03/08/2025 3:20 PM

Translate Language

Home » ಲೈವ್ ನ್ಯೂಸ್ » ರಾಷ್ಟ್ರೀಯ ಡೇಂಗ್ಯೂ ಜನಜಾಗೃತಿ ಜಾಥಾಕ್ಕೆ ಚಾಲನೆ ಆರೋಗ್ಯ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದಾಗ ಸಹಕರಿಸಲು ಮನವಿ-ಡಿಎಚ್‌ಓ ಡಾ.ಶಂಕ್ರಪ್ಪ ಬೊಮ್ಮಾ

ರಾಷ್ಟ್ರೀಯ ಡೇಂಗ್ಯೂ ಜನಜಾಗೃತಿ ಜಾಥಾಕ್ಕೆ ಚಾಲನೆ ಆರೋಗ್ಯ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದಾಗ ಸಹಕರಿಸಲು ಮನವಿ-ಡಿಎಚ್‌ಓ ಡಾ.ಶಂಕ್ರಪ್ಪ ಬೊಮ್ಮಾ

Facebook
X
WhatsApp
Telegram

ಬೀದರ.17.ಮೇ.25:- ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದು, ಡೇಂಗ್ಯೂ/ಚಿಕ್ಕAಗುನ್ಯಾ ಹರಡಿಸುವ ಸೊಳ್ಳೆಗಳ ನಿರ್ಮೂಲನೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಹಾಯಕರನ್ನು ಪ್ರತಿ ತಿಂಗಳು ಮೊದಲನೆ ಶುಕ್ರವಾರ ಮತ್ತು ಮೂರನೇ ಶುಕ್ರವಾರದಂದು ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯವನ್ನು ನಿರಂತರವಾಗಿ ಕೈಕೊಳ್ಳಲಾಗುತ್ತಿದ್ದು, ಆರೋಗ್ಯ ಸಿಬ್ಬಂದಿಗಳು ತಮ್ಮ ಮನೆಗಳಿಗೆ ಭೆಟ್ಟಿ ನೀಡುವ ಸಿಬ್ಬಂದಿಗಳಿಗೆ ಸಹಕಾರ ನೀಡಿ ಅವರ ಸೂಚನೆ ಅನುಸಾರ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ನಿಯಂತ್ರಣಕ್ಕಾಗಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಃಶಂಕ್ರಪ್ಪ ಬೊಮ್ಮಾ ತಿಳಿಸಿದರು.
ಅವರು ಶುಕ್ರವಾರದಂದು ರಾಷ್ಟ್ರೀಯ ಡೇಂಗ್ಯೂ ದಿನಾಚರಣೆ ನಿಮಿತ್ಯ ಬೀದರ ನಗರದಲ್ಲಿ ಸರಕಾರಿ ಶುಶ್ರೂಷ ಕಾಲೇಜು ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ “ಜನಜಾಗೃತಿ ಜಾಥಾ”ಕ್ಕೆ ಹಸಿರು ಬಾವೂಟದ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.


ಸಾರ್ವಜನಿಕರು ಆರೋಗ್ಯ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದಾಗ ಲಾರ್ವಾ ಸಮೀಕ್ಷೆ ಮತ್ತು ನಿರ್ಮೂಲನೆಗಾಗಿ ಸಹಕಾರ ನೀಡುವುದು. ಗ್ರಾಮೀಣ ಪ್ರದೇಶದಲ್ಲಿಜ್ವರ ಸಮೀಕ್ಷೆ ಹಾಗೂ ಲಾರ್ವಾ ಸಮೀಕ್ಷೆ ನಿರ್ಮೂಲನೆ ಕಾರ್ಯವನ್ನು ಆರೋಗ್ಯ ಸಹಾಯಕರಿಂದ ಹಾಗೂ ಆಶಾ ಕಾರ್ಯಕರ್ತರಿಂದ ನಿರಂತರವಾಗಿ ಚಟುವಟಿಕೆಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.


ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ರಾಜಶೇಖರ್ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಡೆಂಗೀ/ಚಿಕ್ಕುAಗುನ್ಯಾ ನಿಯಂತ್ರಣಕ್ಕಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗಾಗಿ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕಾಗಿ ಅಂತರ್ ಇಲಾಖಾ ಸಮನ್ವಯದೊಂದಿಗೆ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ಜನಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳಾದ ಜನವಾಡಾ ರಸ್ತೆ, ನಗರದ ಪ್ರಮುಖ ಡಾ.ಅಂಬೇಡ್ಕರ ವೃತ್ತದಲ್ಲಿ ಮಾನವ ಸರಪಳಿಯೊಂದಿಗೆ ಜನಜಾಗೃತಿ ಜಾಥವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣದಲ್ಲಿ ಮುಕ್ತಾಯಗೊಳಿಸಲಾಯಿತು.


ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯ ಅಧಿಕಾರಿ ರಾಜಶೇಖರ್ ಪಾಟೀಲ್, ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಅನೀಲ್ ಚಿಂತಾಮಣಿ, ಡಾ.ಶಿವಶಂಕರ.ಬಿ., ಡಾ.ದಿಲೀಪ್ ಡೋಂಗ್ರೆ, ಸಂಗಪ್ಪಾ ಕಾಂಬ್ಳೆ, ಅನೀತಾ, ಓಂಕಾರ್ ಮಲ್ಲಿಗೆ, ಜೇತುಲಾಲ ಪವಾರ್, ಮಹ್ಮದ ಅಬುಬಕರ್ ಮುಹ್ಮದ್ ಅಬ್ದುಲ್ ರಫೀ, ಕಾಶಿನಾಥ, ಎಂಡಿ ಸಮಿಯುದ್ದಿನ್, ಸತೀಶ ಪಾಂಡೆ, ವೀರಶಟ್ಟಿ ಚೆನಶಟ್ಟಿ, ಮಹ್ಮದ ಸಮಿಉದ್ದಿನ , ಶಿವರಾಜ ಸಾಗರ, ಹಾದಿ ತಬ್ರೇಜ್, ದೇವಿದಾಸ ಗಂಗೆನೋರ್, ಸೋನಾಬಾಯಿ, ಬಸವರಾಜ, ಅನೀಲ್‌ಜಾಧವ, ಮಹೆಬುಬ ಮಿನ್ಯ, ಜಾವೇದ್ ಕಲ್ಯಾಣಕರ್ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕಾರ್ಯಕ್ರಮಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!