ಕೊಪ್ಪಳ.31.ಜುಲೈ.25: ಕುಷ್ಟಗಿ ಪುರಸಭೆ ವತಿಯಿಂದ 2025-26ನೇ ಸಾಲಿನ ಎಸ್.ಎಫ್.ಸಿ ಶೇ.5ರ ವಿಕಲಚೇತನ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ವಿಕಲಚೇತನರಿಗೆ ಶಸ್ತ್ರಚಿಕಿತ್ಸೆಯ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಸಹಾಯಧನವನ್ನು ಪಡೆಯಲಿಚ್ಛೀಸುವ ಕುಷ್ಟಗಿ ಪಟ್ಟಣದ ವ್ಯಾಪ್ತಿಯ ವಿಕಲಚೇತನ ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಆಗಸ್ಟ 19 ರೊಳಗಾಗಿ ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಾರ್ಯಾಲಯಕ್ಕೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕುಷ್ಟಗಿಯ ಪುರಸಭೆ ಮುಖ್ಯಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.