|

ವಾಹನ ಸವಾರರ ಗಮನಕ್ಕೆ: ಜುಲೈ 2ರ ವರೆಗೆ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ!

ಕದಿರೇನಹಳ್ಳಿ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ BWSSB ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದೆ, ಪರ್ಯಾಯ ಮಾರ್ಗವಾಗಿ ಡಾ. ಪುನೀತ್ ರಾಜಕುಮಾರ್ ರಿಂಗ್ ರಸ್ತೆಯ ಮೂಲಕ ಸಾರಕ್ಕಿ ಜಂಕ್ಷನ್ ಗೆ ಸಾಗಿ ಎಡತಿರುವು ಪಡೆದು ಕನಕಪುರ ರಸ್ತೆಯ ಮೂಲಕ ಸಾಗಬಹುದು

ಬೆಂಗಳೂರು.30.ಜೂನ್.25:- ಇದು ಬೆಂಗಳೂರಿನ ವಾಹನ ಸವಾರರು ನೋಡಲೇಬೇಕಾದ ಸುದ್ಧಿ BWSSB ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ  ಜೂನ್ 29 ರಿಂದ ಜುಲೈ 2ರ ವರೆಗೆ ಹಲವೆಡೆ ವಾಹನ ಸಂಚಾರವನ್ನು ನಿರ್ಬಂಧಸಲಾಗಿದೆ.

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ಜೂನ್ 29 ರಿಂದ ಜುಲೈ 2ರ ವರೆಗೆ ವಾಹನ ಸಂಚಾರವನ್ನು ನಿರ್ಬಂಧಸಲಾಗಿದೆ.

ಕದಿರೇನಹಳ್ಳಿ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ಜೂನ್ 29 ರಿಂದ ಜುಲೈ 2ರ ವರೆಗೆ ವಾಹನ ಸಂಚಾರವನ್ನು ನಿರ್ಬಂಧಸಲಾಗಿದೆ.

ಡಾ. ಪುನೀತ್ ರಾಜಕುಮಾರ್ ರಿಂಗ್ ರಸ್ತೆಯ ಮೂಲಕ ಸಾರಕ್ಕಿ ಜಂಕ್ಷನ್ ಗೆ ಸಾಗಿ ಎಡತಿರುವು ಪಡೆದು ಕನಕಪುರ ರಸ್ತೆಯ ಮೂಲಕ ಸಾಗಬಹುದಾಗಿದೆ. ಬಿಡಬ್ಲ್ಯೂಎಸ್‌ಎಸ್ಬಿ ಕಾಮಗಾರಿಯಿಂದಾಗಿ, ವಾಟರ್ ಟ್ಯಾಂಕ್ ಜಂಕ್ಷನ್‌ನಿಂದ ಕೃಪಾನಿಧಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ

ಇನ್ನು ಮಾರತ್ತಹಳ್ಳಿ ಪೊಲೀಸ್ ಠಾಣೆಯ ಎದುರುಗಡೆಯ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ಕೆಲಸ ನಡೆಯುತ್ತಿರುವುದರಿಂದ, ಕಾಡುಬೀಸನಹಳ್ಳಿಯಿಂದ ಕಲಾಮಂದಿರದ ಕಡೆಗೆ ಮತ್ತು ಮಾರತ್ತಹಳ್ಳಿಯಿಂದ ಕಾಡುಬೀಸನಹಳ್ಳಿ ಕಡೆಗೆ ಸಂಚಾರ ನಿಧಾನವಾಗಿರಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.

Similar Posts

Leave a Reply

Your email address will not be published. Required fields are marked *