12/08/2025 6:33 PM

Translate Language

Home » ಲೈವ್ ನ್ಯೂಸ್ » ವಿಶೇಷಚೇತನ ಅತಿಥಿ ಉಪನ್ಯಾಸಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ ಸರ್ಕಾರ ಗಮನ ಸೆಳೆಲೀ..

ವಿಶೇಷಚೇತನ ಅತಿಥಿ ಉಪನ್ಯಾಸಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ ಸರ್ಕಾರ ಗಮನ ಸೆಳೆಲೀ..

Facebook
X
WhatsApp
Telegram

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಶೇಷ ಚೇತನ ಬದುಕು ಸ್ಥಿತಿ ?

ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರು ಹುದ್ದೆಗೆ 4 ಪಟ್ಟು ವಿಶೇಷ್ಚೇತನ ಸಂಖ್ಯಾ ಏರಿಕ  ಅರ್ಹ ಯಾರು ಅನ್- ಅರ್ಹ ಯಾರು ಗೊತ್ತಿಲ್ಲ. ನಿಜವಾಡ ವಿಶೇಷ್ಚೇತನ ತುಂಬಾ ಕಷ್ಟದಲ್ಲಿ ಇದ್ದಾರೆ. Fake Handicappe Certificate ತಂದವರ ಸಂಖೆ ಅತಿ ಜಾಸ್ತಿ ಆಗ್ತಿದೆ ಸರ್ಕಾರ. ಹಾಗೂ ಆರೋಗ್ಯ ಇಲಾಖೆ ಜೊತೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ಆಯ್ಕೆ ಸಂಬಂಧಿತ ಡ್ರಾಮಾ ಮಾಡ್ತಿದೆ

ಅತಿಥಿ ಉಪನ್ಯಾಸಕರು ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವುದು ಒಂದೆಡೆಯಾದರೆ, ಒಂದೇ ವರ್ಷದಲ್ಲಿ ವಿಶೇಷಚೇತನ ಕೇವಲ ಅತಿಥಿ ಉಪನ್ಯಾಸಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. 2023ರಿಂದ ಈವರೆಗೆ ರಾಜ್ಯಾದ್ಯಂತ 250 ಜನ ಮಾತ್ರ ವಿಶೇಷ ಚೇತನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದರು.

ಆದರೆ ಪ್ರಸ್ತುತ ಆ ಸಂಖ್ಯೆ 1267ಕ್ಕೆ ಏರಿಕೆಯಾಗಿದೆ. ಕೇವಲ ಒಂದೇ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಉದ್ಭವಿಸಿರುವುದು ಶೈಕ್ಷಣಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. 1267 ಜನ ಉಪನ್ಯಾಸಕರು ವರ್ಷದಲ್ಲಿ ಇಷ್ಟೊಂದು 10 ಅಂಕಗಳಿಗಾಗಿ…: 2023 ರಿಂದ 2025ರ ವರೆಗೆ ಎರಡು ಶೈಕ್ಷಣಿಕ ಅವಧಿಯಲ್ಲೂ 250 ಜನ ವಿಶೇಷ ಚೇತನ ಅತಿಥಿ ಉಪನ್ಯಾಸಕರಿದ್ದರು. ಆದರೆ 2024-25ನೆ ಸಾಲಿನ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆ ಸಂಖ್ಯೆ 1267 ಕ್ಕೆ ಏರಿಕೆಯಾಗಿದೆ. ಕಾರಣ 10 ಅಂಕಗಳು. ಅಂಗವಿಕಲ ಅಭ್ಯರ್ಥಿಗೆ ಹೆಚ್ಚುವರಿ 10 ಅಂಕ ಪರಿಗಣಿಸುವುದರಿಂದ ಕೆಲ ಅತಿಥಿ ಉಪನ್ಯಾಸಕರು ಅಂಗವಿಕಲ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಆ ಮೂಲಕ ನಿಜವಾದ ವಿಶೇಷ ಚೇತನ ಅತಿಥಿ ಉಪನ್ಯಾಸಕರನ್ನು ವಂಚಿಸುತ್ತಿದ್ದಾರೆ ಎನ್ನುತ್ತಾರೆ ವಿಶೇಷ ಚೇತನ ಅತಿಥಿ ಉಪನ್ಯಾಸಕರು. ನಕಲಿ ಹಾವಳಿಗಿಲ್ಲ ಕಡಿವಾಣ: ಈಗಾಗಲೇ ನಕಲಿ ಪಿಎಚ್‌ ಡಿ, ఎంఫిల్, ವಿಶ್ವವಿದ್ಯಾಲಯಗಳಲ್ಲಿ ಪಡೆದ ಹೊರರಾಜ್ಯದ ಪಿಎಚ್ ಡಿ ದಾಖಲೆಗಳನ್ನು ಕೊಟ್ಟು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗ ಹಣ ಕೊಟ್ಟು ಅಂಗವಿಕಲ ಪ್ರಮಾಣಪತ್ರ ಪಡೆಯುತ್ತಿರುವ ಹೊಸ ರೀತಿಯ ವಂಚನೆ ಸೃಷ್ಟಿಯಾಗಿದೆ.

