11/08/2025 9:17 PM

Translate Language

Home » ಲೈವ್ ನ್ಯೂಸ್ » ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ: ನಂದಾದೀಪ ಬೋರಾಳೆ

ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ: ನಂದಾದೀಪ ಬೋರಾಳೆ

Facebook
X
WhatsApp
Telegram

ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ

ಯುವಕರು ಸಮಾಜದ ಬೆನ್ನೆಲುಬು ಮತ್ತು ಭವಿಷ್ಯ. ಯುವಕರು ಹೊಸ ಆಲೋಚನೆಗಳು, ಶಕ್ತಿ ಮತ್ತು ಉತ್ಸಾಹವನ್ನು ತರುವವರಾಗಿದ್ದಾರೆ, ಇದು ಸಮಾಜವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ. ಯುವಕರು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ, ಮತ್ತು ಅವರ ಭಾಗವಹಿಸುವಿಕೆ ಸಮಾಜದ ಅಭಿವೃದ್ಧಿಗೆ ಅತ್ಯಗತ್ಯ ಎಂದು ಪ್ರಗತಿಪರ ಚಿಂತಕರ, ಸಂಪನ್ಮೂಲ ವ್ಯಕ್ತಿ ನಂದಾದೀಪ ಬೋರಳೆ ಅವರು ಹೇಳಿದರು.

ಭಾರತಿಯ ಕಾಥೋಲಿಕ ಯುವ ಸಂಚಲನ ವತಿಯಿಂದ ಬೀದರ್ ಜಿಲ್ಲೆಯ ಸಂತಪೂರಿನ ಹೋಲಿ ಕ್ರಾಸ್ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರಿಯ ಯುವದ ದಿನದ ನಿಮಿತ್ತ  ಹಮ್ಮಿಕೊಂಡಿದ್ದ ‘ದೇಶದ ಪ್ರಗತಿಯಲ್ಲಿ ಯುವ ಸಮೂಹದ ಪಾತ್ರ’ ಎಂಬ ಶೀಬಿರದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ ಏಕೆಂದರೆ ಯಾವುದೇ ರಾಷ್ಟ್ರದ ಅಭಿವೃದ್ಧಿ, ಪ್ರಜಾಪ್ರಭುತ್ವ, ಆರ್ಥಿಕತೆ, ತಂತ್ರಜ್ಞಾನ ಮತ್ತು ವೈದ್ಯಕೀಯ ಪ್ರಗತಿಯ ಭವಿಷ್ಯವು ಯುವಜನರ ಮೇಲೆ ಅವಲಂಬಿತವಾಗಿದೆ. ಬಡತನ, ನಿರುದ್ಯೋಗ, ಜಾಗತಿಕ ತಾಪಮಾನ ಏರಿಕೆ ಮತ್ತು ಹಲವು ರೀತಿಯ ಸಮಸ್ಯಗಳು ಇಂದು ನಮ್ಮ ಭಾರತ ಎದುರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಮುಂದಿನ ಪೀಳಿಗೆಯಲ್ಲಿದೆ ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದು ವಿದ್ಯಾರ್ಥಿಗಳಿಗೆ ಒಂದು ಪ್ರಮುಖ ಸವಾಲಾಗಿದೆ. ಈ ಪರೀಕ್ಷೆಗಳು ಜ್ಞಾನ, ಕೌಶಲ್ಯ ಮತ್ತು ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ, ವಿದ್ಯಾರ್ಥಿಗಳು ತಯಾರಿ ನಡೆಸಬೇಕು. ಅದಕ್ಕಾಗಿ ಸ್ಪಷ್ಟವಾದ ಅಧ್ಯಯನ ಯೋಜನೆ ಮತ್ತು ವೇಳಾಪಟ್ಟಿಯನ್ನು ರಚಿಸಿಕೊಂಡಲ್ಲಿ ಯಶಸ್ಸು ಖಂಡಿತ ಎಂದು ಹೇಳಿದರು.

ಇದೆ ಸಂದಭ೯ದಲ್ಲಿ ಮಾತನಾಡಿದ ಫಾದರ್ ಕ್ಲಿವನ್ ಅವರು ಇಂದಿನ ವಿಧ್ಯಾಥಿ೯ ಯುವ ಸಮೂಹಕ್ಕೆ ಇಂತಹ ಕಾಯಾ೯ಗಾರಗಳು ತುಂಬಾ ಅವಶ್ಯಕವಾಗಿವೆ. ಇದರಿಂದ ಅವರಲ್ಲಿ ಉತ್ತಮ ಮಾಗ೯ದಶ೯ನ ಹಾಗೂ ಉತ್ಸಾಹ ಬರುತ್ತದೆ ಎಂದರು. ಕಾಥೋಲಿಕ್ ಯುವ ಸಂಚಲನದ ನಿದೆ೯ಶಕರಾದ ಫಾದರ್ ಸಚಿನ್ ಸ್ವಾಗತಿಸಿದರು. ಸಮಾಜ ಸೇವಕರು, ಯುವ ನಾಯಕರಾದ ಸತಿಶ್ ನಾಗೂರೆ, ಸಿಸ್ಟರ್ ಲೇನಿಟ್, ಸಿಸ್ಟರ್ ಜೋಶ್ಪಿನ್ ಹಾಗೂ ಔರಾದ ತಾಲೂಕಿನ ವಿವಿಧ ಭಾಗದಿಂದ ಬಂದ ಯುವ ವಿಧ್ಯಾರ್ಥಿಗಳು ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD