14/06/2025 12:20 PM

Translate Language

Home » ಲೈವ್ ನ್ಯೂಸ್ » ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು
ಫೆಬ್ರವರಿ.28 ರೊಳಗಾಗಿ ನವೀಕರಿಸಿಕೊಳ್ಳಲು ಸೂಚನೆ.

ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು
ಫೆಬ್ರವರಿ.28 ರೊಳಗಾಗಿ ನವೀಕರಿಸಿಕೊಳ್ಳಲು ಸೂಚನೆ.

Facebook
X
WhatsApp
Telegram


01.ಜಿ.25:-ಬೀದರ ಜಿಲ್ಲೆಯ ಎಲ್ಲಾ ತಾಲೂಕಿನ್ ವಿಕಲಚೇತನರಿಗೆ ರಿಯಾಯಿತಿ ಪಾಸುಗಳನ್ನುನವೀಕರಿಸಿಕೊಳ್ಳಲು ಸೂಚಸಲಾಗಿದೆ.

ವಿಕಲಚೇತನರ ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ 2024ನೇ ಸಾಲಿನಲ್ಲಿ ವಿತರಿಸಲಾಗಿರುವ ಪಾಸುಗಳನ್ನು ದಿನಾಂಕ: 31-12-2024 ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸುಗಳನ್ನು ದಿನಾಂಕ: 28-02-2025 ರವರೆಗೆ ಮಾನ್ಯ ಮಾಡಲಾಗಿದೆ.

ಸದರಿ ಅವಧಿಯಲ್ಲಿ ಫಲಾನುಭವಿಗಳು ಸೇವಾ ಸಿಂಧುವಿನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ 660 ರೂ. ಗಳನ್ನು ನಗದು ರೂಪದಲ್ಲಿ ಪಾವತಿಸಿ, ದಿನಾಂಕ: 28-02-2025ರ ಒಳಗಾಗಿ ನವೀಕರಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಬೀದರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅದರಂತೆ 2025ನೇ ವರ್ಷದ ಹೊಸ ಪಾಸುಗಳನ್ನು ವಿಭಾಗೀಯ ಕಛೇರಿ ಬೀದರಲ್ಲಿ ವಿತರಿಸಲಾಗುವುದು. 2024 ರ ಬೀದರ ವಿಭಾಗ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳಾದ ಬೀದರ, ಹುಮನಾಬಾದ, ಬಸವಕಲ್ಯಾಣ, ಭಾಲ್ಕಿ, ಔರಾದ ಬಸ್ಸ್ ನಿಲ್ದಾಣಗಳಲ್ಲಿ ನವೀಕರಿಸಲಾಗುವುದು.

ದಿನಾಂಕ: 28-02-2025ರ ನಂತರ ನವೀಕರಿಸಿಕೊಳ್ಳಲು ಬರುವ ಅಂಗವಿಕಲ ರಿಯಾಯಿತಿ ಬಸ್ಸ್ ಪಾಸುಗಳನ್ನು ನವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!