇ 70ರಷ್ಟು ಹಾಗೂ ಸಂದರ್ಶನದಲ್ಲಿ ಪಡೆದಿರುವ ಶೇ 30ರಷ್ಟು ಅಂಕಗಳನ್ನು ಆಧರಿಸಿ ಪ್ರವೇಶ ನೀಡಲಾಗುತ್ತದೆ.

‘ಈ ಸಂಬಂಧ ವಿಶ್ವವಿದ್ಯಾಲಯ ರೂಪಿಸಿರುವ ನಿಯಮಗಳಿಗೆ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಒಪ್ಪಿಗೆ ನೀಡಿದ್ದಾರೆ. ಆ ಪ್ರಕಾರ ಪಿಎಚ್.ಡಿ ಪ್ರವೇಶಕ್ಕೆ ಸಂದರ್ಶನ ಕಡ್ಡಾಯಗೊಳಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಚಂದ್ರಕಾಂತ್ ಕರಿಗಾ‌ರ್ ಅವರು ತಿಳಿಸಿದರು.

ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಪ್ರವೇಶ ಪರೀಕ್ಷೆ ಮೂಲಕ ತುಂಬಲಾಗುತ್ತದೆ. ಇನ್ನುಳಿದ ಶೇ 50ರಷ್ಟು ಸೀಟುಗಳನ್ನು ವಿವಿಧ ಫೆಲೋಶಿಪ್ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ (ಉದಾಹರಣೆಗೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್), ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್), ಯುಜಿಸಿ ಫೆಲೋಶಿಪ್) ಮೀಸಲಿಡಲಾಗಿದೆ. ಇವರು ಪ್ರವೇಶ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ನೇರವಾಗಿ ಪಿಎಚ್.ಡಿಗೆ ಪ್ರವೇಶ ಪಡೆಯಬಹುದು ಎಂದು ಅವರು ವಿವರಿಸಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology