Home » ಲೈವ್ ನ್ಯೂಸ್ » ಲಾಟರಿ ಮುಖಾಂತರ ಮರಳು ಬ್ಲಾಕ್‌ವಾರು ಯಶಸ್ವಿ ಬಿಡ್‌ದಾರರ ಆಯ್ಕೆ

ಲಾಟರಿ ಮುಖಾಂತರ ಮರಳು ಬ್ಲಾಕ್‌ವಾರು ಯಶಸ್ವಿ ಬಿಡ್‌ದಾರರ ಆಯ್ಕೆ

Facebook
X
WhatsApp
Telegram

ಕೊಪ್ಪಳ.25.ಡಿಸೆಂಬರ್.25: ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 4, 5 & 6 (IV, V & VI)ನೇ ಶ್ರೇಣಿಯಲ್ಲಿ ಹೊಳೆ, ನದಿ ಪಾತ್ರಗಳಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳನ್ನು ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು ಆಹ್ವಾನಿಸಲಾದ ಮರಳು ಬ್ಲಾಕ್‌ವಾರು ಒಬ್ಬ ಯಶಸ್ವಿ ಬಿಡ್‌ದಾರರನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗಿದೆ ಮತ್ತು ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿನ ಮರಳು ಬ್ಲಾಕಗಳ ವಿವರವನ್ನು ಸಾರ್ವಜನಿಕರ ಮಾಹಿತಿಗಾಗಿ ತಿಳಿಸಲಾಗಿದೆ.

ಕೊಪ್ಪಳ ಜಿಲ್ಲಾ ವ್ಯಾಪ್ತಿಯ 4ನೇ, 5ನೇ ಮತ್ತು 6ನೇ ಶ್ರೇಣಿಯ ಹೊಳೆ, ನದಿ ಪಾತ್ರಗಳಲ್ಲಿ ಗುರುತಿಸಿರುವ ಮರಳು ಬ್ಲಾಕ್‌ಗಳನ್ನು ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು ಕೆಪಿಪಿಪಿ ಅಂತರ್ಜಾಲದ ಮೂಲಕ 2025ರ ನವೆಂಬರ್ 5ರಂದು ಒಟ್ಟು 14 ಮರಳು ಬ್ಲಾಕ್‌ಗಳ ಟೆಂಡರ್‌ಗಳನ್ನು ಆಹ್ವಾನಿಸಲಾಗಿತ್ತು. 8 ಬಿಡ್‌ಗಳಲ್ಲಿ ತಾಂತ್ರಿಕವಾಗಿ ಅನರ್ಹವಾಗಿದ್ದು, 6 ಬಿಡ್‌ಗಳು ಅರ್ಹವಾಗಿರುವುದರಿಂದ ಈ ಬ್ಲಾಕುಗಳ ತಾಂತ್ರಿಕ ಬಿಡ್‌ಗಳನ್ನು 2025ರ ಡಿಸೆಂಬರ್ 12 ರಂದು ಜರುಗಿದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಂಡಿಸಿ ತಿರಸ್ಕರಿಸಲಾಗಿದ್ದು, ಮರಳು ಉಸ್ತುವಾರಿ ಸಮಿತಿ ಆದೇಶದಂತೆ 6 ಮರಳು ಬ್ಲಾಕುಗಳ ಆರ್ಥಿಕ ಬಿಡ್‌ಗಳನ್ನು ತೆರೆಯಲಾಗಿದ್ದು ಆರ್ಥಿಕ ಬಿಡ್ ತೆರೆದ ಎಲ್ಲಾ ಆರು ಬ್ಲಾಕುಗಳಲ್ಲಿ ಭಾಗವಹಿಸಿದ ಬಿಡ್‌ದಾರರು ಸಮಾನ ಮೊತ್ತ ನಮೂದಿಸುವ ಮೂಲಕ ಎಲ್1 ಬಿಡ್‌ದಾರರಾಗಿದ್ದು 2025ರ ಡಿಸೆಂಬರ್ ರಂದು ನಡೆದ ಜಿಲ್ಲಾ ಮರಳು ಸಮಿತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಲಾಟರಿ ಪ್ರಕ್ರಿಯೆ ಮೂಲಕ ಯಶಸ್ವಿ ಬಿಡ್‌ದಾರರನ್ನು ಆಯ್ಕೆ ಮಾಡಲಾಗಿದೆ.

