12/06/2025 6:32 PM

Translate Language

Home » ರಾಜ್ಯ » ಲಿಫ್ಟ್​ನಲ್ಲಿ ಕನ್ನಡಿಗಳು ಏಕೆ ಇರುತ್ತೆ? ಇದರ ಹಿಂದಿನ ಸಿಕ್ರೇಟ್​ ಇಲ್ಲಿದೆ ನೋಡಿ! – News18 ಕನ್ನಡ

ಲಿಫ್ಟ್​ನಲ್ಲಿ ಕನ್ನಡಿಗಳು ಏಕೆ ಇರುತ್ತೆ? ಇದರ ಹಿಂದಿನ ಸಿಕ್ರೇಟ್​ ಇಲ್ಲಿದೆ ನೋಡಿ! – News18 ಕನ್ನಡ

Facebook
X
WhatsApp
Telegram

ಮಾಲ್, ಸಿನಿಮಾ, ಶಾಪಿಂಗ್, ರೆಸ್ಟೋರೆಂಟ್​, ಕಚೇರಿಗಳು ಸೇರಿದಂತೆ ಅನೇಕ ಕಡೆ ನೀವು ಲಿಫ್ಟ್​ಗಳನ್ನು ಕಾಣಬಹುದು. ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗದಿರುವವರಿಗೆ ಸುಲಭವಾಗಿ ಮಹಡಿಗಳನ್ನು ತಲುಪಲು ಲಿಫ್ಟ್ ನಿರ್ಮಾಣ ಮಾಡಲಾಗಿರುತ್ತದೆ. ದೈನಂದಿನ ಜೀವನದಲ್ಲಿ ನಾವು ಸಾಮಾನ್ಯವಾಗಿ ಎಲಿವೇಟರ್‌ಗಳ (Elevator) ಮೂಲಕ ಮೇಲೆ ಮತ್ತು ಕೆಳಗೆ ಹೋಗುತ್ತೇವೆ. ಅಲ್ಲದೇ, ನೀವು ಎಂದಾದರೂ ಎತ್ತರದ ಕಟ್ಟಡ ಅಥವಾ ಶಾಪಿಂಗ್ ಮಾಲ್‌ನಲ್ಲಿ (Shopping Mall) ಲಿಫ್ಟ್​ನಲ್ಲಿ (Lift)​ ಹೋಗುವಾಗ ಸುತ್ತಲೂ ಕನ್ನಡಿಗಳನ್ನು ಕಾಣುತ್ತೀರಿ. ಈ ವೇಳೆ ಸಾಮಾನ್ಯವಾಗಿ ಲಿಫ್ಟ್‌ಗಳಲ್ಲಿ ಕನ್ನಡಿಯಲ್ಲಿ (Mirror) ನಿಮ್ಮ ಮುಖವನ್ನು ನೋಡಿಕೊಳ್ಳುತ್ತೀರಿ ಮತ್ತು ಕೂದಲುಗಳನ್ನು ಸರಿಪಡಿಸಿಕೊಳ್ಳುತ್ತೀರಿ. ಆದರೆ ಲಿಫ್ಟ್​ನಲ್ಲಿ ಕನ್ನಡಿಗಳನ್ನು ಏಕೆ ನಿರ್ಮಿಸಲಾಗಿರುತ್ತದೆ ಎಂಬುವುದರ ಬಗ್ಗೆ ಅನೇಕ ಮಂದಿಗೆ ತಿಳಿದಿಲ್ಲ. ವಾಸ್ತವವಾಗಿ ಲಿಫ್ಟ್‌ಗಳಲ್ಲಿ ಕನ್ನಡಿಗಳನ್ನು ಸ್ಥಾಪಿಸುವುದರ ಹಿಂದೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವೆ. ಅವು ಯಾವುವು ಎಂದು ನಾವಿಂದು ತಿಳಿಯೋಣ ಬನ್ನಿ.

