Home » ಲೈವ್ ನ್ಯೂಸ್ » ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 140 ಬೋಧಕ ಹುದ್ದೆಗಳು ಖಾಲಿ

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 140 ಬೋಧಕ ಹುದ್ದೆಗಳು ಖಾಲಿ

Facebook
X
WhatsApp
Telegram

ವಿಜಯನಗರ.07.ಫೆಬ್ರವರಿ.26: ಭಾರತೀಯ ಸಂವಿಧಾನದ 371(ಜೆ) ಅನುಚ್ಛೇದದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಶೇ.75 ಮೀಸಲಾತಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಭಾರತೀಯ ಸಂವಿಧಾನದ 371(ಜೆ) ಅನುಚ್ಛೇದದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಶೇ.75 ಬೋಧಕ ಹುದ್ದೆಗಳನ್ನು ಮೀಸಲಿಡುವ ಕರಡು ಅಧಿಸೂಚನೆ ಹೊರಡಿಸಿದೆ. ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಇದು ಅನ್ವಯ. ಆಸಕ್ತರು 15 ದಿನಗಳೊಳಗೆ ತಮ್ಮ ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 140 ಬೋಧಕ ಹುದ್ದೆಗಳು; ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಶೇ. 75ರಷ್ಟು ಮೀಸಲಾತಿ ಸ್ಥಾನಿಕ ಉದ್ಯೋಗ ಹೆಚ್ಚಿಸುವ ಗುರಿ.

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಹತ್ವದ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು, ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಅನ್ವಯ ವಿಶ್ವವಿದ್ಯಾಲಯದ ಬೋಧಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಗೆ ಶೇ. 75 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಕ್ರಮವು ಸಂವಿಧಾನದ ಅನುಚ್ಛೇದ 371(ಜೆ) ಅಡಿಯಲ್ಲಿ ಜಾರಿಯಾಗಿದ್ದು, ಸ್ಥಳೀಯ ಯುವಕರಿಗೆ ಸರ್ಕಾರಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ವಿಶ್ವವಿದ್ಯಾಲಯದಲ್ಲಿ ಒಟ್ಟು 140 ಬೋಧಕ ಹುದ್ದೆಗಳು ಲಭ್ಯವಿದ್ದು, ಅವುಗಳಲ್ಲಿ 106 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿರಿಸಲ್ಪಟ್ಟಿವೆ. ಉಳಿದ 34 ಹುದ್ದೆಗಳು ಸಾಮಾನ್ಯ ವೃಂದಕ್ಕೆ ಮೀಸಲಾಗಿವೆ. ಹುದ್ದೆಗಳಲ್ಲಿನ ಪ್ರಮುಖ ವಿಭಾಗಗಳಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸೇರಿದ್ದಾರೆ.

ಪ್ರಾಧ್ಯಾಪಕರಿಗೆ 21 ಹುದ್ದೆಗಳು ಲಭ್ಯವಿದ್ದು, ವೇತನ ಶ್ರೇಣಿ 1,44,200 ರಿಂದ 2,18,200 ರೂ. ರವರೆಗೆ ಇದೆ. ಸಹ ಪ್ರಾಧ್ಯಾಪಕರಿಗೆ 40 ಹುದ್ದೆಗಳು ಇದ್ದು, 1,31,400 ರಿಂದ 2,17,100ರೂ. ವೇತನ ನೀಡಲಾಗುತ್ತದೆ. ಸಹಾಯಕ ಪ್ರಾಧ್ಯಾಪಕರಿಗೆ 78 ಹುದ್ದೆಗಳು ಲಭ್ಯವಿದ್ದು, 57,700 ರಿಂದ 1,82,400 ರೂ. ರವರೆಗೆ ವೇತನ ಸಿಗುತ್ತದೆ. ಈ ಹುದ್ದೆಗಳಲ್ಲಿನ ಬಹುಪಾಲು ಸ್ಥಾನಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿವೆ.

ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಅಧಿಸೂಚನೆ ಪ್ರಕಟಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಲಿಖಿತವಾಗಿ ಕುಲಸಚಿವರಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು “ಕುಲಸಚಿವರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಜ್ಞಾನ ಸಾಗರ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್, ಬಳ್ಳಾರಿ – 583105” ವಿಳಾಸಕ್ಕೆ ಕಳುಹಿಸಬಹುದು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology