19/04/2025 5:03 PM

Translate Language

Home » ಲೈವ್ ನ್ಯೂಸ್ » ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ! ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ! ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

Facebook
X
WhatsApp
Telegram

04 ಡಿಸೆಂಬರ್ 24 ಚಿಂತಾಮಣಿ : ತಾಲ್ಲೂಕಿಗೆ ಮಂಜೂರು ಆಗಿರುವ 24 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಚಾಲನೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಇನ್ನು ಜೆಡಿಎಸ್ ನವರ ಮೊಸಳೆ ಕಣ್ಣೀರಿನಾಟ ನಡೆಯುವುದಿಲ್ಲ .ಇನ್ನೇನಿದ್ದರೂ ಅಭಿವೃದ್ಧಿಗೆ ಅಷ್ಟೆ‌ ಬೆಲೆ‌. ಕಣ್ಣೀರಿಗೆ ಬೆಲೆ‌ಕೊಟ್ಟು ಓಟು ಹಾಕುವರಿಲ್ಲ ಎಂದು ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆ ಫಲಿತಾಂಶ ಉಲ್ಲೇಖಿಸಿ ಕುಟುಕಿದರು.

ಚನ್ನಪಟ್ಟಣ‌ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ‌ ನಾಯಕರಾದ‌ ದೇವಗೌಡರು ಕುಮಾರಸ್ವಾಮಿಗಳು ಮತ್ತು‌ನಿಖಿಲ್ ಕುಮಾರಸ್ವಾಮಿ ಸೇರಿ ತಾತ ತಂದೆ ಮಗೆ ಎಲ್ಲರೂ ಕಣ್ಣೀರಿಟ್ಟಿದ್ದಾರೆ. ಆದರೆ ಕಣ್ಣೀರಿಟ್ಟರೆ‌ ಮತ‌ಹಾಕುವ ಕಾಲ‌ಹೋಯಿತು. ಈಗ ಏನಿದ್ದರು ಅಭಿವೃದ್ದಿ‌ಮಾಡಬೇಕು. ಅಭಿವೃದ್ಧಿ ಮಾಡಿದರೆ ಮಾತ್ರ ಜನ‌ ಕೈ ಹಿಡಿಯುತ್ತಾರೆ ಎಂದರು.

ಇನ್ನು ಸಿ.ಪಿ.ಯೋಗ್ಯೇಶ್ವರ್ ರವರು ಹಿಂದೆ‌ ಶಾಸಕರಾಗಿದ್ದ ವೇಳೆ ತಾಲ್ಲೂಕಿನ ಎಲ್ಲಾ‌ ಕೆರಗಳಿಗೆ ನೀರು ಹರಿಸಿದರು. ಅದರ‌ ಫಲವೆ‌ ಇಂದು ಅವರ ಗೆಲುವಿಗೆ ಕಾರಣವಾಯಿತು .ಆದರೆ ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಆಗಿದ್ದರೂ ಸಹ ಅವ‌ರ ಕ್ಷೇತ್ರದಲ್ಲಿ ನಯಾಪೈಸೆ‌ ಅಭಿವೃದ್ದಿ ಮಾಡಲಿಲ್ಲ.ಅದಕ್ಕೆ‌ ಜನ ತಕ್ಕ ಪಾಠ‌ ಕಲಿಸಿದ್ದಾರೆ ಎಂದರು.

ಇನ್ನು ನಾನು ಮೊದಲಬಾರಿಗೆ ಶಿಕ್ಷಣ ಸಚಿವನಾಗಿದ್ದರೂ ಹತ್ತಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ದಿ ಪಡಿಸುತ್ತಿದ್ದೇನೆ .ಆದರೆ ಕುಮಾರಸ್ವಾಮಿ ರವರು ಕೇವಲ ಐದು ಹತ್ತು ಕೋಟಿ ಕಾಲೇಜಿಗೆ‌ ಕೊಟ್ಟು ಅದನ್ನು ಪದೆ‌ ಪದೇ ಪ್ರಚಾರ‌ ಮಾಡುತ್ತಿದ್ದಾರೆಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿನ್ನಪ್ಪ,ಗ್ರಾಮ ಪಂಚಾಯತಿ ಸದಸ್ಯ ಅಂಬರೀಶ್,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ,ಮುಖಂಡರಾದ ಮುಸ್ತಫಾ,ಅಸ್ಲಾಂ ಪಾಷಾ,ಪವಿತ್ರ ಚಂದ್ರಶೇಖರ್,ಜಂಗಮಶೀಗೆಹಳ್ಳಿ ಮುನಿನಾರಾಯಣಪ್ಪ,ನಗರಸಭೆ ಅದ್ಯಕ್ಷ ಜಗನ್ನಾಥ್,ಉಪಾದ್ಯಕ್ಷೆ ರಾಣಿಯಮ್ಮ ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು,ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!