ಬೆಂಗಳೂರು.04.ಮೇ.25:- ಅರೋಗ್ಯ ಏಲಾಖೆದಡಿಯಲ್ಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಾರ್ಯಕ್ರಮ ರಾಜ್ಯ ಮಟ್ಟದ ಮಾನವ ಸಂಪನ್ಮೂಲ ರೂಪ್ 2024-25 ಅನುಮೋದನೆಯಂತೆ ಸಣ್ಣ ಅತಿ ಸಣ್ಣ ಮಕ್ಕಳ ಆರೋಗ್ಯ ಕಾರ್ಯಕ್ರಮದ ಎನ್.ಬಿ.ಎಸ್.ಯು ವಿಭಾಗದಲ್ಲಿ ಒಟ್ಟು 12 ಶುಶ್ರೂಷಕ ಅಧಿಕಾರಿಗಳ ಹುದ್ದೆಗಳು ಅನುಮೋದನೆಯಾಗಿದ್ದು.
ಸದರಿ ಹುದ್ದೆಗಳನ್ನು ರೊಷ್ಟರ್ ಕಂ ಮೆರಿಟ್ ಆಧರಿಸಿ ನಿಬಂಧನೆಗೊಳಪಟ್ಟು ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಅಪಲೊಡ್ ಆಗಿರುವ ಅರ್ಜಿಗಳಿಗೆ ರೊಷ್ಟರ್ ಕಂ ಮೆರಿಟ್ ಅಳವಡಿಸಿ ತಯಾರಿಸಿದ ರೊಷ್ಟರ್ ಸಂಖ್ಯೆ 09,10&14ರ ಮೆರಿಟ್ ಪಟ್ಟಿಯ ಮುಂದಿನ 01:10 ಅನುಪಾತದಲ್ಲಿನ ಅಭ್ಯರ್ಥಿಗಳನ್ನು ದಿನಾಂಕ:05.05.2025 ರಿಂದ 09.05.2025ರ ಸಂಜೆ 04.00 ಗಂಟೆಯವರೆಗೆ ಕಚೇರಿ ದಿನಗಳಲ್ಲಿ ಖುದ್ದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಠಡಿ ಸಂಖ್ಯೆ:101, ಜಿಲ್ಲಾ ಆಡಳಿತ ಭವನ, ಗದಗ ಇಲ್ಲಿಗೆ ತಮ್ಮ ಮೂಲ ದಾಖಲಾತಿಗಳೊಂದಿಗೆ ಪರಿಶೀಲನಗೆ ಹಾಜರಾಗಲು ಇ-ಮೇಲ್ ಮೂಲಕ ಆಹ್ವಾನಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ, ಕಚೇರಿಯ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿದೆ. ಎಂದು ಸದಸ್ಯ ಕಾರ್ಯದರ್ಶಿಗಳು ಆಯ್ಕೆ ಸಮಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಇವರು ತಿಳಿಸಿರುತ್ತಾರೆ.