ಹುಲಸೂರ.19.ಏಪ್ರಿಲ್.25:- ಹುಲಸೂರ: ಸಮೀಪದ ಭಾಲ್ಕಿ ತಾಲೂಕಿನ ಕೇಸರಜವಳಗಾ ಗ್ರಾಮದಲ್ಲಿರುವ ಭಾಲ್ಕಿಯ ಖಾಸಗಿ ಬ್ಯಾಂಕ್ ನ ಸಿಬ್ಬಂದಿಗಳು ಸಾಲದ ಕಂತಿನ ಹಣ ವಸೂಲಿಗೆ ಬಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ರೈತರೊಬ್ಬರ ಮೇಲೆ ಎ.17ರ ಗುರುವಾರ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಭಾಲ್ಕಿ ತಾಲೂಕಿನ ಕೇಸರಜವಳಗಾ ಗ್ರಾಮದ ರೈತ ರಾಜಕುಮಾರ್ ನಾಗಪ್ಪ ಮಟ್ಟೆ ಭಾಲ್ಕಿಯಲ್ಲಿರುವ ಬ್ಯಾಂಕ್‌ನಲ್ಲಿ 39 ಸಾವಿರ ರೂ. ಸಾಲ ಪಡೆದಿದ್ದರು.
ರಾಜಕುಮಾರ್ ಇಲ್ಲಿಯವರೆಗೆ ಪ್ರತಿ ವಾರ 835 ರೂ. ಕಂತಿನಂತೆ 36 ರಿಂದ 37 ಸಾವಿರ ಸಾಲ ಮರು ಪಾವತಿ ಮಾಡಿರುವುದಾಗಿ ತಿಳಿದು ಬಂದಿದೆ. ಇನ್ನು ಕೇವಲ 3 ಕಂತಿನ ಸಾಲ ಉಳಿದಿದ್ದು, ಸೂಕ್ತ ಸಮಯದಲ್ಲಿ ಪಾವತಿಸಿದಿದ್ದಕ್ಕೆ ಬ್ಯಾಂಕ್ ಸಿಬ್ಬಂದಿಗಳು ಹಲ್ಲೆ, ಮಾಡಿರುವುದಾಗಿ ಆರೋಪಿಸಿದ್ದಾರೆ.
ಹಣ ಕೊಡುತ್ತೇನೆ ಎಂದರೂ ಕಟ್ಟಿಗೆಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬರುತ್ತಿದ್ದು, ಗುರುವಾರ ಸಾಲ ಪಡೆದ ರೈತ ತಮ್ಮ ಜಮೀನಿನಲ್ಲಿ నగిలు ಹೊಡೆಯುತ್ತಿರುವ ವೇಳೆ ವಸೂಲಿಗೆ ಬಂದ ಬ್ಯಾಂಕ್ ಸಿಬ್ಬಂದಿ ಆವಾಚ್ಯ ಶಬ್ದಗಳಿಂದ ಬೈದಿದ್ದಾರೆ. ವಸೂಲಿಗೆ ಬಂದ ಬ್ಯಾಂಕ್ ಸಿಬ್ಬಂದಿ ಸುನೀಲ್ ಸೇರಿ ನಾಲ್ವರಿಂದ ಹಿಗ್ಗಾಮುಗ್ಗ ಥಳಿಸಿ ಹಲ್ಲೆ ಮಾಡಿರುವುದಾಗಿ ರೈತನಿಂದ ಮಾಧ್ಯಮಗಳಿಗೆ ಮಾಹಿತಿ ನೀಡಿ ಗಂಭೀರ ಆರೋಪ ಮಾಡಿದ್ದಾರೆ.
ಮೆಹಕರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ.