ಬೀದರ.11.ಜುಲೈ.25:- 2025-26ನೇ ಸಾಲಿನ ಶೇ.5% ಯೋಜನೆಯಡಿಯಲ್ಲಿ ವಿಕಲಚೇತನರಿಗೆ ಸೋಲಾರನಿಂದ ನಡೆಯುವ ಯಂತ್ರಗಳನ್ನು ಒದಗಿಸುವ ಸಲುವಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಹಳ್ಳಿಖೇಡ (ಬಿ) ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಗತ್ತಿಸಬೇಕಾದ ದಾಖಲಾತಿಗಳ ವಿವರ: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಬಿ.ಪಿ.ಎಲ್.ರೇಷನ್ ಕಾರ್ಡ, ವಾಸಸ್ಥಳ, ಇತ್ತೀಚಿನ 2 ಭಾವಚಿತ್ರ, 20 ರೂ. ಛಾಪಾ ಕಾಗದದ ಕರಾರು ಪತ್ರ, ವಿದ್ಯಾರ್ಹತೆ ದಾಖಲೆಗಳು ಹಾಗೂ ಸ್ಟಡಿ ಸರ್ಟಿಫಿಕೇಟ, ಬ್ಯಾಂಕ ಪಾಸ್ ಬುಕ್ಕ, ಅಂಗವಿಕಲಚೇತನರ ಪ್ರಮಾಣ ಪತ್ರ.
ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅಗತ್ಯ ದಾಖಲಾತಿಗಳನ್ನು ದಿನಾಂಕ: 15-07-2025 ರಂದು ಸಾಯಂಕಾಲ 5 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ ಅವರು ತಿಳಿಸಿದ್ದಾರೆ.