1267 ಜನ ಉಪನ್ಯಾಸಕರು

ಒಂದೇ ವರ್ಷದಲ್ಲಿ 1 ಸಾವಿರ ವಿಶೇಷ ಚೇತನ ಅಭ್ಯರ್ಥಿಗಳು ಹೆಚ್ಚಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕಾಲೇಜ್ ಶಿಕ್ಷಣ ಇಲಾಖೆ ಹಂತದಲ್ಲೆ ದಾಖಲೆ ಪರಿಶೀಲನೆ ನಡೆದಾಗ ಮಾತ್ರ ನೈಜತೆ ವ್ಯಕ್ತವಾಗುತ್ತದೆ. ಸುಳ್ಳು ದಾಖಲೆ ನೀಡಿದ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. -ಡಾ.ಶಾಂತಪ್ಪ ರಾಠೋಡ, ವಿಶೇಷ ಚೇತನ ಅತಿಥಿ ಉಪನ್ಯಾಸಕ

ನೈಜತೆ ಪರಿಶೀಲನೆ ಅಗತ್ಯ ಅತಿಥಿ ಉಪನ್ಯಾಸಕರ ಆಯ್ಕೆಗೆ ಸದ್ಯ ಹೈಕೋರ್ಟ ತಡೆ ನೀಡಿದೆ. ಆದರೆ ಪ್ರಕ್ರಿಯೆ ಆರಂಭವಾದ ನಂತರ ಕಾಲೇಜಿನ ಪ್ರಾಚಾರ್ಯರ ಹಂತದಲ್ಲಿ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಯತ್ತದೆ. ಅದರ ಬದಲಾಗಿ ಕಾಲೇಜು ಶಿಕ್ಷಣ ಇಲಾಖೆ ಹಂತದಲ್ಲೇ ವೈದ್ಯರೊಬ್ಬರ ಸಮ್ಮುಖದಲ್ಲಿ ದಾಖಲೆ ಪರಿಶೀಲನೆ ಕೈಗೊಂಡರೆ ಅಂಗವಿಕಲ ಪ್ರಮಾಣಪತ್ರದ ನೈಜತೆ ಸ್ಪಷ್ಟವಾಗುತ್ತದೆ. ಅದರ ಜತೆಗೆ ನಕಲಿ ಪಿಎಚ್ ಡಿ, ಎಂಫಿಲ್ ದಾಖಲೆಗಳೂ ಪರಿಶೀಲನೆಗೆ ಒಳಗಾಗಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎನ್ನುತ್ತಾರೆ ವಿಶೇಷ ಚೇತನ ಅಭ್ಯರ್ಥಿಗಳು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD