ಬೀದರ.20.ಜುಲೈ.25:- ಭಾಲ್ಕಿ ಪುರಸಭೆ ವ್ಯಾಪ್ತಿಯಲ್ಲಿ (08 ಜನ) ವಿಕಲಚೇತನ ಫಲಾನುಭವಿಗಳಿಗೆ ಸೋಲಾರನಿಂದ ನಡೆಯುವ ಯಂತ್ರಗಳನ್ನು ಒದಗಿಸಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಭಾಲ್ಕಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಹಾಗೂ ಅರ್ಹ ವಿಕಲಚೇತನ ಆಭ್ಯರ್ಥಿಗಳು ಅಂಗವಿಕಲ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ, ಇತ್ತೀಚಿನ ಪಾಸ್‌ಪೋರ್ಟ ಅಳತೆಯ ಭಾವಚಿತ್ರ, ವಿಕಲಚೇತನರ ಅಂಗವಿಕಲತೆಯುಳ್ಳ ಸಂಪೂರ್ಣ ಭಾವಚಿತ್ರ, ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪ್ಯಾನ್ ಕಾರ್ಡ, ರಾಷ್ಟಿçÃಕೃತ ಬ್ಯಾಂಕ್ ಪಾಸ್‌ಬುಕ್ ಪ್ರತಿಗಳು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ದಿನಾಂಕ: 31-07-2025 ರ ಸಾಯಂಕಾಲ 5.30 ಗಂಟೆಯೊಳಗಾಗಿ ಭಾಲ್ಕಿ ಪುರಸಭೆ ಕಾರ್ಯಾಲಯದ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಭಾಲ್ಕಿ ಪುರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.