ಜಾಹೀರಾತು
ಸಾಂದರ್ಭಿಕ ಚಿತ್ರ

ಮಾನಸಿಕ ನೆಮ್ಮದಿ

ಸಣ್ಣ ಕೊಠಡಿಗಳು ಅಥವಾ ಸ್ಥಳಗಳಲ್ಲಿ ನಡೆದಾಡುವಾಗ ಅನೇಕ ಮಂದಿ ಆತಂಕದಲ್ಲಿರುತ್ತಾರೆ. ಅವರು ಕ್ಲಾಸ್ಟ್ರೋಫೋಬಿಕ್ ಅನ್ನು ಅನುಭವಿಸುತ್ತಾರೆ. ಎಲಿವೇಟರ್‌ಗಳು ಸಹ ಒಂದು ರೀತಿಯ ಸಣ್ಣ ಕೋಣೆಗಳಾಗಿವೆ. ಆದ್ದರಿಂದ ಅವುಗಳಲ್ಲಿ ಹೋಗುವಾಗ ಕೆಲವರು ಆತಂಕವನ್ನು ಅನುಭವಿಸಬಹುದು. ಹಾಗಾಗಿ ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಲಿಫ್ಟ್​ಗಳಲ್ಲಿ ಕನ್ನಡಿಗಳನ್ನು ಸ್ಥಾಪಿಸಲಾಗಿದೆ. ಈ ಕನ್ನಡಿಗಳು ನಮ್ಮ ಸುತ್ತ ಹೆಚ್ಚು ಜಾಗದ ಭ್ರಮೆಯನ್ನು ನೀಡುತ್ತವೆ. ಇದು ಕಿರಿದಾದ ಪ್ರದೇಶದಲ್ಲಿದೆ ಎಂಬ ಭಾವನೆಯನ್ನು ನೀಡುವುದಿಲ್ಲ. ಲಿಫ್ಟ್‌ನಲ್ಲಿ ಕನ್ನಡಿ ಇರುವುದರಿಂದ ನಾವು ಸ್ವಲ್ಪ ಶಾಂತವಾಗುತ್ತೇವೆ.

ಜಾಹೀರಾತು

 ಕನ್ನಡಿಗಳೊಂದಿಗೆ ಸುರಕ್ಷತೆ, ಭದ್ರತೆ

ಲಿಫ್ಟ್‌ನಲ್ಲಿ ಕನ್ನಡಿ ಇರುವುದರಿಂದ ನಮ್ಮ ಹಿಂದೆ ಇರುವವರನ್ನು ಸಹ ಕಾಣಬಹುದು. ಇದು ನಮಗೆ ಭದ್ರತೆಯನ್ನು ನೀಡುತ್ತದೆ. ಕನ್ನಡಿ ನೋಡುವಾಗ ಹಿಂದೆ ಯಾರಿದ್ದಾರೆ ಮತ್ತು ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಮುಖ್ಯವಾಗಿ ಲಿಫ್ಟ್‌ನಲ್ಲಿ ಕನ್ನಡಿ ಇದ್ದರೆ, ಯಾರಾದರೂ ಅಸಭ್ಯವಾಗಿ ವರ್ತಿಸುತ್ತಿದ್ದರೆ ನಾವು ತಕ್ಷಣ ಗಮನಿಸಬಹುದು. ಲಿಫ್ಟ್‌ನಲ್ಲಿ ಕನ್ನಡಿಗಳಿವೆ ಎಂದು ಪರಿಗಣಿಸಿ ಯಾರೂ ತಪ್ಪು ಮಾಡುವ ಧೈರ್ಯ ಸಹ ಮಾಡುವುದಿಲ್ಲ. ಇದರ ಪರಿಣಾಮದಿಂದ ಸುರಕ್ಷತೆ ಮತ್ತು ಭದ್ರತೆ ಹೆಚ್ಚಾಗಿರುತ್ತದೆ.

