ಬೆಂಗಳೂರು.25.ಜುಲೈ.25:- ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಎಪಿಸಿ ಹಾಗೂ ಪಿಸಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಸಂಬಂಧ ಪೊಲೀಸ್ ಇಲಾಖೆಯಿಂದ ವರ್ಗಾವಣೆ ಆದೇಶ ಹೊರಡಿಸಿದ್ದು, 24 ಎಪಿಸಿ ಅವರುಗಳನ್ನು ಸ್ವಂತ ಕೋರಿಕೆಯ ಮೇರೆಗೆ ಸೇವಾ ಜ್ಯೇಷ್ಠತೆಯನ್ನು ಬಿಟ್ಟುಕೊಡುವ ಷರತ್ತಿಗೊಳಪಟ್ಟು ಅಂತರ್ ಜಿಲ್ಲಾ ವರ್ಗಾವಣೆ ಮಾಡಲಾಗಿದೆ ಎಂದಿದೆ.
ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಗಳ ಅಂತರ ಜಿಲ್ಲಾ ವರ್ಗಾವಣೆಗಾಗಿ ಸರ್ಕಾರವು ಉಲ್ಲೇಖ-1 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ವರ್ಗಾವಣೆ) (ವಿಶೇಷ ನಿಯಮಗಳು 2022)ನ್ನು ಹೊರಡಿಸಿದ್ದು, ಸದರಿ ವರ್ಗಾವಣಾ ನಿಯಮಗಳನ್ನು ಆಧರಿಸಿ ಎಲ್ಲಾ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ವರ್ಗಾವಣೆ ಅರ್ಜಿಗಳನ್ನು ಈ ಕುರಿತಂತೆ ಜಾರಿಗೊಳಿಸಲಾದ ವರ್ಗಾವಣೆ ಪೋರ್ಟಲ್‌ನಲ್ಲಿಯೇ ಸಲ್ಲಿಸಲು ಉಲ್ಲೇಖ-2 ರಲ್ಲಿ ತಿಳಿಯಪಡಿಸಲಾಗಿರುತ್ತದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು 2022 ರಲ್ಲಿ ನಿರ್ಧಿಷ್ಟಪಡಿಸಿರುವ ನಿಬಂಧನೆಗಳನ್ನು ಒಳಗೊಂಡಂತೆ ಹಾಗೂ ಉಲ್ಲೇಖ-3 ರ ಸರ್ಕಾರದ ಆದೇಶದಲ್ಲಿ ಸೂಚಿಸಿರುವ ಮಾರ್ಗಸೂಚಿಯನ್ವಯ ಅಂತರ ಜಿಲ್ಲಾ ಘಟಕ ವರ್ಗಾವಣೆ ಕುರಿತಂತೆ ಇಲಾಖೆಯಿಂದ ರೂಪಿಸಲಾಗಿರುವ ಅಧಿಕೃತ ಆನ್‌ಲೈನ್ ಪೋರ್ಟಲ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಸ್ವಂತ ಕೋರಿಕೆ ಮೇರೆಗೆ, ಸ್ವಂತ ಖರ್ಚಿನಲ್ಲಿ ಹಾಗೂ ಸೇವಾ ಜೇಷ್ಠತೆಯನ್ನು ಬಿಟ್ಟುಕೊಡುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಸಾಮಾನ್ಯ ವರ್ಗದ ಪ್ರಕರಣದಡಿ 10 ವರ್ಷಗಳ ಮೇಲ್ಪಟ್ಟು ಸೇವೆಯನ್ನು ಪೂರ್ಣಗೊಳಿಸಿರುವ ಈ ಕೆಳಗೆ ನಮೂದಿಸಿರುವ ಎಪಿಸಿ ರವರುಗಳನ್ನು ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಆದೇಶಿಸಲಾಗಿದೆ.


