ಬೀದರ.26.ಜುಲೈ.25:- ಬೀದರ ಜಿಲ್ಲೆಯಲ್ಲಿ ಜುಲೈ.21 ರಿಂದ ಉತ್ತಮ ಮಳೆಯಾಗುತ್ತಿದ್ದು ಯೂರಿಯಾ ಗೊಬ್ಬರ ಮುಂಗಾರು ಬೆಳೆಗಳಿಗೆ ಮೇಲಗೊಬ್ಬರಾಗಿ ರೈತರು ಉಪಯೋಗಿಸುತ್ತಿದ್ದು ಯೂರಿಯಾ ಬೇಡಿಕೆ ಇರುತ್ತದೆ, ರೈತರಿಗೆ ಹರಳೂ ರೂಪದ ಯೂರಿಯಾ ಪರ್ಯಾಯವಾಗಿ (NANO-UREA) ನ್ಯಾನೋ ದ್ರವ ರೂಪದ ಯೂರಿಯಾ ಬಳಕೆಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಬೀದರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಧಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಾಗೂ ಖಾಸಗಿ ಮಾರಾಟಗಾರರಲ್ಲಿ (NANO-UREA) ನ್ಯಾನೂ ದ್ರವ ರೂಪದ ಯೂರಿಯಾ ಲಭ್ಯವಿರುತ್ತದೆ ಹಾಗೂ IFFCO ಸಂಸ್ದೆಯವರಲ್ಲಿ 8654 Bottles ಗಳಷ್ಟು (NANO-UREA) ನ್ಯಾನೂ ದ್ರವ ರೂಪದ ಯೂರಿಯಾ ದಾಸ್ತಾನುಕರಿಸಿಲಾಗಿದೆ.
ಮುಂಗಾರು ಹಂಗಾಮಿಗೆ 13,727 MT ಯೂರಿಯಾ ರಸಗೊಬ್ಬರ ಬೇಡಿಕೆ ಇದ್ದು, 01.04.2025 ಅಂತ್ಯಕ್ಕೆ ಆರಂಭಿಕ ಶಿಲ್ಕು (OB) 4,927 ಒಖಿ ಯೂರಿಯಾ ಲಭ್ಯವಿರುತ್ತದೆ, ಎಪ್ರಿಲ್-2025 ರಿಂದ ಜುಲೈ-2025ರ ಅಂತ್ಯದವರೆಗೆ 8,365 MT ಯೂರಿಯಾ ಬೇಡಿಕೆ ಇದ್ದು 25 ಜುಲೈ-2025ರ ವರೆಗೆ 4953.95 MT ಸರಬರಾಜು ಆಗಿದ್ದು ಒಟ್ಟು 9880.95 MT ಯೂರಿಯಾ ದಾಸ್ತಾನು ಆಗಿದ್ದು, ಇದರಲ್ಲಿ 8139 MT ವಿತರಣೆಯಾಗಿರುತ್ತದೆ. ಜಿಲ್ಲೆಯಲ್ಲಿ 1363 MT ಯೂರಿಯಾ ದಾಸ್ತಾನು ಲಭ್ಯವಿರುತ್ತದೆ.
ಜಿಲ್ಲೆಯಲ್ಲಿ ರಸಗೊಬ್ಬರ ವೃತಕರು MRP ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ಹಾಗೂ ಅಧಿಕೃತ ಬಿಲ್ಲು ನೀಡದಿದ್ದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೋಳ್ಳಲಾಗುವುದು ಹಾಗೂ ಪರವಾನಗಿ ರದ್ದುಗೋಳಿಸಲಾಗುವುದು.
ನ್ಯಾನೋ ಯೂರಿಯ ಪ್ರಪಂಚದಲ್ಲೇ ಮೊಟ್ಟಮೊದಲು ವಿಶಿಷ್ಟವಾದ ಸಾರಜನಕವನ್ನು ಒದಗಿಸುವ ನ್ಯಾನೋ ತಂತ್ರಜ್ಞಾನದ ದ್ರವ ರೂಪದ ಗೊಬ್ಬರಾಗಿದ್ದು ಪರಿಸರಕ್ಕೆ ಪೂರಕವಾಗಿರುವ ಯೂರಿಯಾ ರಸಗೊಬ್ಬರ ಪ್ರಮಾಣ ಕಡಿತಗೊಳಿಸಲು ನ್ಯಾನೋ ಯೂರಿಯಾವನ್ನು ಅಭಿವೃದ್ಧಿಪಡಿಸಲಾಗಿದೆ.
ಆದರಿಂದ ಯೂರಿಯಾ ರಸಗೊಬ್ಬರ ಅಗತ್ಯವನ್ನು ಶೇಕಡಾ 50% ರಷ್ಟು ಕಡಿಮೆಗೊಳಿಸುತ್ತದೆ. ಸದರಿ ಗೊಬ್ಬರವು ಇದರ ಲಭ್ಯವು 500 ಮಿ.ಲಿ. ಬಾಟಲಿನಲ್ಲಿ ಲಭ್ಯವಿದ್ದು, ಮತ್ತು ಪ್ರತಿ ಬಾಟಿಲಿನಲ್ಲಿ 20 % ಸಾರಜನಕ ಹೊಂದಿರುತ್ತದೆ.