ಜಾಹೀರಾತು
ಸಾಂದರ್ಭಿಕ ಚಿತ್ರ

ಅಂಗವಿಕಲರಿಗೆ ವಿಶೇಷ ಪ್ರಯೋಜನ

ಗಾಲಿಕುರ್ಚಿ ಬಳಸುವವರು ಲಿಫ್ಟ್‌ನಲ್ಲಿ ಹಿಂತಿರುಗುವಾಗ ಕನ್ನಡಿಯಲ್ಲಿ ನೋಡಬಹುದು. ಹೀಗೆ ಮಾಡುವುದು ಅವರಿಗೆ ತುಂಬಾ ಅನುಕೂಲಕರವಾಗಿದೆ. ಪಾದದ ತೊಂದರೆ ಇರುವವರು ಅಥವಾ ನಡೆಯಲು ತೊಂದರೆ ಇರುವವರು ಸಹ ಪ್ರಯೋಜನ ಪಡೆಯಬಹುದು.

ಇದೊಂದು ಟೈಮ್ ಪಾಸ್

ಕನ್ನಡಿಗಳು ಲಿಫ್ಟ್‌ಗಳಲ್ಲಿ ಮಾತ್ರವಲ್ಲದೇ ಲಿಫ್ಟ್ ಲಾಬಿಗಳು ಅಥವಾ ಲಿಫ್ಟ್ ಬಾಗಿಲುಗಳ ಬಳಿಯೂ ಕಂಡು ಬರುತ್ತವೆ. ಕೆಲವರಿಗೆ ಲಿಫ್ಟ್‌ಗಾಗಿ ಕಾಯುವುದು ಬೇಸರ ತರಿಸುತ್ತದೆ. ಕನ್ನಡಿಯಲ್ಲಿ ನಿಮ್ಮನ್ನು ನೋಡಿಕೊಂಡು ಸಮಯ ಕಳೆಯುವುದು ಸಮಯವನ್ನು ಚೆನ್ನಾಗಿ ಕಳೆಯುತ್ತದೆ. ಕನ್ನಡಿ ನಮ್ಮ ಮನಸ್ಸನ್ನು ಬೇರೆ ಕೆಲಸದಲ್ಲಿ ತೊಡಗಿಸುತ್ತದೆ. ಇದು ಲಿಫ್ಟ್ ಬರುವವರೆಗೆ ಅವರನ್ನು ಶಾಂತವಾಗಿರಿಸುತ್ತದೆ.

ಜಾಹೀರಾತು
ಮನೆಯಲ್ಲೇ Red Wine ಮಾಡುವ ಸಿಂಪಲ್ ವಿಧಾನ!


ಮನೆಯಲ್ಲೇ Red Wine ಮಾಡುವ ಸಿಂಪಲ್ ವಿಧಾನ!

ಜಪಾನಿಯರು ಎಲಿವೇಟರ್‌ಗಳೊಂದಿಗೆ ಬಹಳ ಜಾಗರೂಕರಾಗಿದ್ದಾರೆ. ಎಲಿವೇಟರ್ ಅಸೋಸಿಯೇಷನ್ ​​ಆಫ್ ಜಪಾನ್ ಎಂಬ ಸಂಸ್ಥೆಯೂ ಇದೆ. ಲಿಫ್ಟ್‌ಗಳು ಹೇಗಿರಬೇಕು ಎಂಬುದನ್ನು ತಿಳಿಸಲು ವಿಶೇಷ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಸಂಘದ ನಿಯಮಗಳ ಪ್ರಕಾರ, ಪ್ರತಿ ಲಿಫ್ಟ್‌ಗೆ ಕನ್ನಡಿ ಇರಬೇಕು. ಈ ಕನ್ನಡಿಗಳು ಲಿಫ್ಟ್‌ಗಳನ್ನು ಇನ್ನಷ್ಟು ಸುಂದರಗೊಳಿಸುತ್ತವೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!