ಬಿಡ್‌ದಾರರ ವಿವರ:* ಬ್ಲಾಕುವಾರು ಯಶಸ್ವಿ ಎಲ್1 ಬಿಡ್‌ದಾರರ ವಿವರಗಳು ಇಂತಿದೆ. KPL KRT 1/Nandihalli (Karatagi Taluk)  Tender No. DMG/2025-26/SE0144 ರಲ್ಲಿ ಶಿವಪುತ್ರಪ್ಪ ಸಜ್ಜನರ, KPL KRT 02/ Nandihalli (Karatagi Taluk) Tender No. DMG/2025-26/SE0145 ರಲ್ಲಿ ನಂದೀಶ ಟಿ.ಆರ್., KPL KRT 03/ Nandiahalli (Karatagi Taluk) Tender No. DMG/2025-26/SE0146 ರಲ್ಲಿ ರಂಗನಾಥ ಗಿರಿ, KPL – KKNR 02/ Yadiyapura (Yelburga Taluk) Tender No. DMG/2025-26/SE0148 ರಲ್ಲಿ ಹೆಚ್.ವಿ ಶಿವಶಂಕರ್, KPLKSLP-01/ Kesalapura (Koppal Taluk) Tender No. DMG/2025-26/SE0151 ರಲ್ಲಿ ಆನಂದ ದೊಡ್ಡಮನಿ, KPLHLWI-01/ Halawagali (Koppal Taluk)  Tender No. DMG/2025-26/SE0152 ರಲ್ಲಿ ಪುಟ್ಟರಾಜ್ ಎಲ್.ಎಂ., ಈ ಎಲ್ಲಾ ಬಿಡ್‌ದಾರರನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 20 ಮರಳು ಬ್ಲಾಕಗಳು ಚಾಲ್ತಿಯಲ್ಲಿದ್ದು 19 ಪಟ್ಟಾ ಜಮೀನಿನಲ್ಲಿ ಹಾಗೂ ಕಾರಟಗಿ ತಾಲ್ಲೂಕ್ ಕಕ್ಕರಗೋಳ ಗ್ರಾಮದ ತುಂಗಭದ್ರ ನದಿ ಪಾತ್ರದಲ್ಲಿ ಮೆ:ಹಟ್ಟಿ ಗೋಲ್ಡ್ ಮೈನ್ಸ್ ಲಿ ಇವರಿಗೆ ಹಂಚಿಕೆಯಾದ 1 ಮರಳು ಬ್ಲಾಕ ಚಾಲ್ತಿಯಲ್ಲಿದ್ದು, ಸಾರ್ವಜನಿಕರು ಈ ಮರಳು ಬ್ಲಾಕಗಳಲ್ಲಿ ಮರಳನ್ನು ಖರೀದಿಸಬಹುದಾಗಿದೆ. ಮರಳು ಬ್ಲಾಕಗಳ ವಿವರ ಈ ಕೆಳಗಿನಂತಿದೆ.

ಮರಳು ಬ್ಲಾಕಗಳ ವಿವರ:* ಮೆ:ಎಸ್.ಕೆ ಮೈನ್ಸ್ & ಮಿನರಲ್ಸ್, ಕುಷ್ಟಗಿ ತಾಲ್ಲೂಕ್ ಮುದ್ದಲಗುಂದಿ ಗ್ರಾಮದಲ್ಲಿ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಪ್ರಶಾಂತಗೌಡ ಪಾಟೀಲ್ ಯಲಬುರ್ಗಾ ತಾಲ್ಲೂಕ್ ಕಲ್ಲೂರ್ ಗ್ರಾಮದಲ್ಲಿ 22.10.202 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ.

ನಿಲೇಶ ಮದರಕಂಡಿ ಇವರಿಗೆ ಕೊಪ್ಪಳ ತಾಲ್ಲೂಕ್ ಕೋಳೂರು ಗ್ರಾಮದಲ್ಲಿ ದಿನಾಂಕ 09.11.2022 ರಿಂದ ಐದು ವರ್ಷದ ಅವಧಿಗೆ 2 ಮರಳು ಪರವಾನಗೆಗಳು ಮಂಜೂರಾಗಿರುತ್ತದೆ. ಈರಣ್ಣ ಹೊಸಮನಿ ಇವರ ಹೆಸರಿನಲ್ಲಿ ಕುಷ್ಟಗಿ ತಾಲ್ಲೂಕ್ ಕನ್ನಾಳ-ಸಂಗನಾಳ ಗ್ರಾಮದಲ್ಲಿ ದಿನಾಂಕ 24.11.2022 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಮೆ:ವೆಂಕಟೇಶ್ವರ ಮಿನರಲ್ಸ್ ಇವರ ಹೆಸರಿನಲ್ಲಿ ಕನಕಗಿರಿ ತಾಲ್ಲೂಕ್ ನವಲಿ ಗ್ರಾಮ ದಿನಾಂಕ 03.01.2023 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ.

