ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಲ್ಲಿ ಆಸಕ್ತ ಅಭ್ಯರ್ಥಿಗಳುನಾನಾ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ 21ಕ್ಕೆ ಭಾಗವಹಿಸಬಹುದಾಗಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ತಜ್ಞರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು
ಅರವಳಿಕೆ ತಜ್ಞರ ಹುದ್ದೆಗೆ ಎಮ್‍ಬಿಬಿಎಸ್, ಎಮ್.ಡಿ, ಡಿಎನ್‍ಬಿ, ಡಿಎ ಪದವಿ ಹೊಂದಿರಬೇಕು. ಗರಿಷ್ಠ 45 ವರ್ಷದೊಳಗಿರಬೇಕು. ಮಕ್ಕಳ ತಜ್ಞರ ಹುದ್ದೆಗೆ ಎಮ್‍ಬಿಬಿಎಸ್, ಎಮ್.ಡಿ, ಪೀಡಿಯಾಟ್ರಿಕ್ಸ್/ ಡಿಎನ್‍ಬಿ ಪೀಡಿಯಾಟ್ರಿಕ್ಸ್/ ಡಿಸಿಎಚ್ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಜುಲೈ 21ರ ಬೆಳಿಗ್ಗೆ 10.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಕೊಳ್ಳಲಾಗಿದ್ದ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.