ನ್ಯಾನೋ ಯೂರಿಯಾವು ಭಾರತ ಸರ್ಕಾರದ ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರಲ್ಲಿ ಸೇರ್ಪಡೆಯಾಗಿದ್ದು, ನ್ಯಾನೋ ಯೂರಿಯಾವನ್ನು ಮೊದಲ ಬಾರಿಗೆ 3ನೇ ನವಂಬರ 2019 ರಲ್ಲಿ ಸಂಶೋಧನೆಗೊಂಡಿದ್ದು, ನಂತರ ತುಂಬಾ ಸಂಶೋಧನೆಗಳಿಂದ ಧೃಡಪಟ್ಟು ಸದರಿ ದ್ರವರೂಪದ ನ್ಯಾನೋ ಗೊಬ್ಬರವನ್ನು ಜೂನ-15ನೇ 2021 ರಲ್ಲಿ ವಾಣಿಜ್ಯವಾಗಿ ತಯಾರಿಸಿ ಬಿಡುಗಡೆ ಮಾಡಲಾಗಿದೆ.
ನ್ಯಾನೋ ಯೂರಿಯಾದ ಉಪಯೋಗಗಳು: ನ್ಯಾನೋ ಯೂರಿಯಾ ಬಳಕೆಯಿಂದ ಯೂರಿಯಾ ರಸಗೊಬ್ಬರದ ಶೇಕಡಾ 10 ರಷ್ಟು ಪ್ರಮಾಣವನ್ನು ಕಡಿತಗೊಳಿಸುತ್ತದೆ. ಸಸ್ಯ ಸಾರಜನಕ ಪೆÇೀಷಕಾಂಶ ಪೂರೈಸುವಲ್ಲಿ ನ್ಯಾನೋ ಯೂರಿಯಾವನ್ನು 45 ಕೆ.ಜಿ ಯೂರಿಯಾ ರಸಗೊಬ್ಬರ ಸಮವಾಗಿದೆ. ನ್ಯಾನೂ ಯೂರಿಯಾ ಬಳಸುವುದರಿಂದ ಶೇ 5 ರಿಂದ 10 ರಷ್ಟು ಇಳುವರಿಯನ್ನು ಹೆಚ್ಚಿಸಬಹುದಾಗಿದೆ. ಇದರಿಂದ ಸಾರಜನಕ ರಸಗೊಬ್ಬರಗಳಿಗೆ ತಗಲುವ ಶೇಕಡ 10ರಷ್ಟು ವೆಚ್ಚ ಕಡಿಮೆಯಾಗಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ.
ನ್ಯಾನೂ ಯೂರಿಯಾದಿಂದ ಶೇಕಡ 50ರಷ್ಟು ಸಾರಜನಕ ರಸಗೊಬ್ಬರದ ಉತ್ಪನ್ನೆಯನ್ನು ಕಡಿಮೆ ಮಾಡಬಹುದು. ಭಾರತ ಸರ್ಕಾರವು ನೀಡುವ 750-800 ಪ್ರತಿ ಕೆ.ಜಿಗೆ ಯೂರಿಯಾ ರಸಗೊಬ್ಬರ ಸಬ್ಸಿಡಿ ಹಣವನ್ನು ಉಳಿತಾಯ ಮಾಡಬಹುದು. ನ್ಯಾನೋ ಯೂರಿಯಾವನ್ನು ಕೀಟನಾಶಕ ಮತ್ತು ರೋಗ ನಾಶಕದ ಜೊತೆಗೆ ಮಿಶ್ರಣಮಾಡಿ ಬಳಸಬಹುದಾಗಿದ್ದು, ಹೀಗೆ ಮಾಡಿದರಿಂದ ಸಿಂಪರಣೆಗೆ ತಗಲುವ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆಂದು ಅವರು ತಿಳಿಸಿದ್ದಾರೆ.
ನ್ಯಾನೋ ಯೂರಿಯಾವನ್ನು ಬಳಸುವುದು ಹೇಗೆ?: ಸಿಂಪರಣೆಗೂ ಮುನ್ನ ನ್ಯಾನೂ ಯೂರಿಯಾ ಬಾಟಲನ್ನು ಚೆನ್ನಾಗಿ ಅಲ್ಲಾಡಿಸಬೇಕು. ಮುಂಜಾನೆ ಅಥವಾ ಸಾಯಂಕಾಲ ಸಿಂಪರಣೆ ಮಾಡಬೇಕು. ನ್ಯಾನೋ ಯೂರಿಯಾವನ್ನು ಕೀಟನಾಶಕ/ರೋಗನಾಶಕ ಜೊತೆಗೆ 2/4 ಮಿ.ಲಿಟರ ಪ್ರತಿ ಬಾಟಲ ನೀರಿಗೆ ಮಿಶ್ರಣಮಾಡಿ ಸ್ಪ್ರೇ ಪಂಪನಿಂದ 2ಹಂತದಲ್ಲಿ ಸಿಂಪರಣೆ ಮಾಡಬೇಕು.
ಒಂದನೇ ಹಂತ ಬೆಳೆಗಳು ಬಿತ್ತಿದ 20 ದಿವಸಗಳ ನಂತರ ಎರಡನೇ ಹಂತ ಮೊದಲು ಸಿಂಪರಣೆಮಾಡಿದ 2/3 ವಾರಗಳ ನಂತರ ಅಥವಾ ಹೂ ಬಿಡುವ ಒಂದುವಾರದ ಮುಂಚೆ ಸಿಂಪರಣೆ ಮಾಡಬೇಕೆಂದು ರೈತಬಾಂಧವರು ಸಲಹೆಗಳನ್ನು ಅನುಸರಿಸಬೇಕೆಂದು ತಿಳಿಸಿದ್ದಾರೆ.