ಮಂಜುನಾಥ ಪಾಟೀಲ್ ಇವರ ಹೆಸರಿನಲ್ಲಿ ಕನಕಗಿರಿ ತಾಲ್ಲೂಕ್ ಉದ್ದಿಹಾಳ ಗ್ರಾಮದಲ್ಲಿ 08.03.2024 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಉದಯಕುಮಾರ ಬೇವಿನಕಟ್ಟಿ ಇವರ ಹೆಸರಿನಲ್ಲಿ ಕುಕನೂರ ತಾಲ್ಲೂಕ ಶಿರೂರ ಗ್ರಾಮದಲ್ಲಿ ದಿನಾಂಕ 13.04.2023 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಅಮರೇಗೌಡ ಇವರ ಹೆಸರಿನಲ್ಲಿ ಕನಕಗಿರಿ ತಾಲ್ಲೂಕ್ ಬುನ್ನಟ್ಟಿ ಗ್ರಾಮದಲ್ಲಿ ದಿನಾಂಕ 15.06.2023 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ.

ಬಸವರಾಜಯ್ಯ ಗೊಂಡಬಾಳ ಇವರ ಹೆಸರಿನಲ್ಲಿ ಕುಕನೂರ ತಾಲ್ಲೂಕ್ ಶಿರೂರ ಗ್ರಾಮದಲ್ಲಿ ದಿನಾಂಕ 13.07.2023 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಮಂಜುನಾಥ ಕಾಂಬಳಿ ಇವರ ಹೆಸರಿನಲ್ಲಿ ಕುಷ್ಟಗಿ ತಾಲ್ಲೂಕ್ ಮೆತಿನಾಳ ಗ್ರಾಮದಲ್ಲಿ ದಿನಾಂಕ 26.07.2023 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಮೆ:ಹಟ್ಟಿ ಗೊಲ್ಡ್ ಮೈನ್ಸ್ ಲಿ ಇವರ ಹೆಸರಿನಲ್ಲಿ ಕಾರಟಗಿ ತಾಲ್ಲೂಕ್ ಕಕ್ಕರಗೋಳ ಗ್ರಾಮದಲ್ಲಿ ದಿನಾಂಕ 27.10.2022 ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ.

ಅದೇ ರೀತಿ ಮೆ:ಬನಶಂಕರಿ ಮಿನರಲ್ಸ್ ಇವರ ಹೆಸರಿನಲ್ಲಿ ಕುಷ್ಟಗಿ ತಾಲ್ಲೂಕ್ ಬಳೂಟಗಿ ಗ್ರಾಮದಲ್ಲಿ ದಿನಾಂಕ 27.06.2024 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ರಾಮರೆಡ್ಡಪ್ಪ ಇವರ ಹೆಸರಿನಲ್ಲಿ ಕೊಪ್ಪಳ ತಾಲ್ಲೂಕ್ ಕೋಳೂರು ಗ್ರಾಮದಲ್ಲಿ ದಿನಾಂಕ 27.06.2024 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಮುರಗೆಪ್ಪ ಹೊನ್ನಕೇರಿ ಇವರ ಹೆಸರಿನಲ್ಲಿ ಕೊಪ್ಪಳ ತಾಲ್ಲೂಕ್ ಕೋಳೂರು ಗ್ರಾಮದಲ್ಲಿ ದಿನಾಂಕ 09.07.2024 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಮೆ:ಯು.ಕೆ ಕನಷ್ಟçಕ್ಷನ್ ಇವರ ಹೆಸರಿನಲ್ಲಿ ಕುಕನೂರ ತಾಲ್ಲೂಕ್ ಶಿರೂರ ಗ್ರಾಮದಲ್ಲಿ ದಿನಾಂಕ 03.10.2024 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಎ.ಎಸ್ ದೊಡ್ಡಮನಿ ಇವರ ಹೆಸರಿನಲ್ಲಿ ಕನಕಗಿರಿ ತಾಲ್ಲೂಕ್ ಕ್ಯಾರಿಹಾಳ ಗ್ರಾಮದಲ್ಲಿ ದಿನಾಂಕ 06.01.2022 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಮೆ:ಬನಶ್ರೀ ಮಿನರಲ್ಸ್ ಇವರ ಹೆಸರಿನಲ್ಲಿ ಕುಷ್ಟಗಿ ತಾಲ್ಲೂಕ್ ಮಾಟೂರ್ ಗ್ರಾಮದಲ್ಲಿ ದಿನಾಂಕ 08.10.2025 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ. ಮೆ:ಶಿವಗಂಗಾ ಎಂಟರಪ್ರೆöÊಸಿಸ್ ಇವರ ಹೆಸರಿನಲ್ಲಿ ಕನಕಗಿರಿ ತಾಲ್ಲೂಕ್ ನವಲಿ ಗ್ರಾಮದಲ್ಲಿ ದಿನಾಂಕ 28.11.2025 ರಿಂದ ಐದು ವರ್ಷದ ಅವಧಿಗೆ ಮಂಜೂರಾಗಿರುತ್ತದೆ ಎಂದು ಕೊಪ್ಪಳ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology