|

ರೋಹಿಣಿ ಸಿಂಧೂರಿ ಸಹಿತ ಮೂವರು IAS ಅಧಿಕಾರಿಗಳು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು.12.ಜೂನ್.25:- ರಜ್ಯದಲ್ಲಿ IAS ಮತ್ತು IPS ಮೂರು ಅಧಿಕಾರಿಗಳ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ರೋಹಿಣಿ ಸಿಂಧೂರಿ ಸಹಿತ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಗುರವಾರ ಆದೇಶ ಹೊರಡಿಸಿದೆ. ಎರಡು ವಾರ ಹಿಂದಷ್ಟೇ ಹೈಕೋರ್ಟ್ ಆದೇಶದ ಮೇರೆಗೆ ಮುಂಬಡ್ತಿ ನೀಡಲಾಗಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ಕರ್ನಾಟಕ ಸರ್ಕಾರ ಗುರುವಾರ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೊರ್ಸ್ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ.

ಮತ್ತೊಂದೆಡೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಕೆಎಸ್‌ಆರ್ಟಿಸಿ ಎಂಡಿಯನ್ನಾಗಿ ಅಕ್ರಂ ಪಾಷಾರನ್ನು ನೇಮಕ ಮಾಡಲಾಗಿದೆ.

ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!

2009ರ ಬ್ಯಾಚ್‌ನ ಕರ್ನಾಟಕ ಕೇಡರ್‌ಗೆ ಸೇರಿದ ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕೃಷಿ ಇಲಾಖೆ – ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ರು. ಇದೀಗ ಅವರನ್ನ ಕಾರ್ಮಿಕ ಇಲಾಖೆ ಕಾರ್ಯದರ್ಶಿಯಾಗಿ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಅಕ್ರಮ್ ಪಾಷ ಅವರನ್ನು ವರ್ಗಾವಣೆ ಮಾಡಲಾಗಿದೆ. ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಅಕ್ರಮ್ ಪಾಷರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕೊನೆಗೂ ಐಪಿಎಸ್ ಅಧಿಕಾರಿ ಡಿ ರೂಪಾಗೆ ಪ್ರಮುಖ ಹುದ್ದೆ ಕೊಟ್ಟ ಸರ್ಕಾರ ಬಿಎಂಟಿಎಫ್ಗೆ ವರ್ಗಾಯಿಸಿ ಆದೇಶ ನೀಡಿದೆ. ಜನೋಪಯೋಗಿ ಕೆಲಸಗಳಲ್ಲಿಯೂ ಅತ್ಯಂತ ಪ್ರಮುಖ ಜವಾಬ್ದಾರಿಯೊಂದನ್ನು ಬಿಎಮ್ಟಿಎಫ್ ಗೆ ಸರಕಾರ ನೀಡಿದೆ. ನ್ಯಾಯವಾಗಿ ತಮಗೆ ಸಿಗಬೇಕಾದ ಬಡ್ತಿ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ರೂಪಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

Similar Posts

Leave a Reply

Your email address will not be published. Required fields are marked *