ರಾಜ್ಯದ ಸರ್ಕಾರಿ ಕಾಲೇಜು’ಗಳಲ್ಲಿ ಅರ್ಹ ಅತಿಥಿ ಉಪನ್ಯಾಸಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲಾಗಿದ್ದು, ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭಿಸಲಾಗಿದೆ.
ಹುದ್ದೆಗಳು:
1) ಕನ್ನಡ ಉಪನ್ಯಾಸಕರು-01,
2) ಆಂಗ್ಲ ಉಪನ್ಯಾಸಕರು-01,
3) ಭೌತಶಾಸ್ತ್ರ ಉಪನ್ಯಾಸಕರು-01,
4) ರಸಾಯನಶಾಸ್ತ್ರ-01,
5) ಗಣಿತ-01,
6) ಜೀವಶಾಸ್ತ್ರ-01.
ಅರ್ಹತೆ :
ಅರ್ಹ ಅಭ್ಯರ್ಥಿಗಳು ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಪೂರ್ಣಗೊಳಿಸಿರಬೇಕು. ಅತಿಥಿ ಉಪನ್ಯಾಸಕರಿಗೆ ಮಾಹೆಯಾನ ರೂ.18,150/- ಗೌರವಧನ ನೀಡಲಾಗುವುದು.
ವಿಳಾಸ :
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಪ್ರಾಂಶುಪಾಲರು, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ (ಪ.ಪಂ)-485, ವಡ್ಡಿನಕಟ್ಟೆ, ಸಂಡೂರು (ತಾ), ಬಳ್ಳಾರಿ (ಜಿ) ಇಲ್ಲಿಗೆ ಆಗಸ್ಟ್ 20 ರೊಳಗಾಗಿ ಸಲ್ಲಿಸಬೇಕು.
ಸಂಡೂರು ತಾಲ್ಲೂಕಿ ನವಡ್ಡಿನಕಟ್ಟೆ ಗ್ರಾಮದ ಕಿತ್ತೂರುರಾಣಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ವಿಜ್ಞಾನ ವಿಭಾಗಕ್ಕೆ
ಹೆಚ್ಚಿನ ಮಾಹಿತಿಗಾಗಿ :
ಶಾಲೆಯ ಇ-ಮೇಲ್ ವಿಳಾಸ: kreiskrcrs0485@gmail.com ಅಥವಾ ಮೊ.9611279510 ಗೆ ಸಂಪರ್ಕಿಸಬಹುದು ಎಂದು ಸಹಾಯಕ ಆಯುಕ್ತ ಪಿ.ಪ್ರಮೋದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.